ಭಕ್ತರ ಕಣ್ಮನ ಸೆಳೆಯುತ್ತಿದೆ- ‘ವಿಜಯಾದ್ರಿ ಪರ್ವತ ‘…!!!

Listen to this article

ಭಕ್ತರ ಕಣ್ಮನ ಸೆಳೆಯುತ್ತಿದೆ- ‘ವಿಜಯಾದ್ರಿ ಪರ್ವತ ‘

ಕೊಪ್ಪಳ :-ತಾಲೂಕಿನ ಕಾಸನಖಂಡಿ ಗ್ರಾಮದಿಂದ ಕೂಗಳೆತೆಯ ದೂರದಲ್ಲಿರುವ “ವಿಜಯಾದ್ರಿ ಪರ್ವತ ” ವು ಭಕ್ತರ ಕಣ್ಮನ ಸೆಳೆಯುವಂತಿದೆ.

ಕಾಸನಕಂಡಿ ಮತ್ತು ಹೊಸಳ್ಳಿ ರಸ್ತೆ ಮಧ್ಯ ಇರುವ ಈ ವಿಜಯಾದ್ರಿ ಪರ್ವತವೂ ಕಳೆದ ವರ್ಷ ನವೆಂಬರ್ ನಲ್ಲಿ ‘ ವೀರಾಂಜನೇಯ’ನ ಹೊಸಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆಕರ್ಷಿತವಾದ ಈ ಸ್ಥಳಕ್ಕೆ ‘ತಿಮ್ಮಪ್ಪನ ಮಟ್ಟಿ’ ಎಂತಲೂ ಕರೆಯುತ್ತಾರೆ.ಸುಮಾರು 800 ರಿಂದ 900 ಮೀಟರ್ ಎತ್ತರದ ಗುಡ್ಡ ಪ್ರದೇಶವು ಸುತ್ತಲೂ ಆವರಿಸಿರುವ ತುಂಗಭದ್ರ ದಡದ ಹಿನ್ನಿರು ಭಕ್ತರನ್ನು ತನ್ನೆಡೆಗೆ ಕೈಬೀಸಿ ಕರೆಯುವಂತಹ ಅತ್ಯಂತ ರಮಣೀಯ ದೃಶ್ಯ ಇಲ್ಲಿ ಕಂಡು ಬರುತ್ತದೆ. ಪೂರ್ವ, ಉತ್ತರ ಮತ್ತು ದಕ್ಷಿಣ ಮೂರು ದಿಕ್ಕಿನಲ್ಲಿ ತುಂಗಭದ್ರಾ ನದಿಯ ನೀರಿನ ನಡುಗೆಡ್ಡೆ ಪರ್ವತವು ಉತ್ತರ ದಿಕ್ಕಿಗೆ ರಸ್ತೆ ಮಾರ್ಗ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ.ಹೊರ ರಾಜ್ಯದ ಅರ್ಚಕರ ರಾಮಾಯಣ ಪಟನವು ಇಲ್ಲಿನ ವಿಶೇಷತೆ.

ಅಲ್ಲದೆ ಮನುಷ್ಯ ಶಾಂತಿ ನೆಮ್ಮದಿಗಾಗಿ ದಿನಾಲು ಹುಡುಕುತ್ತಾ ಹೋಗುತ್ತಾನೆ., ಈ ಬೆಟ್ಟದ ಮೇಲೆ ಬಂದು, ವೀರಾಂಜನೇಯನ ದರ್ಶನ ಪಡೆದು ಧ್ಯಾನ ಮಂದಿರದಲ್ಲಿ ಒಂದು ಸ್ವಲ್ಪ ಹೊತ್ತು ಕುಳಿತರೆ,ಸಾಕು ಮನಸ್ಸಿಗೆ ಎಲ್ಲಿಲ್ಲದ ನೆಮ್ಮದಿ ಭಾಸವಾಗುತ್ತದೆ. ಎದುರಿಗಿನ ಗುಡ್ಡ ಭೂ ತಾಯಿಯು ಹಸಿರು ಸೀರೆ ಉಟ್ಟು ಕಂಗೊಳಿಸುವಂತಿದೆ , ನದಿಯ ಹಿನ್ನೀರು ಕಣ್ಣಿಗೆ ಮುದನೀಡುತ್ತದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಅಲ್ಲದೆ ಬೇರೆ ಜಿಲ್ಲೆಯ ಭಕ್ತಾದಿಗಳು ಕೂಡ ಬಂದು ವೀರಾಂಜನೇಯನ ಕೃಪೆಗೆ ಪಾತ್ರರಾಗುವುದು ವಿಶೇಷವಾಗಿದೆ.

ಪರ್ವತ ಏರಲು ವಾಹನಗಳಿಗೆ ರಸ್ತೆ ಚೆನ್ನಾಗಿದ್ದು, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಭಿವೃದ್ಧಿಗಾಗಿ ಇನ್ನು ಹೆಚ್ಚಿನ ಆರ್ಥಿಕ ಸಹಾಯದ ಅವಶ್ಯವಿದೆ ಎಂಬುದು ಇಲ್ಲಿ ಬರುವ ಭಕ್ತರ ಅಭಿಲಾಶವಾಗಿದೆ.

ವರದಿ :-ಮಂಜುನಾಥ್ ಉಪ್ಪಾರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend