ಏನ್ ಎಸ್ ಎಸ್ ಉದ್ಘಾಟನಾ ಸಮಾರಂಭ…!!!

Listen to this article

ಏನ್ ಎಸ್ ಎಸ್ ಉದ್ಘಾಟನಾ ಸಮಾರಂಭ.
ಮಹಾಲಕ್ಷ್ಮಿ ದೇವಸ್ಥಾನ ಚೆನ್ನಬಸವೇಶ್ವರ ನಗರ ಕೊಪ್ಪಳ
ಉದ್ಘಾಟನೆಯನ್ನು ಸಸಿಗೆ ನೀರೇಯುವ ಮೂಲಕ ಮಾಡಿದರು.
ಉದ್ಘಾಟಕರಾದ ಶ್ರೀ ಮಲ್ಲಿಕಾರ್ಜುನ್ ಪ್ರಾಚಾರ್ಯರು.
ಎನ್ಎಸ್ಎಸ್ ಧ್ವಜಾರೋಹಣ ಶ್ರೀಮತಿ ಮಹಾಲಕ್ಷ್ಮಿ ಶಾಂದರಿ.
ಅಧ್ಯಕ್ಷತೆ ಎಸ್ಎ ರಜಪರಥ
ಮುಖ್ಯ ಅತಿಥಿಗಳು ಶ್ರೀ ಸೋಮನಗೌಡ ಪಾಟೀಲ್ ಮಾಜಿ ಜಿಲ್ಲಾ ಉಪನ್ಯಾಸಕರ ಸಂಘ ಕೊಪ್ಪಳ ಹಾಗೂ ಶಿವನಂದ ಬಣಕಾರ್ ಹಿರಿಯ ನಾಗರಿಕರು. ಮತ್ತು ಪತ್ರಪ್ಪ ಚಿತ್ತರಕಿ ತಾಲೂಕು ಉಪನ್ಯಾಸಕರ ಸಂಘ ಕೊಪ್ಪಳ, ಹಾಗೂ
ಎಚ್ಎಸ್ ಬಾರಾಶೇರ ಉಪನ್ಯಾಸಕರು ಕೊಪ್ಪಳ,
ಹಾಗೂ ಲಲಿತ ಅಂಗಡಿ ಉಪನ್ಯಾಸಕಿಯರು, ಮತ್ತು ಬಸವರಾಜ ಶರಮುಡಿ ಹಿರಿಯರಾಗರಿಕರು, ಎಸ್ ಎಫ್ ಶಿರಡಿ ನಿವೃತ್ತ ಉಪನ್ಯಾಸಕರು, ಮತ್ತು ಮಂಜುನಾಥ್ ದೊಡ್ಮನಿ ವರದಿಗಾರರು, ಹಾಗೂ ಶಶಾಂಕ ಕಾರ್ಯ ಪ್ರಬಾರಿಗಳು, ಕೂಗುಶ ಮೇತಿ ಕಾರ್ಯ ವ್ಯವಸ್ಥಾಪಕರು, ಮತ್ತು ಮಂಜುನಾಥ್ ಉಪನ್ಯಾಸಕರು, ಹಾಗೂ ಚಂದ್ರಶೇಖರ್ ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಗ್ರಾಮದ ಸರ್ವ ಸದಸ್ಯರು ಚನ್ನಬಸವ ನಗರ.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀಮತಿ ಲಲಿತ ಅಂಗಡಿಯವರು ನರವರಿಸಿ ಕೊಟ್ಟರು, ಈ ಒಂದು ಕಾರ್ಯಕ್ರಮವು ಮಹಾತ್ಮ ಗಾಂಧೀಜಿಯವರ ಕನಸಾಗಿದ್ದು ಗ್ರಾಮಗಳ ಉದ್ದಾರವೇ ದೇಶದ ಉದ್ದಾರ ಎನ್ಎಸ್ಎಸ್ ಕಾರ್ಯಕ್ರಮ ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಎಂದರು.
ಹಾಗೂ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಮಲ್ಲಿಕಾರ್ಜುನ್ ಪ್ರಚಾರವರು ಕೊಪ್ಪಳ ಇವರು ಕಾಲೇಜು ವಿದ್ಯಾರ್ಥಿಗಳನ್ನು ಕುರಿತು ನಮ್ಮ ಕಾಲೇಜು ವತಿಯಿಂದ ಹಮ್ಮಿಕೊಂಡ ಈ ಒಂದು ಗ್ರಾಮದಲ್ಲಿ ಏಳು ದಿವಸಗಳ ಎನ್ಎಸ್ಎಸ್ ಕಾರ್ಯಕ್ರಮವನ್ನು, ಈ ಒಂದು ಉದ್ಘಾಟನಾ ಸಮಾರಂಭ ಅಂಗವಾಗಿ ನಮ್ಮ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕಿಯರು ಈ ನಗರದ ಕೊಪ್ಪಳ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ನಗರಸಭೆ ಯಾಗಿದ್ದು ಈ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮವಾಗಿ, ನಿಮಗೂ ಹಾಗೂ ನಮ್ಮ ಕಾಲೇಜುಗಳ ಉತ್ತಮ ಹೆಸರನ್ನು ತರುವಂತಾಗಬೇಕು ಎಂದರು.
ಈ ಒಂದು ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಧ್ವಜಾರೋಹಣವನ್ನು ಶ್ರೀಮತಿ ಮಹಾಲಕ್ಷ್ಮಿ ಶoದಾರಿಯವರು ನೆರವೇರಿಸಿ ಕೊಟ್ಟರು

ಹಾಗೂ ಧ್ವಜರೋಹಣ ಕಾರ್ಯಕ್ರಮವನ್ನು ಮುಗಿದ ನಂತರ ಸಭೆಯನ್ನು ಉದ್ದೇಶಿಸಿ ನಾನು ಒಬ್ಬ ಎನ್ಎಸ್ಎಸ್ ಸ್ವಯಂಸೇವಕಿಯಾಗಿದ್ದು ಸಾಕಷ್ಟು ಕಲಿಯಲು ಸಾಧ್ಯವಾಗಿದೆ ಹಾಗೂ ಇದು ತಮ್ಮನು ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಸಹಾಯವಾಗಲಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ :- ಸೋಮನಗೌಡ ಪಾಟೀಲ್ ನಿರುತ ಉಪನ್ಯಾಸಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ನಮ್ಮ ಈ ಏನ್ ಎಸ್ ಎಸ್ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರನ್ನು ಪಡೆದಿದ್ದು ಅದರಲ್ಲಿ ನಮ್ಮ ಕಾಲೇಜ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಳಿಸಿದೆ ಹಾಗೂ ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ನಮ್ಮ ಪ್ರೋತ್ಸಾಹ ಹಾಗೂ ಸಹಕಾರ ಸದಾ ಇರುತ್ತದೆ ಎಂದರು,
ಮತ್ತು ಸಭೆಯನ್ನು ಉದ್ದೇಶಿಸಿ ಪತ್ರಪ್ಪ ಚತರಕಿ ತಾಲೂಕು ಉಪನ್ಯಾಸಕರ ಸಂಘ ಇವರು ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ನಮ್ಮ ಕಾಲೇಜಿನ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮವು ಇಲ್ಲಿನ ಎಲ್ಲಾ ಹಿರಿಯರ ಸಹಾಯದಿಂದ ಯಶಸ್ವಿಯಾಗೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹಿರಿಯರ ಮೆಚ್ಚುಗೆಗೆ ಪಾತ್ರ ವಾಗುವಂತಹ ನಮ್ಮ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿ ಎಂದರು.


ಈ ಒಂದು ಕಾರ್ಯಕ್ರಮವನ್ನು ಕುರಿತು ಅಧ್ಯಕ್ಷರ ಭಾಷಣ :- ಪ್ರಾಚಾರ್ಯರಾದ ಎಸ್ಎ ರಾಜಪ್ರಥ ಕೊಪ್ಪಳ ಇವರು ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ನಮ್ಮ ವಿದ್ಯಾರ್ಥಿಗಳು ಏನು ಕುಂದು ಕೊರತೆ ಆಗದ ರೀತಿಯಲ್ಲಿ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿ ಹಾಗೂ ಎನ್ಎಸ್ಎಸ್ ಕಾರ್ಯಕ್ರಮದ ಎಲ್ಲಾ ನಿಯಮಗಳನ್ನು ಪಾಲಿಸಿ ಇಲ್ಲಿ ಹಮ್ಮಿಕೊಂಡಿರುವ ಶಿಬಿರಕ್ಕೆ ಒಳ್ಳೆಯ ಹೆಸರನ್ನು ತನ್ನಿ ಎಂದರು.
ಈ ಒಂದು ಕಾರ್ಯಕ್ರಮವನ್ನು ಕುರಿತು ಸ್ವಾಗತ ಭಾಷಣವನ್ನು :- ಶ್ರೀ ಪರಶುರಾಮ್ ಏನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳು ಕಾರ್ಯಕ್ರಮದ ವಿದ್ಯಾರ್ಥಿಗಳಿಗೂ ಹಾಗೂ ಗ್ರಾಮದ ಹಿರಿಯ ನಾಗರಿಕರಿಗೂ ಈ ಒಂದು ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ತುಂಬು ಹೃದಯದ ಅಭಿನಂದನೆಗಳು ಹಾಗೂ ನಮ್ಮ ಎಲ್ಲಾ ಶಿಕ್ಷಕ ವೃಂದದವರಿಗೂ ಸ್ವಾಗತ ಎನ್ನುವ ಮುಖಾಂತರ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನೆರವೇರಿಸಿ ಎನ್ನುವ ಮುಖಾಂತರ ಸ್ವಾಗತ ಕೋರಿದರು.
ಕಾರ್ಯಕ್ರಮವನ್ನು ಕುರಿತು ನಿರೂಪಣೆಯನ್ನು :-ಉಪನ್ಯಾಸಕಿಯಾದ ಜಂಬಮ್ಮನವರು ಕಾರ್ಯಕ್ರಮಕ್ಕೆ ಉತ್ತಮ ರೀತಿಯಲ್ಲಿ ಚಾಲಿನ ದೊರೆತಿದ್ದು ಈ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಡುವಲ್ಲಿ ಗ್ರಾಮದ ಎಲ್ಲಾ ಸಾರ್ವಜನಿಕರು ಹಾಗೂ ನಾನು ನಾಗರಿಕರು ಹಾಗೂ ಹಿರಿಯ ಬಂಧುಗಳು ಸಕಲ ಸಹಕರಿಸಬೇಕಾಗಿ ತಮ್ಮಲ್ಲಿ ಕಳಕಳ ಮನವಿ ಎನ್ನುವುದರ ಮುಖಾಂತರ ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿ ಕೊಟ್ಟರು.


ಕಾರ್ಯಕ್ರಮದ ವಂದನಾರ್ಪಣೆಯನ್ನು :- ಉಪನ್ಯಾಸಕಿಯಾದ ಕುಮಾರಿ ಸುಮಾಪೈಲಾದ ರವರು ನಡೆಸಿಕೊಟ್ಟರು ಈ ಒಂದು ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಕಾಲೇಜು ಸಿಬ್ಬಂದಿ ಹಾಗೂ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳು ಹಾಗೂ ಬಾಲಕಿಯರು ಹಾಗೂ ಗ್ರಾಮದ ಹಿರಿಯರು ಹಾಗೂ ಎಲ್ಲಾ ಸಹರಗಳಿಗೂ ವಂದನೆಗಳನ್ನು ತಿಳಿಸುತ್ತಾ ತಮ್ಮ ಒಂದು ಕಾರ್ಯಕ್ರಮಕ್ಕೆ ಮೇರಗು ಕೊಟ್ಟರು..

ವರದಿ. ಮಂಜುನಾಥ್ ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend