ಗಿಣಿಗೇರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅಲ್ಲಾನಗರ” ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ಆರೋಗ್ಯದ ಬಗ್ಗೆ ಮಾಹಿತಿಯ ಕಾರ್ಯಕ್ರಮವನ್ನು ಮಾಡಲಾಹಿತು…!!!

Listen to this article

ಕೊಪ್ಪಳ: ಗಿಣಿಗೇರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ “ಅಲ್ಲಾನಗರ” ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ  ಆರೋಗ್ಯದ ಬಗ್ಗೆ ಮಾಹಿತಿಯ ಕಾರ್ಯಕ್ರಮವನ್ನು ಮಾಡಲಾಹಿತು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು,ಆರೋಗ್ಯ ಆಪ್ತಸಮಾಲೋಚಕರು,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಸುಗಮಕಾರರು,ಆಶಾ ಕಾರ್ಯಕರ್ತೆಯರು, ತಾಯಂದಿರರು,ಗರ್ಭಿಣಿಯರು, ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು “ಶ್ರೀ ಸಂಗಯ್ಯ ಕಂಠಿ ಮಠ”ರವರು ಕೊರೊನಾ ಲಸಿಕೆಯ ಕುರಿತು ಹಾಗೂ ಕೊರೊನಾ ಬಾರದಂತೆ ವಹಿಸಬೇಕಾದ ವಹಿಸಬೇಕಾದ ಮುಂಜಾಗ್ರತಾ ಕಾರ್ಯಕ್ರಮಗಳಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀಮತಿ ಫೈರೋಜಾ ಬೇಗಂ ಆರೋಗ್ಯ ಆಪ್ತ ಸಮಾಲೋಚಕಿ ಇವರು ಪೌಷ್ಠಿಕ ಆಹಾರ ಸೇವನೆ, ವಯಕ್ತಿಕ ಸ್ವಚ್ಛತೆಯ ಬಗ್ಗೆ, ಹಾಗೂ ಕ್ಷಯ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಕ್ಷಯರೋಗದ ರೋಗ ಲಕ್ಷಣಗಳಾದ ಕೆಮ್ಮು, ಕಫಾ, ಜ್ವರ, ಬರುವುದು,ರಾತ್ರಿ ಬೆವರುವುದು,ಹಸಿವು ಆಗದೇ ಇರುವುದು,ತೂಕ ಕಡಿಮೆಯಾಗುವುದು,ಈ ರೀತಿಯ ಲಕ್ಷಣಗಳಿದ್ದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಹೋಗಿ ಕ್ಷಯರೋಗದ ಪರೀಕ್ಷೆಯನ್ನು ಮಾಡಿಸುವಂತೆ ಸಲಹೆಯನ್ನು ನೀಡಿದರು ಹಾಗೂ ಕ್ಷಯ ರೋಗ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ 2025 ರೊಳಗೆ ಭಾರತ ಸರ್ಕಾರವು ಭಾರತವನ್ನು ಕ್ಷಯ ಮುಕ್ತ ಭಾರತವನ್ನಾಗಿ ಮಾಡುವ ಮುಖ್ಯ ಗುರಿಯನ್ನು ಹೊಂದಿದೆ ಈ ಗುರಿಯನ್ನು ತಲುಪಲು ಸಮುದಾಯದವರಾದ ತಮ್ಮ ಸಹ ಭಾಗಿತ್ವ ತುಂಬಾ ಮುಖ್ಯವಾಗಿರುವುದರಿಂದ ಎಲ್ಲರೂ ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಸಹಕರಿಸಬೇಕೆಂದು ಹೇಳಿದರು. ಕ್ಷಯ ರೋಗ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಲ್ಲಿಯೂ ಕೂಡ ಬರುವಂತಹ ರೋಗವಾಗಿದೆ. ಯಾರು ಕೂಡ ಆಲಸ್ಯತನ ಮಾಡದೆ ಕ್ಷಯ ರೋಗದ ಲಕ್ಷಣಗಳಿದ್ದರೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುವಂತೆ ಸಲಹೆಯನ್ನು ನೀಡಲಾಹಿತು.ಕ್ಷಯ ರೋಗದ ಬಗ್ಗೆ ಭಯ ಬೇಡ ಜಾಗ್ರತಿ ಇರಲಿ ಎಂದು ಹೇಳಿದರು…

ವರದಿ. ಉಮೇಶ್, ಎಂ, ಕಂಪ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend