ಕೂಡ್ಲಿಗಿ:ಅರ್ಥಪೂರ್ಣ ಲಕ್ಷ್ಮೀಪೂಜೆಯೊಂದಿಗೆ ದೀಪಾವಳಿ ಆಚರಣೆ…!!!

Listen to this article

ಕೂಡ್ಲಿಗಿ:ಅರ್ಥಪೂರ್ಣ ಲಕ್ಷ್ಮೀಪೂಜೆಯೊಂದಿಗೆ ದೀಪಾವಳಿ ಆಚರಣೆ.

– ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ,ದೀಪಾವಳಿ ಹಬ್ಬವನ್ಜು ಬಹು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಗರೀಕರು ಹಾಗೂ ಆಸ್ತಿಕರು ತಮ್ಮ ಮನೆಗಳಲ್ಲಿ, ವಿಧಿವತ್ತಾಗಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಆರಾಧಿಸಿ ಪೂಜಿಸಿ ಹಬ್ಬ ಆಚರಿಸಿದರು. ಲಕ್ಷ್ಮೀದೇವಿಯನ್ನು ವಿಧಿವತ್ತಾಗಿ ಪೂಜೆ ಮಾಡಿ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪದ್ಧತಿಯಂತೆ, ನೆರೆ ಹೊರೆಯ ಸುಮಂಗಳಿಯರನ್ನು ಹಾಗೂ ಯುವತಿಯರನ್ನ ಆಹ್ವಾನಿಸಿ ಅವರಿಂದ ಲಕ್ಷ್ಮೀದೇವಿಗೆ ಆರತಿ ಬೆಳಗಿಸಿ ಅವರಿಗೆ ಉಡಿತುಂಬಿ ಹಾರೈಸುವುದು ವಾಡಿಕೆಯಿದೆ. ಹಬ್ಬದ ಪ್ರಯುಕ್ತ ಹೋಳಿಗೆ ಸೇರಿದಂತೆ ಬಗೆ ಬಗೆ ಖಾಧ್ಯಗಳನ್ನು ಲಕ್ಷ್ಮೀದೇವಿಗೆ ಅರ್ಪಿಸಿ,ನಂತರ ಎಲ್ಲರೂ ಒಟ್ಟಾಗಿ ಹಬ್ಬದೂಟ ಸವಿಯೋದು ಹಬ್ಬದ ವಿಶೇಷವಾಗಿದೆ.

ದೀಪಾವಳಿ ಎಂದರೆ ಪಟಾಕಿ ಪಟಾಕಿ ಎಂದರೆ ದೀಪಾವಳಿ ಎಂದರ್ಥ, ಅಂತೆಯೇ ಮಕ್ಕಳು ಮಹಿಳೆಯರು ದೀಪವನ್ನು ಬೆಳಗುತ್ತಾರೆ ಮತ್ತು ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿ ಸಂಭ್ರಮಿಸುತ್ತಾರೆ. ಅಂತೆಯೇ ಕೂಡ್ಲಿಗಿ ಪಟ್ಟಣದಲ್ಲಿ ದೀಪಾವಳಿಯನ್ನು ನಾಗರೀಕರು ಬಹು ವಿಜೃಂಭಣೆಯಿಂದ ಆಚರಿಸಿದರು, 2ನೇ ವಾರ್ಡಿನವಾಸಿ ಶ್ರೀಮತಿ ರೇಣುಕಾ ಷಣ್ಮುಖಪ್ಪರವರ ಮನೆಯಲ್ಲಿ. ದೀಪಾವಳಿಯನ್ನು ಬಹು ಅರ್ಥಪೂರ್ಣವಾಗಿ, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಈ ಮೂಲಕ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಲಕ್ಷ್ಮೀದೇವಿಯನ್ನ ಆರಾಧಿಸಿ ಪೂಜಿಸಿ ದೀಪಾವಳಿ ಹಬ್ಬ ಆಚರಿಸಿದರು…

ವರದಿ. ವೃಷಬೇಂದ್ರಿ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend