ಯಾವ ಮತ್ತಿನಲ್ಲೋ!!!ಅಥವಾ ಗಮ್ಮತ್ತಿನಲ್ಲಿ ಆಗಿರುವ ಎಡವಟ್ಟಿಗೆ ಈ.. ಗ್ರಹಚಾರದಿಂದ ಗ್ರಾಹಕನಿಗೆ ಶಿಕ್ಷೆ…!!!

Listen to this article

KEB ಯವರ ಹಗಲು ದರೋಡೆ…….
ಆತ್ಮೀಯರೆ ಈ ಬಿಲ್ ನಲ್ಲಿ ಗುರುತು ಮಾಡಿರುವುದೊಮ್ಮೆ ವೀಕ್ಷಿಸಿ ನಿಮ್ಮ ಬಿಲ್ ನಲ್ಲಿಯೂ ಹೀಗೆ ಬಂದಿರಬೇಕಲ್ಲವೇ ಇದು ಏನೆಂದು ತಿಳಿದಿದೆಯಾ ನಾನು ಈಗತಾನೆ keb ಯವರನ್ನು ವಿಚಾರಿಸಿದಾಗ ತಿಳಿದುಬಂದಿದ್ದು ಹಾಗೂ ಇದು ಇವರ ಹಗಲು ದರೋಡೆ ಎಂದು..
ವಿಷಯ ಏನಪ್ಪ ಅಂದ್ರೆ (( ಇ.ಹೊ.ಮೊತ್ತ)) ಇಂದನ ಹೊಂದಾಣಿಕೆ ಮೊತ್ತ ಅಂದ್ರೆ ನಾವು ಬಳಕೆ ಮಾಡದೇಇರುವ ವಿದ್ಯುತ್ ಗೆ ನಾವು ಹಣ ಸಂದಾಯ ಮಾಡುತ್ತಿರುವುದು… ಯಾರೋ ಕಳ್ಳಮಾರ್ಗದಿಂದ ಬಳಕೆ ಮಾಡಿರುವ ವಿದ್ಯುತ್ ಗೆ ನಾವು ಹಣ ಕಟ್ಟಬೇಕಾಗಿರುವುದು
ಕೇಳಿದರೆ ಆಶ್ಚರ್ಯ ವಾಗುತ್ತಿದೆ ಅಲ್ಲವೇ!! ಹೌದು ನಿಜ…
ಪ್ರತಿಯೊಂದು TC ಬಳಿ ಅಳವಡಿಸಿರುವ ಮೀಟರ್ ಗೂ ನಮ್ಮ ಮನೆಯಲ್ಲಿ ಅಳವಡಿಸಿರುವ ಮೀಟರ್ ನಲ್ಲಿ ಬಳಕೆ ಮಾಡಲಾದ ವಿದ್ಯುತ್ ಗೂ ಆದ ವ್ಯತ್ಯಾಸದ ಹಣವನ್ನು ಆ TC ಇಂದ ಸಂಪರ್ಕಿಸಲಾದ ಎಲ್ಲಾ ಮೀಟರ್ ಗಳಿಗೂ ಹೆಚ್ಚು ವರಿ ಬಿಲ್ ಕೊಟ್ಟು KEB ಯವರು ಮಾಡುತ್ತಿರುವ ಹಗಲು ದರೋಡೆ… ನೀವು ಒಮ್ಮೆ ನಿಮ್ಮ ಬಿಲ್ ಪರೀಕ್ಷಿಸಿಕೊಳ್ಳಿ ಇಲ್ಲಿಯವರೆಗೆ ಎಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸಿದ್ದೀರೆಂದು.

ಹಲವಾರು ಗ್ರಾಹಕರು ತಮ್ಮ ಹಳಲನ್ನು, ತೋಡಿಕೊಂಡರು ಸಹ ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಪಲವಾಗಿರುವುದು ಮಾತ್ರ ತುಂಬಾ ದುಃಖ್ಖಕರವಾದ ವಿಷಯ. ಇಡೀ ರಾಜ್ಯದಲ್ಲಿ ವಿದ್ಯುತ್ ಇಲಾಖೆಯಲ್ಲಿ ಇದ್ದ ಬೇಸಿಕ್ ಸಂಬಳ, ಬೆರ್ಯವಾ ಇಲಾಖೆಯ ಸರ್ಕಾರಿ ನೌಕರಿಗೆ ಇಲ್ಲ ಇದರ ಒಂದು ದುರುಪಯೋಗದಿಂದ ಈ ರೀತಿಯ ಅವಘಡಗಳು ಸಂಭವಿಸಬಹುದೇ ಎನ್ನುವ ಒಂದು ಸಾರ್ವಜನಿಕರ ಪ್ರಶ್ನೆಗೆ ಇಂಧನ ಸಚಿವರು ಹಾಗೂ ಇಲಾಖೆಯ ಮೇಲಾಧಿಕಾರಿಗಳು ಉತ್ತರ ಕೊಡಬೇಕು ಏಕೆಂದರೆ, ರಾಜ್ಯದಲ್ಲಿ ಸಾರ್ವಜನಿಕರು ಈ ಒಂದು ಇಲಾಖೆಯನ್ನು “ಬೆಳಕನ್ನು ನೀಡುವ ನಂದಾ ದೀಪವೆಂದು ತಿಳಿದುಕೊಂಡಿದ್ದಾರೆ “ಹಾಗೂ ಇದರಲ್ಲಿಯೂ ಸಹ ಪ್ರಾಮಾಣಿಕ ಹಾಗೂ ನಿಷ್ಠಾವಂತ ಅಧಿಕಾರಿಗಳು ಇರುವುದರಿಂದ, ಮಳೆ, ಗಾಳಿ, ಎನ್ನುವ ಒಂದು ಸಮಯದಲ್ಲಿಯು ಸಹ ವಿದ್ಯುತ್ ದೀಪವನ್ನು ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಾಣುತ್ತಿರುವುದರಲ್ಲಿ ಎರಡು ಮಾತಿಲ್ಲ ಅದನ್ನು ಬಿಟ್ಟು. ರಾಜ್ಯದಲ್ಲಿ ಹಲವಾರು ಗ್ರಾಹಕರ ಹೆಸರು ಬದಲಾವಣೆಯಾದರೂ ಗಮನಿಸದ ಹಲವಾರು ಉದಾಹರಣೆಗಳು ಸಹ ಉಂಟು, ಅದನ್ನು ಬಿಟ್ಟರೆ ಎರ್ರಾ, ಬಿರ್ರಿ, ಬಿಲ್ ಮೀಟರ್ ಪ್ರಾಬ್ಲಮ್ ಇರಬಹುದೊ ಅಥವಾ ಹಳ್ಳಿಗಳಲ್ಲಿರುವ ಮೀಟರ್ ಅಧಿಕಾರಿಯ, ಡಾಬಾ ಊಟದ ಗಮ್ಮತ್ತಿರಬಹುದೊ “ಎನ್ನುವ ಒಂದು ಶಂಕೆ ಹಲವಾರು ಗ್ರಹಕರಲ್ಲಿ ಕಾಡುತ್ತಿರುವ ಯಕ್ಷ ಪ್ರಶ್ನೆ. ಇದ್ದ ಮಟ್ಟಿಗೆ ಬೆಸ್ಕಾಂ ಪರವಾಗಿಲ್ಲ, ಜೇಸ್ಕಾಂ ಆಡಳಿತ ವ್ಯವಸ್ಥೆ ಪೂರ್ಣ ಅದಗೆಟ್ಟಿದೆ ಎನ್ನುತ್ತಾರೆ ಉತ್ತರ ಕರ್ನಾಟಕದ ಹಲವಾರು ಗ್ರಾಹಕರು ಇದಕ್ಕೆ ಉದಾಹರಣೆ… ಈ ಒಂದು ನೈಜ್ಯ ಸಂಗತಿಯೇ ಸಾಕು ಯಾಕೆ!!!
ಇಲ್ಲಿರುವ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವ ಅಥವಾ ನಾನಿರೋದೇ ಇಗೆ ನನ್ನನ್ನು ಯಾರು ಏನೂ ಮಾಡಿಕೊಳ್ಳಲು ಸಾಧ್ಯ ಎನ್ನುವ ದುರಂಕಾರನ ಇದಕ್ಕೆಲ್ಲ ಉತ್ತರ ಇಲಾಖೆಯವರೇ ಕೊಡಬೇಕು ಮತ್ತು ಇಂತ ಹಗಲು ಕುರುಡರನ್ನು ಅತೀ ಬೇಗನೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡಿ, ಜಾಸ್ತಿ ಒತ್ತಡವಿರುವ ಪ್ರದೇಶಗಳಿಗೆ ಕಳುಹಿಸಿ ಸರಿಯಾಗಿ ಕಾರ್ಯವನ್ನು ನಿರ್ವಹಿಸದೆ ಇರುವ ಸಮಯದಲ್ಲಿ ನೋಡಿ ನೇರವಾಗಿ ಮನೆಗೆ ಕಳುಹಿಸಿ ಸಾಕಷ್ಟು ಟೆಕೆನಿಕಲ್ ವಿದ್ಯಾಭ್ಯಾಸವನ್ನು ಮಾಡಿರುವ ನಿರುದ್ಯೋಗಿಗಳು ಸಾಕಷ್ಟು ಜನರು ಹೊರಗಡೆ ಕಾಯುತ್ತಿದ್ದಾರೆ. ಮೋದಿ ಸರ್ಕಾರ ಬದಲಾವಣೆಯ
ಹಾದಿಯಲ್ಲಿ ಸಾಗುತ್ತಿದೆ ಎನ್ನುವ ಬುರುಡೆ ಮಾತನ್ನು ಬದಿಗೊತ್ತಿ, ಹಳ್ಳಿಗಳಲ್ಲಿ ನಿದ್ದಿ ಮಾಡುವ ಸರ್ಕಾರಿ ಶಿಕ್ಷಕರಿದ್ದಾರೆ, ಆಗೂ ಸರಿಯಾದ ಸರ್ಕಾರಿ ಸಮಯಕ್ಕೆ ಹಾಜರಾಗದ ಮತ್ತು ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿರುವ ಭ್ರಷ್ಟಾರಿದ್ದಾರೆ.ಇದೆ ತರನಾಗಿ ಆರೋಗ್ಯ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಸಾರ್ವಜನಿಕಗೆ ಸ್ಪಂದಿಸದ ಅರೋಗ್ಯ ಅಧಿಕಾರಿಗಳಿದ್ದಾರೆ ಪ್ರಶ್ನೆ ಮಾಡಿದರೆ, (ಬಿಪಿ )ಇದೆ ನನಗೆ ಎನ್ನುವ ನುಣುಪಾದ ಉತ್ತರ ಎಷ್ಟೊಂದು ಅದಗೆಟ್ಟ ಆಡಳಿತ ವ್ಯವಸ್ಥೆ ಸರ್ಕಾರಿ ಭ್ರಷ್ಟ ದುರಂಕಾರಿಗಳಿಗೆ ಯಾಕೆ ಸಾರ್ವಜನಿಕರು ಕಟ್ಟುವ ತೆರಿಗೆಯಲ್ಲಿ ಇವರ ಕುಟುಂಬದ ಸದಸ್ಯರನ್ನು ಸಾಕಲು “ಸರ್ಕಾರಿ ನೌಕರಿ “ಬೇಕು ಬಡವರ ಸೇವೆ ಮಾಡಲು ಮಾತ್ರ ಆಗಲ್ಲ ಏನಿದು. ಒಬ್ಬ ಸರ್ಕಾರಿ ನೌಕರನಿಗೆ ಜಾಸ್ತಿ ವಿದ್ಯುತ್ ಬಿಲ್ ಬಂದರೆ ಕಟ್ಟಲು, ಅದು ದೊಡ್ಡ ಸುದ್ದಿ ಆದೆ ತರನಾಗಿ ಎಷ್ಟೋ ಬಡ ರೈತರು ಇಂದಿಗೂ ರಾಜ್ಯದಲ್ಲಿ ವಿದ್ಯುತ್ ಬಿಲ್ ಕಟ್ಟಲಾಗದೆ ತಮ್ಮ ಪಂಪ್ ಸೆಟ್ ಗಳನ್ನು ಆಗೇ ಬಿಟ್ಟಿರುವ ನೇಣು ಕುಣಿಕೆಗೆ ಕೊರಳನ್ನು ಒಡ್ಡಿರುವ ಉದಾಹರಣೆಗಳು ಸಾಕಷ್ಟಿವೆ ಎಂತಹ ವಿಪರ್ಯಾಸ ಅಲ್ವಾ ಭ್ರಷ್ಟಚಾರ ಸರ್ಕಾರದ ದೋರಣೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಇಲ್ಲವಾದರೆ ಇಡೀ ರಾಜ್ಯಕ್ಕೆ “”ಎಚ್ಚರಿಕೆಯ ಸಂದೇಶ ರವಾನೆ ಮಾಡಲಾಗುವುದು “”ಎಚ್ಚರಿಕೆ ಸುದ್ದಿಗೆ ಎಚ್ಚೆತ್ತುಕೊಳ್ಳುವರೇ ಹಗಲು ದರೋಡೆ ಅಧಿಕಾರಿಗಳು ಕಾಯ್ದು ನೋಡೋಣ…

ವರದಿ. ಮಹಾಲಿಂಗ, ಎಚ್, ಗಗ್ಗರಿ (DSS)ಜಿಲ್ಲಾ ಸಂಚಾಲಕರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend