ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರಿಂದ ಪತ್ರಿಕಾಗೋಷ್ಠಿವಿಧಾನಸಭಾ ಚುನಾವಣೆ: ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ…!!!

Listen to this article

ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರಿಂದ ಪತ್ರಿಕಾಗೋಷ್ಠಿವಿಧಾನಸಭಾ ಚುನಾವಣೆ: ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ

ಕೊಪ್ಪಳ : ಮೇ 10ರಂದು ಮತದಾನ ಮತ್ತು ಮೇ 13ರಂದು ಮತ ಎಣಿಕೆ ಸುಗಮವಾಗಿ ಸಾಗಿ ವಿಧಾನಸಭಾ ಚುನಾವಣೆ-2023ರ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೇ 8ರಂದು ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಈ ವಿಧಾನಸಭಾ ಚುನಾವಣೆಗೆ 5,66,381 ಪುರುಷರು ಹಾಗೂ 5,70,407 ಮಹಿಳೆಯರು ಮತ್ತು ಇತರೆ 50 ಸೇರಿ ಒಟ್ಟು 11,36,838 ಮತದಾರರು ಮತದಾನಕ್ಕೆ ಅರ್ಹರಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿನ ಒಟ್ಟು 11,36,838 ಮತದಾರರ ಪೈಕಿ 30,511 ಯುವ ಮತದಾರರು, 14,145 ವಿಕಲಚೇತನರು, 80 ವರ್ಷ ಮೇಲ್ಪಟ್ಟ 18,309 ಮತ್ತು 536 ಸೇವಾ ಮತರರಿದ್ದಾರೆ.


ಜಿಲ್ಲೆಯಲ್ಲಿ 28 ಮಾದರಿ ಮತಗಟ್ಟೆಗಳು, 12 ಸಖಿ ಮತಗಟ್ಟೆಗಳು, ತಲಾ 5 ವಿಶೇಷಚೇತನರ ಮತಗಟ್ಟೆಗಳು ಮತ್ತು ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲಾ 1,322 ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿಕಲಚೇತನರಿಗೆ ರ‍್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗೆ ಅನುಕೂಲವಾಗಲು ಪ್ರತಿ ಮತಟ್ಟೆಗಳಲ್ಲಿ ಗಾಲಿ ಕುರ್ಚಿ ಮತ್ತು ಭೂತಗನ್ನಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರತಿ ಮತಗಟ್ಟೆಗಳಲ್ಲಿ ಅಂಧ ಮತದಾರರಿಗೆ ಅನುಕೂಲವಾಗಲು ಬ್ರೈಲ್ ಮಾದರಿ ಮತಪತ್ರಗಳನ್ನು ಇರಿಸಲಾಗಿದೆ. ಅಂಧ ಮತದಾರರು ಮಾದರಿ ಬ್ರೈಲ್ ಮತಪತ್ರಗಳ ಸಹಾಯದೊಂದಿಗೆ ಮತಚಲಾಯಿಸಬಹುದಾಗಿದೆ.
ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್, ಸಿಎಪಿಎಫ್, ಮೈಕ್ರೋ ಆಬ್ಜರ್ವರ್‌ಗಳ ನೇಮಕಾತಿ ಮಾಡಲಾಗಿದೆ. ಜಿಲ್ಲೆಯಲ್ಲಿನ ಎಲ್ಲಾ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ಮತ್ತು ಪ್ರತಿ ಮನೆಗಳಿಗೆ ಮತದಾರರ ಮಾರ್ಗದರ್ಶಿಗಳನ್ನು ಹಂಚಿಕೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಏಪ್ರಿಲ್ 29ರಿಂದ ಮೇ 7ರವರೆಗೆ 3,91,40,900 ನಗದು ಜಪ್ತು ಮಾಡಲಾಗಿದೆ. 47,43,403.46 ಮೌಲ್ಯದ 10914.88 ಲೀಟರ್ ಮದ್ಯೆ, 7,40,000 ರೂ.ಮೌಲ್ಯದ 0.124088 ಕೆ.ಜಿ.ಬಂಗಾರ, 1,36,500 ರೂ.ಮೌಲ್ಯದ 2.395 ಕೆ.ಜಿ.ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. 19,03,696 ರೂ.ಮೌಲ್ಯದ 45807 ಸಾಮಗ್ರಿಗಳನ್ನು ಜಪ್ತು ಮಾಡಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್‌ಗಳಿಂದ 33, ಪೊಲೀಸ್ ಇಲಾಖೆಯಿಂದ 9 ಮತ್ತು ಅಬಕಾರಿ ಇಲಾಖೆಯಿಂದ 46 ಪ್ರಕರಣಗಳು ದಾಖಲಾಗಿವೆ.
ಕೊಪ್ಪಳ ಜಿಲ್ಲೆಯ 05 ವಿಧಾನಸಭಾ ಕ್ಷೇತ್ರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಮತ್ತು ಮುಕ್ತ, ಶಾಂತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಮೇ 08ರ ಸಂಜೆ 05 ಗಂಟೆಯಿಂದ ಮೇ 10ರ ರಾತ್ರಿ 11 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯೆ ತಯಾರಿಕೆ, ಮಾರಾಟ, ಸಂಗ್ರಹಣೆ ಹಾಗೂ ಸಾಗಣೆ ನಿರ್ಬಂಧಿಸಲಾಗಿದೆ.
ಸಿವಿಜಿಲ್‌ನಲ್ಲಿ ಒಟ್ಟು 459 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಚುನಾವಣಾಧಿಕಾರಿಗಳು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ.
ಮೇ 13ರಂದು ಮತ ಎಣಿಕೆಯು ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಮತಚಲಾವಣೆಗೊಂಡ ಮತಯಂತ್ರಗಳನ್ನು ಇರಿಸಲಾಗುವ ಭದ್ರತಾ ಕೊಠಡಿಗಳಿಗೆ 03 ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಉಪಸ್ಥಿತರಿದ್ದರು…

ವರದಿ. ಸಂಗೀತ ಪಾಟೀಲ್, ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend