ಕಾಟ್ರಹಳ್ಳಿ ಕಾಲು ಜಾರಿ ಚೆಕ್ ಡ್ಯಾಂ ನೀರಿಗೆ ಬಿದ್ದು ಸಾವನ್ನಪ್ಪಿದ ಬಾಲಕಿ…!!!

Listen to this article

ಕಾಟ್ರಹಳ್ಳಿ ಕಾಲು ಜಾರಿ ಚೆಕ್ ಡ್ಯಾಂ ನೀರಿಗೆ ಬಿದ್ದು ಸಾವನ್ನಪ್ಪಿದ ಬಾಲಕಿ

ಕೂಡ್ಲಿಗಿ ತಾಲೂಕಿನ ಕಾಟ್ರಹಳ್ಳಿ ಗ್ರಾಮದ ಶ್ವೇತಾ ಎಂಬ ಬಾಲಕಿ ಚೆಕ್ ಡ್ಯಾಂ ಹತ್ತಿರ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರುಪಾಲಾಗಿ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಿಗ್ಗೆ 9:45 ಸುಮಾರಿಗೆ ಕೂಡ್ಲಿಗಿ ತಾಲೂಕಿನ ಕಾಟ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೂಡ್ಲಿಗಿ ತಾಲೂಕು ಕಾಟ್ರಹಳ್ಳಿ ಗ್ರಾಮದ ರೈತರಾದ ಮಡಿವಾಳರ ರೇವಣ್ಣ ಅವರ ಪುತ್ರಿ ಶ್ವೇತಾ (17 ) ನೀರುಪಾಲಾದ ಬಾಲಕಿ.

ರೈತ ಮಡಿವಾಳರ ರೇವಣ್ಣನವರ ಹೊಲದಲ್ಲಿ ಈರುಳ್ಳಿ ಹಚ್ಚುವ ಕೆಲಸದಲ್ಲಿ ಇರುವಾಗ ಬೆಳಗ್ಗೆ 09 ಗಂಟೆಗೆ ತನ್ನ ಮಗಳಾದ ಶ್ವೇತಾ ಈಕೆಯು ಊಟದ ಬುತ್ತಿ ತೆಗೆದುಕೊಂಡು ಹೊಲಕ್ಕೆ ಬಂದಿದ್ದು ಆಗ ಅಲ್ಲಿಯೇ ಇದ್ದ ಪ್ಲಾಸ್ಟಿಕ್ ಕೊಡ ತೆಗೆದುಕೊಂಡು ಬೆಳಿಗ್ಗೆ 09:10 ಗಂಟೆಗೆ ತಮ್ಮ ಹೊಲದ ಹತ್ತಿರ ಇರುವ ಚೆಕ್ ಡ್ಯಾಮ್ ಹತ್ತಿರ ಕುಡಿಯಲು ನೀರು ತೆಗೆದುಕೊಂಡು ಬರಲು ಹೋದಳು. ತುಂಬಾ ಸಮಯವಾದರೂ ಸಹ ನನ್ನ ಮಗಳು ನೀರು ತೆಗೆದುಕೊಂಡು ಬಾರದೇ ಇರುವ ಕಾರಣ ನಾನು ಗಾಬರಿಗೊಂಡು ನನ್ನ ಹೆಂಡತಿಯನ್ನು ನೋಡಿಕೊಂಡು ಬರಲು ಬೆಳಗ್ಗೆ 09:50 ಗಂಟೆಗೆ ಕಳುಹಿಸಿದೆನು. ಆಗ ನನ್ನ ಹೆಂಡತಿ ಗಾಬರಿಯಾಗಿ ನನ್ನನ್ನು ಕೂಗಿ ಕರೆದಳು. ಆಗ ನಾನು ಮತ್ತು ಕೆಲಸದಾಳುಗಳು ಸೇರಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗಳು ನೀರಿನಲ್ಲಿ ಬಿದ್ದಿದ್ದು ನಾವೆಲ್ಲರೂ ಸೇರಿ ಹೊರ ತೆಗೆದು ನೋಡಿದಾಗ ನನ್ನ ಮಗಳು ಅಸ್ವಸ್ಥಳಾಗಿ ಮೃತಪಟ್ಟಿರುತ್ತಾಳೆ. ನಮ್ಮ ಮಗಳ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಮತ್ತು ಕಾರಣಗಳು ಇರುವುದಿಲ್ಲ ಎಂದು ಮೃತ ತಂದೆ ರೈತ ಮಡಿವಾಳರ ರೇವಣ್ಣನವರು ನೀಡಿದ ದೂರಿನ ಅನ್ವಯ ಗುಡೇಕೋಟೆ ಪೊಲೀಸ್ ಠಾಣೆಯ ಎಎಸ್ಐ ಫಕ್ರುದ್ದೀನ್. ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend