ಮಳೆಯ ನೀರಿನಲ್ಲಿ ಬಿಸಿಯೂಟವನ್ನು ಮಾಡುವ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು????

Listen to this article

ಮಳೆಯ ನೀರಿನಲ್ಲಿ ಬಿಸಿಯೂಟವನ್ನು ಮಾಡುವ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು?

ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚೋಬನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ದುಸ್ಥಿತಿ ಈ ಶಾಲೆಯಲ್ಲಿ ಸರಿಸುಮಾರು ಒಂದರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಆದರೆ ಈ ಶಾಲೆಯಲ್ಲಿ ಮಳೆ ಬಂತೆಂದರೆ ಸಾಕು ಶಾಲೆಯ ತುಂಬಾ ಮಳೆ ನೀರು ತುಂಬಿಕೊಂಡು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ ಆದಕಾರಣ ಸಂಬಂಧಪಟ್ಟ ಶಿಕ್ಷಣ ಇಲಾಖೆಯವರು ಈ ಶಾಲೆಗೆ ಭೇಟಿ ಕೊಟ್ಟು ಕೂಡಲೇ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಕೋರಿದ್ದಾರೆ ಇದೇ ಸಂದರ್ಭದಲ್ಲಿ ಕಂಚೋಬನಹಳ್ಳಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಗೂ ಗ್ರಾಮದ ಸಾರ್ವಜನಿಕರು ಹಾಜರಿದ್ದರು ಈ ಒಂದು ಸ್ಥಿತಿ ತುಂಬಾ ದಿನಗಳಿಂದ ಇದ್ದು ಇತ್ತ ಕಡೆಗೆ ಗಮನವನ್ನು ಹರಿಸುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವುದೆ ಬೇಸರದ ಸಂಗತಿ ಎಂದು ತಮ್ಮ ಅಳಲನ್ನು ಹೇಳಿಕೊಂಡರು ಇನ್ನಾದರೂ ಈ ಮಕ್ಕಳ ಒಂದು ಕಷ್ಟಕ್ಕೆ ಶಿಕ್ಷಣ ಇಲಾಖೆ ಸ್ವಂದಿಸಲಿ ಎನ್ನುವುದೇ ನಮ್ಮ ಒಂದು ಪತ್ರಿಕಾ ತಂಡದ ಆಶಯ..

ವರದಿ.ಬಸಪ್ಪ ಬಣವಿಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend