ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ ಪತ್ತೆ ಹಚ್ಚುವಲ್ಲಿ ಸಖಿ ಒನ್ ಸ್ಟಾಪ್ ತಂಡ ಯಶಸ್ವಿ…!!”

Listen to this article

ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ ಪತ್ತೆ ಹಚ್ಚುವಲ್ಲಿ ಸಖಿ ಒನ್ ಸ್ಟಾಪ್ ತಂಡ ಯಶಸ್ವಿ

ಕೊಪ್ಪಳ, ಕುಟುಂಬದ ಆಶ್ರಯದಿಂದ ವಂಚಿತಳಾಗಿ ಕುಟುಂಬ ಸದಸ್ಯರ ಪತ್ತೆಯಿಲ್ಲದೇ, ಆಲ್ಝೆöÊಮರ್ ಡೆಮೆನ್ಷಿಯಾ (ಸ್ಮರಣ ಶಕ್ತಿಯಲ್ಲಿ ಕ್ಷೀಣತೆ) ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದ ನಿರ್ಗತಿಕ ವಯೋವೃದ್ಧ ಮಹಿಳೆಯ ವಿಳಾಸ ಪತ್ತೆ ಹಚ್ಚಿ ಮಹಿಳೆಯನ್ನು ಸ್ವವಿಳಾಸಕ್ಕೆ ತಲುಪಿಸಿ, ಆಕೆಯ ಪೋಷಣೆ, ರಕ್ಷಣೆ ಮತ್ತು ಅಭಿರಕ್ಷಣೆಗೆ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಫ್ ಸೆಂಟರ್ ಯಶಸ್ವಿಯಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ರುದ್ರಮ್ಮ ಗಂ. ಕಾಳಪ್ಪ ಎಂಬ ಮಹಿಳೆಯು ಬದುಕು ನಡೆಸಲು ಭಿಕ್ಷಾಟನೆಯಲ್ಲಿ ತೊಡಗಿದ್ದರು. 2021ರ ಡಿಸೆಂಬರ್ 17 ರಂದು ಕೊಪ್ಪಳದ ಜಿಲ್ಲಾ ಆಸ್ಪತ್ರೆಯ 108 ತುರ್ತು ವಾಹನದ ಸಹಕಾರದಲ್ಲಿ ಸಾರ್ವಜನಿಕರಿಂದ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ದಾಖಲಾಗಿದ್ದರು. ಪ್ರತಿದಿನ ವೈದ್ಯರ ಚಿಕಿತ್ಸೆ ಮತ್ತು ಸಖಿ ಒನ್ ಸ್ಟಾಪ್ ಸೆಂಟರ್‌ನ ಸಹಕಾರದಲ್ಲಿ ಮಹಿಳೆಗೆ ಸೂಕ್ತ ಆರೈಕೆ ಮತ್ತು ಆಪ್ತ ಸಮಾಲೋಚನೆಯಲ್ಲಿ ಆಕೆಯ ಹೆಸರು, ಊರು ಪತ್ತೆ ಹಚ್ಚಲಾಯಿತು.
ನಂತರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜನವರಿ 13 ರಂದು ವಯೋವೃದ್ಧ ಮಹಿಳೆಯನ್ನು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ – ಒನ್ ಸ್ಟಾಪ್ ಸೆಂಟರ್‌ನಿoದ ವಿಜಯಪುರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ವರ್ಗಾವಣೆ ಮಾಡಲಾಗಿರುತ್ತದೆ.
ಈ ಕಾರ್ಯಚರಣೆಯಲ್ಲಿ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು, ಪೊಲೀಸ್ ಮಹಿಳಾ ಬೆಂಗಾವಲು ಸಹಕಾರ ನೀಡಿರುತ್ತಾರೆ. ಸಖಿ ತಂಡದ ಆಡಳಿತಾಧಿಕಾರಿ ಯಮುನಾ ಮತ್ತು ಸಾಮಾಜಿಕ ಕಾರ್ಯಕರ್ತೆ ಹುಲಿಗೆಮ್ಮ ರವರು ವಯೋವೃದ್ಧೆಯನ್ನು ವಿಜಯಪುರದ ಸಖಿ ಘಟಕದ ಸುಪರ್ದಿಗೆ ಒಪ್ಪಿಸಿದ್ದಾರೆ ಎಂದು ಸಖಿ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

 

ವರದಿ. ಸಂಗೀತ ಕೊಪ್ಪಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend