ಜಿಲ್ಲಾಧಿಕಾರಿ ನಡೆ-ಹಳ್ಳಿ-ಕಡೆ ಕಣ್ಣಕುಪ್ಪೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ’ ಕಾರ್ಯಕ್ರಮಕ್ಕೆ ಚಾಲನೆ.!!

Listen to this article

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಲೂರು ತಾಲ್ಲೂಕಿನ
ಕಣಕುಪ್ಪೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಜಿಲ್ಲಾಧಿರಿಗಳ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಮಸ್ಯೆಗಳೇ ಹರಿದು ಬಂದವು. ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣಕ್ಕೆ ಕರಡಿಹಳ್ಳಿ ಗ್ರಾಮದಿಂದ ಕಣಕುಪ್ಪೆ ಮಾರ್ಗವಾಗಿ ಆಂಧ್ರದ ಜಾಜರಕಲ್ಲು ವರೆಗೆ ಜನ, ಜಾನುವಾರು, ವಾಹನ ಸಂಚಾರಕ್ಕೆ ಸರಿಯಾದ ರಸ್ತೆ ನಿರ್ಮಾಣ ಮಾಡಿ, ಡಾಂಬರೀಕರಣ-ಕ್ಕೆ ಮನವಿ ಮಾಡಿದರು. ಕಣಕುಪ್ಪೆ ಗ್ರಾಮದಿಂದ ಆಂಧ್ರದ ಹೊಸಗುಡ್ಡ, ಪುಲಕುರ್ತಿ, ಶಿರೋಕೊಳವರೆಗೆ ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ಮಾಡುವುದು, ಕಣಕುಪ್ಪೆ ಗಡಿಯಿಂದ ಮುರಡಿ ಗ್ರಾಮ, ಸಮುದಾಯ ಭವನ ನಿರ್ಮಾಣ, ಮಹಿಳೆ ಮತ್ತು ಪುರುಷರಿಗೆ ಶೌಚಾಲಯ ನಿರ್ಮಾಣಕ್ಕೆ ಅಹವಾಲು
ಸಲ್ಲಿಸಿದರು. ಹೊಸ ಗ್ರಾಮ ಸೃಷ್ಟಿ ಮಾಡಬೇಕಾದರೆ ಏನೆಲ್ಲ ಸೌಲಭ್ಯಗಳಿರಬೇಕು. ಏನೆಲ್ಲವನ್ನು ಒಳಗೊಂಡಿ ರಬೇಕು? ಕುಡಿವ ನೀರು, ಚರಂಡಿ, ಲೈಬ್ರರಿ, ರಸ್ತೆ, ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ಮಹಿಳೆಯರಿಗೆ
ಶೌಚಾಲಯ ನಿರ್ಮಾಣ, ಝಗಮಂದಿರ, ಕಾಯಂ ಗೋಶಾಲೆ, ಪಶುಆಸ್ಪತ್ರೆ, ಆಶ್ರಯ ಮನೆಗಳ ಸಮುಚ್ಚಯ, ಪ್ರವಾಸಿ ಮಂದಿರ, ಓವರ್‌ಹೆಡ್ ಟ್ಯಾಂಕ್, ದೇವಸ್ಥಾನಕ್ಕೆ ದ್ವಾರಬಾಗಿಲು…. ಇಷ್ಟು ಸಾಕು ಅನ್ನಿಸುತ್ತೆ. ಶನಿವಾರ ಚಿತ್ರದುರ್ಗ ಜಿಲ್ಲೆಯ ಗಡಿಯಂಚಿನ ಗಣಕುಪ್ಪೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಕೈಗೊಂಡ ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರಿಂದ ಹರಿದು ಬಂದ ಸೌಲಭ್ಯ ಕೋರಿಕೆಯ ಮಹಾಪೂರವಿದು. ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಸಿ, ತಾಲೂಕು ಆರೋಗ್ಯ ಅಧಿಕಾರಿ ಎಲ್ಲರೂ ಮಹಿಳೆಯರೇ ಆಗಿದ್ದರಿಂದ ಹೆಣ್ಮಕ್ಕಳ ಅಧಿಕಾರಿಗಳ ದಂಡೇನಮ್ಮೂರಿಗೆ ಬರುತ್ತದೆ ಎಂದು ಗ್ರಹಿಸಿದ್ದ ಮಹಿಳೆಯರು ಹಾಗೂ ಗ್ರಾಮದ ಪ್ರಮುಖರು ಬೇಡಿಕೆ ಪಟ್ಟಿ ಮಂಡಿಸುವಾಗ ತುಸು ಉದಾರತೆ ತೋರಿದರು.


ರಾಷ್ಟ್ರೀಯ ಹೆದ್ದಾರಿ ಹತ್ತಿರ ರು.10 ಲಕ್ಷ ವೆಚ್ಚದಲ್ಲಿ ದ್ವಾರಬಾಗಿಲು ನಿರ್ಮಾಣ, ರು.50 ಲಕ್ಷದ ವೆಚ್ಚದಲ್ಲಿ ಗ್ರಾಮದ ಕೆರೆಯ ಹೂಳು ತೆಗೆದು ಹೊಸದಾಗಿ ಚಪ್ಪಡಿಕಲ್ಲು ಅಳವಡಿಸಿ ಜನ, ಜಾನುವಾರುಗಳಿಗೆ ನೀರಿನ ವ್ಯವಸ್ಥೆಗೆ
ಮನವಿ ಸಲ್ಲಿಸಿದರು. ಗ್ರಾಮದ ಬುಡಕಟ್ಟು ಸಂಸ್ಕೃತಿ ಉಳಿಸಲು ರಂಗಮಂದಿರ
ನಿರ್ಮಿಸಿಕೊಡುವುದು, ಸಾರಿಗೆ ವ್ಯವಸ್ಥೆ, ಸ್ವಚ್ಛ ಗ್ರಾಮ ಯೋಜ ನೆಯಡಿ ಚರಂಡಿ ವ್ಯವಸ್ಥೆ, ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ದೇವಸ್ಥಾನವಾದ ನರಸಿಂಹಸ್ವಾಮಿ ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆಶಗ್ರಾಮ ಸ್ವರು ಅಹವಾಲುಷಸಲ್ಲಿಸಿದರು. ಗ್ರಾಮಕ್ಕೆ ಜಾನುವಾರುಗಳಿಗೆ ಕಾಯಂ ಗೋಶಾಲೆ ತೆರೆಯುವುದು, ಕಾಯಂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆ ನಿರ್ಮಾಣ, ಹೂಸದಗಿ 55 ಆಶ್ರಯ ಮನೆಗಳ ನಿರ್ಮಾಣ, ಮೂರು ಕೋಟಿ ವೆಚ್ಚದಲ್ಲಿ ಮೂರು ದೊಡ್ಡ ಚೆಕ್ ಡ್ಯಾಂ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವುದರಿಂದ ಕೆರೆಯ ಪಕ್ಕ 10 ಲಕ್ಷ ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ನಿರ್ಮಿಸಿ,ತುಂಗಭದ್ರ ಹಿನ್ನೀರು ಕುಡಿಯುವ ನೀರಿನ ಯೋಜನೆಗೆ ಅಳವಡಿಸುವುದು. ಗ್ರಾಮದ ಬಡವರಿಗೆ 35 ಹೊಸ ರೇಷನ್ ಕಾರ್ಡ್ ನೀಡಿ, ಗ್ರಾಮದಲ್ಲಿಯೇ ನ್ಯಾಯಾ ಬೆಲೆ ಅಂಗಡಿ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಿರ್ಮಾಣಕ್ಕೆ ಅವಕಾಶವಿಲ್ಲ. ಪಡಿತರವನ್ನು ಸಂಬಂಧಿ ಸಿದ ಅಧಿಕಾರಿಗಳು ಗ್ರಾಮಕ್ಕೆ ತಂದು ಪೂರೈಕೆ ಮಾಡುತ್ತಿದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಜನನಿ ಶಿಶು ಸುರಕ್ಷಾ ಯೋಜ ನೆಯಡಿ ಗ್ರಾಮದ
ಹೂ ಗರ್ಭಿಣಿಯರಿಗೆ ಜಿಲ್ಲಾಧಿಕಾರಿ ಎಸ್, ಮನ್ನಿಕೇರಿ ಮತ್ತು ಎಸ್ಪಿ, ಜಿ.ರಾಧಿಕಾ ಅವರು ಸೀಮಂತ ಮಾಡಿದರು. ಮತ್ತು ಗ್ರಾಮದ ಇಬ್ಬರು ವಿಕಲಚೇತನ ಮಕ್ಕಳಿಗೆ ವಿಲ್‌ಚೆರ್ ವಿತರಿಸಲಾಯಿತು. ಕೊರೊನಾ ವಾ-
ಹೂ ರಿಯ‌ಗಳಿಗೆ ಸನ್ಮಾನಿಸಲಾಯಿತು. ತಹಶೀಲ್ದಾರ್‌ ಆನಂದಮೂರ್ತಿ, ಇಒ ಪ್ರಕಾಶ್, ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಗುರುಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಮತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಕ ರಾಜಾ ನಾ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸದಾಶಿವ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend