ಮಾರ್ಗಸೂಚನೆಗಳ ಪಾಲನೆಗೆ, ಸಾರ್ವಜನಿಕರ ಸಹಕಾರ ಅತ್ಯಗತ್ಯ- ವ.ಸಂ.ಅಧ್ಯಕ್ಷ ಜಿ.ಹೊನ್ನೂರಪ್ಪ…!!!

Listen to this article

ಮಾರ್ಗಸೂಚನೆಗಳ ಪಾಲನೆಗೆ, ಸಾರ್ವಜನಿಕರ ಸಹಕಾರ ಅತ್ಯಗತ್ಯ- ವ.ಸಂ.ಅಧ್ಯಕ್ಷ ಜಿ.ಹೊನ್ನೂರಪ್ಪ.

ವಿಜಯನಗರ ಜಿಲ್ಲೆ ಕೂಡ್ಲಿಗಿ, ಕೋವಿಡ್ ಮಾರ್ಗಸೂಚಿ ಅನ್ವಯ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳ ಕಾರ್ಯಕಲಾಪದಲ್ಲಿ.ಮಹತ್ತರ ಬದಲಾವಣೆ ಮಾಡಿ ನಿಯಮಗಳ ಪಾಲನೆಗೆ ಹೈಕೋರ್ಟ್ ಸೂಚಿಸಿದ್ದು, ಕೂಡ್ಲಿಗಿ ನ್ಯಾಯಾಲಯದಲ್ಲಿ ಸಾರ್ವಜನಿಕರ ಹಾಗೂ ಕಕ್ಷಿದಾರರ ಅನಗತ್ಯ ಪ್ರವೇಶ ನಿಷೇಧಿಸಲಾಗಿದೆ. ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಕಕ್ಷಿದಾರರು ಸಹಕರಿಸುವಂತೆ ವಕೀಲರ ಸಂಘದ ಅಧ್ಯಕ್ಷರಾದ ಜಿ.ಹೊನ್ನೂರಪ್ಪರವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಅವರು ಮಾತನಾಡಿ, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಸಾರ್ವಜನಿಕರ ಹಾಗೂ ಕಕ್ಷಿದಾರರ ಪ್ರವೇಶ ನಿಷೇಧಿಸಿ ಕಾರ್ಯಾಚರಣೆಯ ವಿಧಾನ (ಎಸ್.ಓ.ಪಿ)ವನ್ನು ಹೊರಡಿಸಿದೆ. ಈ ಹಿನ್ನಲೆಯಲ್ಲಿ ವಿಚಾರಣಾ ನ್ಯಾಯಾಲಯ (ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಸಣ್ಣ ಕಾರಣಗಳ ನ್ಯಾಯಾಲಯ ಮತ್ತು ಔದ್ಯಮಿಕ ಟ್ರಿಬಿನಲ್ ಒಳಗೊಂಡಂತೆ) ಗಳ ಕಾರ್ಯಕಲಾಪವನ್ನು ನಡೆಸುವ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯವು, ನೂತನ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್.ಓ.ಪಿ)ವನ್ನು ಹೊರಡಿಸಿದೆ. ಮುಂದಿನ ಆದೇಶದ ವರೆಗೆ ಸದರಿ ಎಸ್.ಓ.ಪಿ ಯ ಅಧಿಸೂಚನೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕಾರಣ ಎಲ್ಲರೂ ಸಹಕರಿಸಬೇಕೆಂದು ಅವರು ಕೋರಿದರು.ವಕಿಲರ ಸಂಘದ ಕಾರ್ಯದರ್ಶಿ ಬಿ.ಸಿದ್ಲಿಂಗಪ್ಪ, ವಕೀಲರಾದ ಸಿ.ವಿರುಪಾಕ್ಷಪ್ಪ,ಮಲ್ಲಿಕಾರ್ಜುನಸ್ವಾಮಿ,ಕೊಟ್ರಗೌಡ,ನಾಗರಾಜ,ವೆಂಕಟೇಶ್ ಮತ್ತಿತರರಿದ್ದರು.
*ಅಧಿಸೂಚನೆ ವಿವರ:-*
*ಪ್ರಕರಣವನ್ನು ದಾಖಲು ಮಾಡುವ ಬಗ್ಗೆ ಸಾಧ್ಯವಾದಷ್ಟು ಎಲ್ಲೆಡೆ,ಈ ಫೈಲಿಂಗ್ ಮೂಲಕ ಕೇಸುಗಳನ್ನು ದಾಖಲಿಸಬಹುದು.ಅಥವಾ ಆಯಾ ನ್ಯಾಯಾಲಯಗಳ ಅಧಿಕೃತ ಇಮೇಲ್ ಗೆ ಸಿ.ಐ.ಎಸ್ ಸಾಫ್ಟ್‌ವೇರ್ ಮೂಲಕ, ಯಾ ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಕಳಿಸುವ ಮೂಲಕ ಆಯಾ ನ್ಯಾಯಾಲಯಗಳಲ್ಲಿ ಕೇಸುಗಳನ್ನು ದಾಖಲಿಸಬಹುದು.
*ಭೌತಿಕವಾಗಿ ಪ್ರಕರಣಗಳನ್ನು ದಾಖಲಿಸುವ ಬಗ್ಗೆ”: ಮುಖ್ಯ ಕಟ್ಟಡದ ಹೊರಗೆ ಅಗತ್ಯವಿರುಷ್ಟು ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗುವುದು. *ಕ್ರಿಮಿನಲ್ ಮತ್ತು ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಇರುತ್ತದೆ. *ನ್ಯಾಯಾಲಯದ ಶುಲ್ಕ, ನಕಲು ಅರ್ಜಿ ಸಹಿತ ಪಾವತಿಗಳಿಗೆ ಕೂಡ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುತ್ತದೆ.
*ವಕೀಲರು ಯಾ ಅವರ ಸಹೋದ್ಯೋಗಿಗಳು, ಗುರುತಿನ ಚೀಟಿಯೊಂದಿಗೆ ಸರದಿಯ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಈ ಕೌಂಟರ್‌ಗಳ ಪ್ರಯೋಜನ ಪಡೆಯಬಹುದಾಗಿದೆ. 2020, 2021ರಲ್ಲಿ ಪ್ರತ್ಯೇಕ ಕೌಂಟರ್ ಮಾಡಲಾದ ಜಾಗವನ್ನೇ ಈ ಬಾರಿಯೂ ಆಯ್ಕೆ ಮಾಡಬಹುದು.
*ಭೌತಿಕವಾಗಿ ಪ್ರಕರಣಗಳನ್ನು ದಾಖಲಿಸುವ ನಿಟ್ಟಿನಲ್ಲಿ ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಪ್ರತ್ಯೇಕವಾದ ವ್ಯವಸ್ಥೆಗಳನ್ನು ಅನುಸರಿಸುವುದು. ಅವುಗಳೆಂದರೆ;
*ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ, ಮೇಲುಸ್ತುವಾರಿ ನೋಡಿಕೊಳ್ಳಲು ನ್ಯಾಯಾಲಯದಿಂದ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುವುದು.
*ಫೈಲಿಂಗ್ ಕೌಂಟರ್ ನಲ್ಲಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿರುವಂತಹ ಸಿಬ್ಬಂದಿ ಯಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು, ಕಾರ್ಯಕ್ರಮಕ್ಕೆ ಮುನ್ನ ಸ್ಯಾನಿಟೈಸರ್ ಗಳನ್ನು ಹಾಕಿ ಪ್ರದೇಶವನ್ನು ಸೋಂಕು ಹರಡದಂತೆ ವ್ಯವಸ್ಥೆ ಮಾಡಲಾಗುವುದು.
*ಫೈಲಿಂಗ್ ಕೌಂಟರ್ ನಲ್ಲಿ ವಕೀಲರು, ಅವರ ಸಹೋದ್ಯೋಗಿಗಳು ಮತ್ತು ವೈಯಕ್ತಿಕವಾಗಿ ಕೇಸು ಪ್ರತಿನಿಧಿಸುವ ಪಕ್ಷಕಾರರಿಗೆ ಮಾತ್ರ ಅವಕಾಶ ಇರುತ್ತದೆ
*ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಮಾತ್ರ ನ್ಯಾಯಾಲಯದ ಆವರಣದಲ್ಲಿ ಪ್ರತ್ಯೇಕ ಕೌಂಟರ್ ಮಾಡುವ ಅಧಿಕಾರ ಇರುತ್ತದೆ.
*ಸರಕಾರಿ ವಕೀಲರು, ಸರಕಾರಿ ಅಭಿಯೋಜಕರು ಮತ್ತು ಸರಕಾರವನ್ನು ಪ್ರತಿನಿಧಿಸುವ ಇತರೆ ವಕೀಲರಿಗೆ, ತಮ್ಮ ವಾದ ಪತ್ರ, ಆಕ್ಷೇಪಣೆ, ತಕರಾರು ಸಲ್ಲಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇರುತ್ತದೆ
*ಸಿವಿಲ್ ವ್ಯಾಜ್ಯಗಳು, ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ರಾಜಿ ಸಂಧಾನ ನಡೆಸುವ ಪಕ್ಷಕಾರರು ಹಾಗೂ ಕ್ರಿಮಿನಲ್ ಕೇಸುಗಳು ಜಾಮೀನು ಸ್ವೀಕೃತಿಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯವು, 10.07.2020 ರಂದು ಮಾಡಿದ ಅಧಿಸೂಚನೆಯ ಪ್ರಕಾರ ವಿಶೇಷ/ ಪ್ರತ್ಯೇಕ ವ್ಯವಸ್ಥೆಯನ್ನು ಅನುಸರಿಸಲಾಗುವುದು
*ಆಯಾ ದಿನದಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಭಾಗವಹಿಸಲು ಮಾತ್ರ ವಕೀಲರು ಮತ್ತು ಅವರ ಸಹೋದ್ಯೋಗಿಗಳಿಗೆ ನ್ಯಾಯಾಲಯ ಪ್ರವೇಶದ ಅವಕಾಶ ಇರುತ್ತದೆ.
*ನ್ಯಾಯಾಲಯದ ಕಟ್ಟಡದಲ್ಲಿ ನಿರ್ದಿಷ್ಟ ಸಂಖ್ಯೆಯ ಪ್ರವೇಶ ದ್ವಾರಗಳನ್ನು ತೆರೆಯಲಿದ್ದು, ಆ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಈ ಹಿಂದಿನಂತೆ ಸೂಕ್ತ ಪರಿಶೀಲನೆ/ತಪಾಸಣೆ ಮಾಡಲಾಗುವುದು.
*ಎಲ್ಲಾ ವಕೀಲರು ತಮ್ಮ ಮೊಬೈಲ್ ಗಳಲ್ಲಿ ಟೆಲಿಗ್ರಾಂ ಆಪ್ ನ್ನು ಡೌನ್ಲೋಡ್ ಮಾಡುವ ಮೂಲಕ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯದ ಲಿಂಕುಗಳನ್ನು ಬಳಸಿ ಕಾರ್ಯಕಲಾಪದ ಹಂತವನ್ನು ತಿಳಿದುಕೊಳ್ಳಬಹುದು
*ಗುರುತಿನ ಚೀಟಿ ಹೊಂದಿರುವ ವಕೀಲರು ಮತ್ತು ಅವರ ಸಹೋದ್ಯೋಗಿಗಳಿಗೆ ಮಾತ್ರ ನ್ಯಾಯಾಲಯದ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇದರ ಹೊರತಾಗಿ ಬರುವ ವಕೀಲರು ಅವರ ಸಿಬ್ಬಂದಿ ಹಾಗೂ ವೈಯಕ್ತಿಕ ಪಕ್ಷಗಾರರಿಗೆ ನ್ಯಾಯಾಲಯ ಪ್ರವೇಶ ನಿರ್ಬಂಧ ಇರುತ್ತದೆ.
*ಆರೋಪಿಗಳನ್ನು ಹಾಜರುಪಡಿಸುವ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಪ್ರವೇಶದ ಅವಕಾಶ ಇರುತ್ತದೆ, *ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಕನಿಷ್ಠ ಆರು ಅಡಿಗಳ ಅಂತರ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ವಕೀಲರು ಅವರ ಸಿಬ್ಬಂದಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಲು ಅವಕಾಶ ಇರುತ್ತದೆ.
*ಪಕ್ಷಕಾರರು ಅನಗತ್ಯವಾಗಿ ನ್ಯಾಯಾಲಯಕ್ಕೆ ಆಗಮಿಸದಂತೆ ತಡೆಯುವ ಜವಾಬ್ದಾರಿ, ಆಯಾ ವಕೀಲರ ಸಂಘದ್ದಾಗಿರುತ್ತದೆ. ಅಗತ್ಯದ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲರ ಸಂಘ ಪಕ್ಷಕಾರರಿಗೆ ಮನವಿ ಮಾಡಬೇಕು, *ಯಾವುದೇ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು ಕ್ರೀಡಾ ಚಟುವಟಿಕೆಗಳಿಗೆ ವಕೀಲ ಸಂಘದಲ್ಲಿ ಅವಕಾಶ ಇರುವುದಿಲ್ಲ,
ನ್ಯಾಯಾಲಯ ಪ್ರವೇಶಿಸುವ ಎಲ್ಲ ವ್ಯಕ್ತಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುವುದು, ಆ ಸಮಯದಲ್ಲಿ ಕೋವಿಡ್ ಗುಣ ಲಕ್ಷಣಗಳು ಕಂಡುಬಂದಲ್ಲಿ ಅಂಥವರ ಪ್ರವೇಶ ನಿರಾಕರಿಸಲಾಗುವುದು, ತುರ್ತು ಸಂದರ್ಭದಲ್ಲಿ ಮಾತ್ರ, ನ್ಯಾಯಾಲಯಗಳು ಹೈಬ್ರಿಡ್ ಮಾದರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದವನ್ನು ಆಲಿಸಬಹುದಾಗಿದೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend