ಕೊಪ್ಪಳ ಉಪನೊಂದಣಾಧಿಕಾರಿ ಕಚೇರಿಯಲ್ಲಿ, ಕಾಸು ಕೊಟ್ಟರೆ ಮಾತ್ರ ಕಾರ್ಯವಂತೆ…!!!

Listen to this article

ಕೊಪ್ಪಳ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಬ್ರೋಕರ್ ಗಳ ಹಾವಳಿ..
ಕೊಪ್ಪಳದ ಉಪನೊಂದಣಾಧಿಕಾರಿ ಕೇಂದ್ರ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಅಧಿಕಾರಿಯಿಂದ ಬೇಸತ್ತ ಸಾರ್ವಜನಿಕರು, ಸರ್ಕಾರದ ಒಂದು ನಿಗದಿತ ಸಮಯವನ್ನು ಗಾಳಿಗೆ ತೂರಿದ ಘಾಟಿ ಅಧಿಕಾರಿ ಗ್ರಾಮೀಣ ಪ್ರದೇಶಗಳಿಂದ ತಮ್ಮ ಒಂದು ಕೆಲಸವನ್ನು ಮಾಡಿಸುವುದಕ್ಕೆ ಬರುವ ಪ್ರತಿಯೊಬ್ಬ ಸಾರ್ವಜನಿಕರಿಂದ ಇಡೀ ಶಾಪ.
ಮತ್ತು ಅಲ್ಲಿರುವ ಅಧಿಕಾರಿಯನ್ನು ಪ್ರಶ್ನೆಸಿದರೆ ಅಧಿಕಾರಿಯಿಂದ ಉಡಾಪೆ ಉತ್ತರ ಬೇಸತ್ತ ಹಳ್ಳಿಗರು,

ಬೇಸತ್ತ ಸಾರ್ವಜನಿಕ ಈ ಒಂದು ಕಚೇರಿಯಲ್ಲಿ ಬ್ರೋಕರ್ ಗಳ ಒಂದು ಉಪಟಳ ಬೇಕಾಬಿಟ್ಟಿಯಾಗಿದ್ದು ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಬೇಕೆಂದರೆ ಲಂಚ ಎಂಬ ಭೂತದ ಬೆನ್ನನ್ನು ಅತ್ತಲೇಬೇಕು.ಮತ್ತು ಇಲ್ಲಿರುವ ರುದ್ರಮೂರ್ತಿ ಎಂಬ ಅಧಿಕಾರಿಯಿಂದ, ಯಾವುದೇ ರೈತರ ಖಾತೆ ಬದಲಾವಣೆ ಮಾಡಬೇಕೆಂದರೆ ಕನಿಷ್ಠ ಮಟ್ಟಿಗಿನ ಹಣವನ್ನು ಕೊಟ್ಟರೆ ಮಾತ್ರ ಅವರ ಕಾರ್ಯ ಸಲೀಸಾಗಿ ಸಾಗುವುದು ಇಲ್ಲವೆಂದರೆ ಅಂದು ಬನ್ನಿ ಇಂದು ಬನ್ನಿ ಎನ್ನುತ್ತಾ ಅವರನ್ನು ದಿನಪ್ರತೀ ಓಡಾಡಿಸಿ ಸುಮ್ಮನೆ ಕಾಲಹರಣವನ್ನು ಮಾಡಿಸುತ್ತಾರೆ ಎನ್ನುತ್ತಾರೆ ಇವರಿಂದ ನೋವನ್ನು ಅನುಭವಿಸಿದ ಸಾರ್ವಜನಿಕರು, ಮತ್ತು ಇವರಿಂದ ಹೆಚ್ಚಿನ ಮಟ್ಟಿಗಿನ ಹಣವನ್ನು ಪಡೆಯಲು ಬೇರೊಬ್ಬ ಬ್ರೋಕರ್ ಮುಕಾಂತರ ಅವರೊಂದಿಗಿನ ವ್ಯವಹಾರವನ್ನು ಮುಗಿಸಿಕೊಂಡು ಕಾರ್ಯವನ್ನು ಮುಂದುವರೇಸುತ್ತಾರೆ ಎನ್ನುತ್ತಾರೆ ಇಲ್ಲಿನ ಕೆಲ ಸಾರ್ವಜನಿಕರು ಅಂದರೆ, ಈ ಒಂದು ಕಛೇರಿಯ ವ್ಯವಸ್ಥೆಯ ಬಗ್ಗೆ ನಿಕರವಾಗಿ ಹೇಳಬೇಕೆಂದರೆ ಹುಚ್ಚನ ಮದುವೆಯಲ್ಲಿ ಉಂಡವನೆ ಜಾಣ ಎನ್ನುವಂತೆ ತನ್ನ ಒಂದು ಅತಿಯಾದ ಜಾಣತನದ ಬುದ್ದಿವಂತಿಕೆಯನ್ನು ತೋರುತ್ತಾ ತಾನೇ ಚಕ್ರವರ್ತಿ ಎನ್ನುವಂತೆ ಈ ಭ್ರಷ್ಟ ಅಧಿಕಾರಿ ತನ್ನ ಒಂದು ಅದಿಕಾರದ ದರ್ಪವನ್ನು ತೋರುತ್ತಿರುವುದು ಎಷ್ಟು ಸರಿ ಹೇಳಿ “ಬೇಲಿಯೇ ಎದ್ದು ಹೊಲವನ್ನು ಮೆಯ್ದಹಾಗಿ “ಸಾರ್ವಜನಿಕರ ಒಂದು ಕಷ್ಟದಲ್ಲಿ ಸ್ಪಂದನೆ ಮಾಡುವಂತೆ ಸರ್ಕಾರ ಇಂತವರನ್ನು ನೇಮಕ ಮಾಡಿದರೆ ಇವರು ಮಾತ್ರ ಬಡವರ, ಸಮಾಧಿಯ ಮೇಲೆ ತಮ್ಮ ನೆಚ್ಚಿನ ಅರಮನೆಯನ್ನು ಕಟ್ಟಲು ಲಂಚವೆಂಬ ಕುದುರೆಯ ಬೆನ್ನನ್ನು ಹತ್ತಿ ಸವಾರಿಮಾಡುವುದು ಸರಿನಾ ನೀವೇ ಯೋಚನೆ ಮಾಡಿ ಹೇಳಿ.

ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಇಲ್ಲದವರ (ಬ್ರೋಕರ್ )ಗಳ ಹಾವಳಿಗೆ ತತ್ತರಿಸಿದ ಕೊಪ್ಪಳದ ಜನತೆ,

ಪ್ರತಿಯೊಂದು ಸರ್ಕಾರದ ಕೆಲಸಕಾರ್ಯವನ್ನು ಸಲೀಸಾಗಿ ಸಾಗಲು ಇಲ್ಲಿರುವ ಬರೋಬ್ಬರಿ ಮಧ್ಯವರ್ಥಿಗಳೇ ದೇವರಿದ್ದಂತೆ ಕಣ್ರೀ ಏಕೆಂದರೆ ದೇವರನ್ನು ನೇರವಾಗಿ ಕಾಣುವುದಕ್ಕಿಂತ ಮುಂಚಿತವಾಗಿ ನಾವುಗಳು ಪೂಜಾರಿಗಳಿಂದ ಅನುಮತಿಯನ್ನು ಹೇಗೆ ಅಪ್ಪಣೆಯನ್ನು ಪಡೆಯಿತ್ತೆವೋ ಅದೇ ತರನಾಗಿ, ಇಲ್ಲಿರುವ ಅಧಿಕಾರಿಯನ್ನು ಸಾರ್ವಜನಿಕರು ಕಾಣಬೇಕೆಂದರೆ ಮೊದಲು ಇಲ್ಲಿರುವ ಬ್ರೋಕರ್ ಗಳ ಪರವಾನಿಗೆಯನ್ನು ಪಡೆಯಲೇ ಬೇಕು ಇಲ್ಲ ಅಂದರೆ ಅಲ್ಲಿಗೆ ಹೋದರು ವ್ಯರ್ಥ.ಯಾವುದೇ ನಿವೇಶನ ಅಥವಾ ಸೈಟ್ ರಿಜಿಸ್ಟ್ರೇಷನ್ ಗೆ ಹೋದರೆ ಸರ್ಕಾರಿ ಮುದ್ರಾಂಕ ಇಲಾಖೆಯ ಶುಲ್ಕ ನೇ ಬೇರೆ.ಕೊಪ್ಪಳದ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಇರುವ ಶುಲ್ಕ ನೇ ಬೇರೆ .ಇಲ್ಲಿ ಬ್ರೋಕರ್ ಗಳು ಹೇಳುವ ರೀತಿ ಹೇಗೆಂದರೆ ಎಲ್ಲರಿಗೂ ಮಾಮೂಲ್ ಕೊಡ್ಲೆ ಬೇಕಪ್ಪಾ ಏನೂ ಮಾಡಕಾಗಲ್ಲ.ಕೊಡುವುದಿಲ್ಲ ಎಂದರೆ ಮುಂದಿನ ವಾರ ಬಾ ನಾಳೆ ಬಾ ನಾಡಿದ್ದು ಬಾ ಎನ್ನುವ ರೀತಿಯಲ್ಲಿ ಮಾತಾಡುತ್ತಾರೆ .ಈ ಬ್ರೋಕರ್ ಗಳು ಯಾವ ಫೈಲನ್ನು ಅಧಿಕಾರಿಗಳಿಗೆ ಕೊಡುತ್ತಾರೆಯೋ ಅವರ ಫೈಲ್ ಬೇಗನೆ ಆಗುತ್ತದೆ. ನೇರವಾಗಿ ಹೋದವರ ಅಂದರೆ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ರಜಿಸ್ಟ್ರೇಶನ್ ಗೆ ಹೋದರೆ ಅವರ ಕಾದುಕಾದು ಸತ್ತರೂ ರಜಿಸ್ಟ್ರೇಶನ್ ಆಗುವದಿಲ್ಲ .ಮತ್ತು ಯಾವುದೇ ಇಲಾಖೆಗೆ ಸಂಬಂಧ ಪಟ್ಟ ಕೆಲಸಗಳು ಸಲೀಸಾಗಿ ಸಾಗಲು ಇಲ್ಲಿರುವ ಖಾಸಗಿ ಸಿಬ್ಬಂದಿಗಳ, ಸಾತ್ ತುಂಬಾ ಮುಖ್ಯವಂತೆ ಕಣ್ರೀ, ಇದರ ಬಗ್ಗೆ ಗೊತ್ತಿರುವ ಯಾರಾದರೂ ಇದರ ಬಗ್ಗೆ ಧ್ವನಿಯನ್ನು ಎತ್ತಿದರೆ ನೇರವಾಗಿ, ನಾನೇನು ಮಾಡಲಿ ಇಲ್ಲಿ ಸಿಬ್ಬಂದಿಗಳ ಕೊರತೆಯಿದೆ ಎನ್ನುತ್ತಾರೆ ಉಂಡಾಣಿ ಗುಂಡನoತಿರುವ ಇಲ್ಲಿನ ಅಧಿಕಾರಿ ಮತ್ತು ಇವರ ವಿರುದ್ಧ ಯಾರಾದರೂ ಧ್ವನಿಯನ್ನು ಎತ್ತಿದರೆ ಇವರ ಗತಿ ಅಷ್ಟೇ ಬಿಡಿ ಗೊತ್ತಿರುವವರ ಹತ್ತಿರ ಇವರ ಒಂದು ವಿಚಾರಣೆ ಮಾಡಿ ಅಂತವರನ್ನು ಟಾರ್ಗೆಟ್ ಲಿಸ್ಟ್ ನಲ್ಲಿ ಇಡುತ್ತಾರಂತೆ ಈ ಕುಬೇರ ದೊರೆ, ಇಲ್ಲಿನ ಉಪನೊಂದಣಾಧಿಕಾರಿ ಎನ್ನುತ್ತಾರೆ ಇವರಿಂದ ನೋವನ್ನು ಅನುಭವಿಸಿದ ವ್ಯಕ್ತಿಗಳು ಮತ್ತು ಈ ಅಧಿಕಾರಿ ಹಲವು ಖಾಲಿ ಇಸಿ ಪತ್ರಗಳ ಮೇಲೆ ಬೇಕಾಬಿಟ್ಟಿ ತನ್ನ ಒಂದು ಶಿಖಾವನ್ನು ಒತ್ತಿದ್ದಾರೆ ಎನ್ನುತ್ತಾರೆ ಹಾಗೂ ಇಂತಹ ಒಬ್ಬ ಭ್ರಷ್ಟ ಅಧಿಕಾರಿಯ ಒಂದು ಅವಶ್ಯಕತೆ ನಮ್ಮ ರಾಜ್ಯಕ್ಕೆ ಬೇಕಾ ಹಾಗೂ ಇವರನ್ನು ಹೀಗೆ ಮುಂದುವರೆಯಲು ಬಿಟ್ಟರೆ ಕೊಪ್ಪಳದ ನೊಂದಣಾಧಿಕಾರಿಯ ಕಚೇರಿಯನ್ನು ಸಹ ಬೇರೊಬ್ಬರಿಗೆ ಅಧಿಕಾರ ಮಾಡಲು ಕೊಡುವುದಿಲ್ಲ ಏಳಿ ಅದಕ್ಕಾಗಿ ಇಲ್ಲಿರುವ ಜಿಲ್ಲಾಧಿಕಾರಿಗಳು ಸೂಕ್ತಕ್ರಮವನ್ನು ತೆಗೆದುಕೊಳ್ಳದೆ ಹೋದಲ್ಲಿ ಮುಂದೊಂದು ದಿನ ಜಿಲ್ಲೆಯ ಜನತೆ ಪಶ್ಚಾತಾಪ ಪಡುವ ಸಮಯ ದೂರವೇನು ಉಳಿದಿಲ್ಲ ಬಿಡಿ ಮತ್ತು ಜಿಲ್ಲೆಗೆ ಸಂಬಂಧ ಪಟ್ಟ ಶಾಸಕರು ಹಾಗೂ ಉಸ್ತುವಾರಿ ಸಚಿವರುಗಳು ಕ್ರಮವನ್ನು ತೆಗೆದುಕೊಂಡು ಸಾರ್ವಜನಿಕರಿಗೆ ನ್ಯಾಯವನ್ನು ದೊರಕಿಸಿ ಕೊಡಲಿ ಎಂಬುದು ನಮ್ಮ ಒಂದು ಆಶಯ….

ಇನ್ನು ಮುಂದುವರಿಯುವುದು…..

ವರದಿ. ಮಂಜುನಾಥ್, ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend