ಬಿಸಿಲಾಘಾತದ ಬಗ್ಗೆ ಜಾಗೃತಿ ಇರಲಿ -ಟಿ.ಹೆಚ್.ಓ ಡಾ.ಬಿ.ವಿ.ಗಿರೀಶ್…!!!

Listen to this article

ಬಿಸಿಲಾಘಾತದ ಬಗ್ಗೆ ಜಾಗೃತಿ ಇರಲಿ
-ಟಿ.ಹೆಚ್.ಓ ಡಾ.ಬಿ.ವಿ.ಗಿರೀಶ್

ಚಿತ್ರದುರ್ಗ: ಈ ಬಾರಿ ಬೇಸಿಗೆ ಕಾಲದ ಉಷ್ಣಾಂಶ ಹೆಚ್ಚಾಗಿದೆ. ಬಿಸಿಲಾಘಾತದ ಬಗ್ಗೆ ಜಾಗೃತಿಯಿಂದ ಇರಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಬುಧವಾರ ಗುಡ್ಡದ ರಂಗವ್ವನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಬಿಸಿಲಾಘಾತದ ಬಗ್ಗೆ ಮುನ್ನೆಚ್ಚರಿಕೆಯ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬಿಸಿಯಾದ ಗಾಳಿ ಶಾಖ ತರಂಗಗಳಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಶಾಖ ತರಂಗಗಳು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಹೆಚ್ಚು ನೀರು ಕುಡಿಯುಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ಹೆಚ್ಚು ನೀರನ್ನು ಆಗಾಗ ಕುಡಿಯುತ್ತಿರಬೇಕು. ಬಾಯರಿಕೆ ನಿರ್ಜಲೀಕರಣದ ಲಕ್ಷಣವಾಗಿರುತ್ತದೆ. ಉಪ್ಪು ಸಕ್ಕರೆ ದ್ರಾವಣ ಕುಡಿದು ಪುನರ್ಜಲೀಕರಣ ಮಾಡಿಕೊಳ್ಳಬೇಕು, ಕೆಲಸಗಳನ್ನು ಬೆಳಿಗ್ಗೆ ಸಾಯಂಕಾಲ ತಂಪಿನ ಸಮಯದಲ್ಲಿ ಮಾಡಿಕೊಳ್ಳಬೇಕು. ವಿನಾ ಕಾರಣ ಬಿಸಿಲಿನಲ್ಲಿ ಸುತ್ತಾಡಬಾರದು ಶರೀರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಬಿಸಿ ಗಾಳಿಯ ಒತ್ತಡ ಹಾಗು ಬಿಸಿ ಗಾಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಎಲ್ಲರಿಗೂ ಇರುತ್ತದೆ. ನವಜಾತ ಶಿಶು, ಗರ್ಭಿಣಿ ಬಾಣಂತಿ ಮತ್ತು ಚಿಕ್ಕ ಮಕ್ಕಳು ವಯೋವೃದ್ದರಿಗೆ ಹೆಚ್ಚಿನ ಕಾಳಜಿ ಮಾಡಬೇಕು ಎಂದರು.
ಏಪ್ರಿಲ್ 26 ರಂದು ಚಿತ್ರದುರ್ಗ ಲೊಕಸಭಾ ಕ್ಷೇತ್ರದ ಸಂಸದರ ಆಯ್ಕೆ ಮತದಾನ ನಡೆಯಲಿದೆ. ಮತದಾನದಲ್ಲಿ ಎಲ್ಲರೂ ಭಾಗವಹಿಸಿ, ಆಮಿಷಗಳಿಗೆ ಬಲಿಯಾಗದೆ ನಿಮ್ಮಷ್ಟದಂತೆ ಮತ ಚಲಾಯಿಸಿ, ಬಲಿಷ್ಠ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಡಾ.ಬಿ.ವಿ.ಗಿರೀಶ್ ಹೇಳಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿ ರಂಗನಾಥ ರೆಡ್ಡಿ, ಪ್ರವೀಣ್, ಪವನ್ ಆರೋಗ್ಯ ಸುರಕ್ಷತಾಧಿಕಾರಿ ಮಂಜುಳಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಪ್ರದೀಪ್, ಚಿತ್ರದುರ್ಗ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend