ಶಾಸಕ, ಜಿ.ಪಂ ಸಿಇಓ ರಿಂದ ಪುನಶ್ಚೇತನಗೊಂಡ ಕಲ್ಯಾಣಿ ಉದ್ಘಾಟನೆ…!!!

Listen to this article

ಐತಿಹಾಸಿಕ ಪುಷ್ಕರಣಿಗೆ ನರೇಗಾದಡಿ ಬಂತು ಜೀವಕಳೆ

ಶಾಸಕ, ಜಿ.ಪಂ ಸಿಇಓ ರಿಂದ ಪುನಶ್ಚೇತನಗೊಂಡ ಕಲ್ಯಾಣಿ ಉದ್ಘಾಟನೆ

ಗಂಗಾವತಿ: ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ವತಿಯಿಂದ ಈ ಐತಿಹಾಸಿಕ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವುದು ಸಂತಸದ ವಿಷಯ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲೂಕಿನ ಆನೆಗೊಂದಿ ಗ್ರಾಮದ ದುರ್ಗಾದೇವಿ ದೇಗುಲದಲ್ಲಿರುವ ಐತಿಹಾಸಿಕ ಪುಷ್ಕರಣಿಯನ್ನು ನರೇಗಾ ಯೋಜನೆಯಡಿ ಪುನಶ್ಚೇತನಗೊಳಿಸಿರುವುದನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಐತಿಹಾಸಿಕ ಪುರಾವೆಗಳನ್ನು ಸಂರಕ್ಷಿಸುವ ಕೆಲಸವನ್ನು ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾಡಲಾಗುತ್ತಿದೆ.

ನಮ್ಮ ಸಂಸ್ಕೃತಿ ಸಂಪ್ರದಾಯ ಪರಂಪರೆಯನ್ನು ಉಳಿಸುವ ಪ್ರಯತ್ನವನ್ನು ಜಿಲ್ಲಾ ಪಂಚಾಯತ್ ಮಾಡುತ್ತಿದೆ. ಜೊತೆಗೆ ಈ ಪುಷ್ಕರಣಿ ರಾಮಾಯಣ ಕಾಲದ ಇತಿಹಾಸವನ್ನು ಹೊಂದಿರುವಂತದ್ದು, ಹಾಗಾಗಿ ಈ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಿರುವುದು ಶಾಘ್ಲನೀಯ. ಇದೇ ರೀತಿ ನಮ್ಮ ಭಾಗದಲ್ಲಿನ ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ನಾವೆಲ್ಲರೂ ಪತ್ತೆ ಹಚ್ಚಿ ಅವುಗಳನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಮಾಡೋಣ ಎಂದರು.

ನಂತರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿಯಾ ತರುನ್ನುಮ್ ಅವರು ಮಾತನಾಡಿ ಈ ಐತಿಹಾಸಿಕ ಪುಷ್ಕರಣಿಯನ್ನು ನಮ್ಮ ನರೇಗಾ ಯೋಜನೆಯಡಿ ಅಭಿವೃದ್ದಿ ಪಡಿಸಲಾಗಿದ್ದು, ಇದರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲಾ ತಾ.ಪಂ ಹಾಗೂ ಗ್ರಾ.ಪಂ ಹಾಗೂ ದೇಗುಲದ ಸಿಬ್ಬಂದಿಗೆ ಅಭಿನಂದನೆ ಸಲ್ಲಬೇಕು. ಇದೇ ಮಾದರಿಯಲ್ಲಿ ನಾವು ನೀರಿನ ಸಂರಕ್ಷಣೆಯ ಮತ್ತು ಎಲ್ಲೇಲ್ಲಿ ಶಾಶ್ವತ ಆಸ್ತಿಗಳನ್ನು ನಾವು ಸ್ಥಾಪನೆ ಮಾಡಬಹುದು ಎಂದು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಯತ್ನಯನ್ನು ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

ಇದಕ್ಕೂ ಮುನ್ನ, ದೇಗುಲದ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಲ್ಯಾಣಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಗಂಗಾಪೂಜೆಯನ್ನು ನೇರವೇರಿಸಿ ಪುನಶ್ಚೇತನಗೊಂಡ ಕಲ್ಯಾಣಿಯನ್ನು ಉದ್ಘಾಟಿಸಲಾಯಿತು.

ಈ ವೇಳೆ ತಾಲೂಕು ಪಂಚಾಯಿತಿ ಇಓ ಡಾ.ಡಿ.ಮೋಹನ್, ಆನೆಗುಂದಿ ರಾಜವಂಶಸ್ಥ ಕೃಷ್ಣದೇವರಾಯ, ತಾಂತ್ರಿಕ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಶಿವಪ್ರಸಾದ್, ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ಬಾಳೆಕಾಯಿ, ಪಿಡಿಓ ಕೃಷ್ಣಪ್ಪ, ಸದಸ್ಯರಾದ ಸುಶೀಲಾಬಾಯಿ, ಕೆವಿ ಬಾಬು, ನರಸಿಂಹ, ಶಾರದಾಬಾಯಿ, ಮಲ್ಲಿಕಾರ್ಜುನ ಸ್ವಾಮಿ, ಗಾಳೆಮ್ಮ, ಹುಲಿಗೆಮ್ಮ ಹೊನ್ನಪ್ಪ, ಎಸ್.ಕಿರಣ್ಮಯಿ, ವೆಂಕಟೇಶ ಸಣ್ಣಫಕೀರಪ್ಪ ಸೇರಿದಂತೆ ಸಿಬ್ಬಂದಿಗಳು ಇದ್ದರು.

ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ದುರ್ಗಾದೇವಿ ದೇಗುದಲ್ಲಿರುವ ಐತಿಹಾಸಿಕ ಕಲ್ಯಾಣಿಯನ್ನು ನರೇಗಾದಡಿ ಪುನಶ್ಚೇತನಗೊಳಿಸಿದ್ದು, ಶುಕ್ರವಾರ ಶಾಸಕರು, ಜಿ.ಪಂ ಸಿಇಓ ಅವರು ಉದ್ಘಾಟಿಸಿದರು.

ನರೇಗಾದಡಿ ಪುನಶ್ಚೇತನಗೊಂಡ ಕಲ್ಯಾಣಿಗೆ ಶುಕ್ರವಾರ ಗಂಗಾಪೂಜೆಯನ್ನು ನೇರವೇರಿಸಲಾಯಿತು.

ವರದಿ. ಸಂಗೀತ ಕೊಪ್ಪಳ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend