ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹೊಸ ಕೇಂದ್ರ ಉದ್ಘಾಟನೆ ಮಾಡಲಾಯಿತು…!!”ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನೇತ್ರಾವತಿ ಎಂಬ ಹೊಸ ಕೇಂದ್ರ ಉದ್ಘಾಟನೆ ಮಾಡಲಾಯಿತು…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ವಲಯದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನೇತ್ರಾವತಿ ಎಂಬ ಹೊಸ ಕೇಂದ್ರ ಉದ್ಘಾಟನೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಗೌರವಾನ್ವಿತ ಕಲ್ಯಾಣ್ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಯುತ ಪುರುಷೋತ್ತಮ್ ಪಿಕೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ಯುತ ಕಾವಲಿ ಶಿವಣ್ಣ ಶ್ರೀಯುತ ಸಚಿನ್ ಹಾಗೂ ಶ್ರೀಯುತ ಸಿದ್ದೇಶ ತಾಲೂಕಿನ ಮಾನ್ಯ ಯೋಜನಾಧಿಕಾರಿ ಮಂಜುನಾಥ್.ಬಿ ಜ್ಞಾನವಿಕಾಸ ಕಾರ್ಯಕ್ರಮದ ಪ್ರಬಂಧಕ್ಕೆ ಶ್ರೀಮತಿ ಶ್ರೀದೇವಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಶಿಸ್ತುಬದ್ಧ ಆರ್ಥಿಕ ವ್ಯವಹಾರ ಶಿಸ್ತುಬದ್ಧವಾದ ಸಭೆಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಸದಸ್ಯರಿಗೆ ಪ್ರಾದೇಶಿಕ ನಿರ್ದೇಶಕರು ಮಾಹಿತಿಯನ್ನು ನೀಡಿದರು ಸಿಎಸ್ಸಿ ಕಾರ್ಯಕ್ರಮದ ಬಗ್ಗೆ ಜನರಿಗೆ ಅನುಕೂಲಗಳ ಬಗ್ಗೆ ತಿಳಿಸಿದರು ಈಗ ಕಾರ್ಮಿಕ ಕಾರ್ಡ್ ಮಾಡುತ್ತಿರುವುದಾಗಿ ತಿಳಿಸಿದರು ಜ್ಞಾನವಿಕಾಸ ಕಾರ್ಯಕ್ರಮ ಶ್ರೀಮತಿ ಹೇಮಾವತಿ ಅಮ್ಮನವರ ಕನಸಿನ ಮಗುವಾಗಿದೆ ಅದರ ಸದುಪಯೋಗ ತಾವೆಲ್ಲರೂ ಪಡೆದುಕೊಳ್ಳಬೇಕು.9 ವರ್ಷಗಳ ಹಿಂದೆ ನಮ್ಮ ತಾಲೂಕಿನಲ್ಲಿ ಸ್ವಸಹಾಯ ಸಂಘಗಳ ರಚನೆಯ ಸಂದರ್ಭದಲ್ಲಿ ಡಾ!! ಡಿ ವೀರೇಂದ್ರ ಹೆಗ್ಗಡೆಯವರು ಆಗಮಿಸಿ ನಮ್ಮ ಕೂಡ್ಲಿಗಿ ಕ್ಷೇತ್ರವನ್ನು ಪುಣ್ಯಕ್ಷೇತ್ರ ಮಾಡಿದರು ಎಂದರು ಆರೋಗ್ಯವಂತರು, ಶಿಕ್ಷಣ ಪಡೆದವರು, ಆರ್ಥಿಕವಾಗಿ ಸದೃಢರಾಗಬೇಕು ,ಎಂದು ತಿಳಿಸಿದರು…

ವರದಿ.ಡಿ.ಎಂ. ಈಶ್ವರಪ್ಪ, ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend