ಸಾಣೆ ಹಿಡಿಯುವರ ಬದುಕಿಗೆ ಸಾಣೆ ಹಿಡಿಯೋರು ಯಾರು!?

Listen to this article

ಸಾಣೆ ಹಿಡಿಯುವರ ಬದುಕಿಗೆ ಸಾಣೆ ಹಿಡಿಯೋರು ಯಾರು!?

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಹೊಸಪೇಟೆ ಪಟ್ಟಣದ ಚಪ್ಪರದಹಳ್ಳಿ ವಾಸಿ ಸಾಣೆ ಮೆಹಬೂಬುಸಾಬ್ ಮಗ ಸಾಣೆ ರಜಾಕ್ ಸಾಬ್. ಏಳಿಕೊಳ್ಳಾಕ ಒಂದೂರು..ತಲೆಮ್ಯಾಗ ಒಂದ್ಸೂರು…ಮಲಗಾಕೆ ಭೂಮ್ತಾಯಿ ಮಂಚಾ… ಎಂಬಂತೆ ನಿತ್ಯ ಅಲೆಮಾರಿ ಜೀವನ ನಡೆಸುವ ಸಾಣೆಯಿಡಿಯುವ ಕಾರ್ಮಿಕ ಸರದಾರರ ಬದುಕಿನ ಅಸಲಿಯತ್ತಾಗಿದೆ ಇದು. ಸಾಣೆ ಹಿಡಿದು ಬಂದ ಬಿಡಿಗಾಸಿನಲ್ಲಿಯೇ ತನ್ನ ಸಂಸಾರದ ಬಂಡಿಯಲ್ಲಿರುವ, ಕುಟುಂಬ ಸದಸ್ಯರನ್ನು ಸಾಕಿ ಸಲಹುತಿದ್ದಾನೆ.ಇದು ಕೇವಲ ಸಾಣೆ ರಜಾಕ್ ಸಾಬ್ ರವರ ಕುಟುಂಬದ ಕಥೆಮಾತ್ರವಲ್ಲ,ಸಾಣೆ ಹಿಡಿದು ಬಂದ ಅಲ್ಪ ಕಾಸಿನಿಂದ ಇಂತಹ ದುಭಾರೀ ದುನಿಯಾ ನಡೆಸುತ್ತಿದ್ದಾರೆಂದರೆ, ಇವರಿಗಿಂತ ಸಾಹಸಿಗರು ಮತ್ತ್ಯಾರಿದ್ದಾರೆ.!? ಎಂಬ ಪ್ರೆಶ್ನೆ ಎಂತಹವರಲ್ಲಿಯೂ ಮೂಡದೇ ಇರದು. ಕೂಡ್ಲಿಗಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ, ಪತ್ರಕರ್ತ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರಾದ ಬಡಿಗೇರ ನಾಗರಾಜರವರ ಮನೆ ಮುಂದೆ.ಸಾಣೆ ಹಿಡಿಯುವಾಗ ಸಾಣೆ ರಜ‍ಾಕ್ ಸಾಬ್ ಸಾಣೆ ಇಡಿಯುವಾಗ ದೊರಕಿದರು,ತಮ್ಮ ಪೂರ್ವಜರಿಂದ ತನಗೆ ಬಳುವಳಿಯಾಗಿ ಬಂದ ಕಸುಬಿನ ಏಳು ಬೀಳಿನ ಕಥೆಯ ಕಂತೆಯನ್ನೇ ಬಿಚ್ಚಿಟ್ಟರು.ತಮ್ಮ ತಂದೆ ಸಾಣೆ ಮೆಹಬೂಬ್ ಸಾಬ್ ಅವರ ತಂದೆಯಿಂದ ತನಗೆ ಬಂದ ಕಸುಬೇ ಸಾಣೆಯಿಡಿಯುದು,ಇದರಲ್ಲೇನಿದೆ ಮಹಾ.!? ಕೇವಲ ಸಾಣೆಯಿಡಿಯುವನಲ್ಲೇನಿದೆ.!? ಸ್ಪೆಷಲ್ ಅಂತೀರಾ..ಅಲ್ಲೇರಿ ಇರೋದು ಹೊಟ್ಟೆಕೇಳುವ ತುತ್ತು ಇಟ್ಟಿಗಾಗಿ ಪರದಾಡವ ಸದರ್ಭದಲ್ಲಿ,ತುಂಬು ಕುಟುಂಬದ ಸದಸ್ಯರೆಲ್ಲರಲ್ಲರನ್ನು ಸಾಕಿ ಸಲಹಿದ ಗರಿಮೆ ಈ ಸಾಣೆ ಯಂತ್ರಕ್ಕಿದೆ..

ಈ ಕಸುಬಿಗಿದೆ.ಮೊದಲೆಲ್ಲ ಕಾಳು ಕಡಿ ಜೊತೆಗೆ ಬಿಡಿಗಾಸು ಬರುತ್ತಿತ್ತು,ಈಗ ಬಿಡಿಗಾಸೇ ಗತಿ ದುಭಾರಿ ದುನಿಯಾದಲ್ಲಿ ಎಲ್ಲವನ್ನುೂ ಕಾಸಿನಿಂದಲೇ ಪಡೆಯಬೇಕಿದೆ. ವಾಸಸ್ಥಾನ ಹೊಸಪೇಟೆ ಅದನ್ನ ಬಿಟ್ಟು ಕಸುಬು ಕರೆಗೆ ಹೋಗೊಟ್ಟು,ಊರು ಊರು ಅಲೆದಾಡಿಬೇಕಿದೆ ಇಲ್ಲವಾದರೆ ಕುಟುಂಬವೇ ಖಾಲಿಹೊಟ್ಟೇಲಿ ಇರಬೇಕಾಗುತ್ತೆ ಅನ್ನುತ್ತಾರೆ ಸಾಣೆ ರಜಾಕ್ ಸಾಬ್. ಹಗಲೆಲ್ಲಾ ಸಾಣೆಯಂತ್ರದೊಂದಿಗೆ ಅಲೆದಾಡಿ ಅಗಲೆಲ್ಲಾ ಸಾಣೆ ಹಿಡಿದು,ತೋಚಿದ್ದಲ್ಲೇ ತಂಗಿ ಹೊಟ್ಟೆಗೆ ಹಿಟ್ಟು ಹಾಕಿಕೊಂಡು,ಹೇಳಿಕೊಳ್ಳಾಕ ಒಂದೂರು..ತಲೆಮ್ಯಾಗೆ ಒಂದುಸೂರು…ಮಲಗೋಕೆ ಭೂಮಿತಾಯಿ ಮಂಚ.

ಎಂಬಂತೆ ಮಲಗುವುದಾಗಿ ತಿಳಿಸುತ್ತಾರೆ ಸಾಣೆ ರಜಾಕ್ ಸಾಬ್. ಕುಟುಂಬವನ್ನು ತಾನು ಹಿಂದಿರುಗಿ ಹೋಗುವವರೆಗೂ ಆ ದೇವರೇ ನೋಡಿಕೊಳ್ಳತ್ತಾನೆ,ನಿತ್ಯ ಊರು ಊರು ತಿರುಗಿ ಸಾಣೆಯಿಡಿಯುತ್ತಾ,ಸಾಣೆ ಯಿಡಿಯುವ ಯಂತ್ರವನ್ನೇ ನಂಬಿಕೊಂಡು ತಾಲೂಕು ಜಿಲ್ಲೆಯ ಅಂಚಿನ ಗ್ರಾಮಗಳಿಗೂ ತೆರಳುತ್ತಾನೆ ರಜಾಕ್. ದುಡಿದ ಹಣದಲ್ಲಿ ಕೂಡಿಟ್ಟುಕೊಂಡು ಹದಿನೈದು ದಿನಕ್ಕೆ ಒಮ್ಮೆ ಮನೆ ತಲುಪುವುದಾಗಿ ತಿಳಿಸುತ್ತಾನೆ ರಜಾಕ್. ಹಗಲೆಲ್ಲಾ ಅಲೆದಾಡಿ ಧಣಿದರೂ ಸಿಗೋದು ಮುನ್ನೂರು ರೂಪಾಯಿ ಮುನ್ನೂರೈವತ್ತು, ಅದರಲ್ಲಿ ತನ್ನ ಅಗತ್ಯ ಕರ್ಚಿಗೆ ಅರ್ಧರೊಕ್ಕ ಹೋದರೆ,ಮಿಕ್ಕೋದು ಅರ್ಧ ರೊಕ್ಕ ಅಂದರೆ ದಿನಕ್ಕೆ ಇನ್ನೂರುಪಾಯಿ ಮಾತ್ರ.ಆದರೂ ತನಗೆ ಸಾಣೆ ಕಸುಬಿನ ಮೇಲೆ ಬೇಸರ ಇಲ್ಲವಂತೆ,ಈ ಸಾಣೆ ಯಂತ್ರವೇ ತಾಯಿ ತಂದೆ ದೇವರು ದಿಂಡಿರು ತನಗೆ ಎನ್ನುತ್ತಾನೆ ಧನ್ಯಭಾವದಿಂದ ರಜಾಕ್ ಸಾಬ್.ಇದರಲ್ಲಿಯೇ ತನ್ನ ಕುಟುಬಂದ ಸಂಸಾರದ ಬಂಡಿ ನಡೆಸುತ್ತಿರುವುದಾಗಿ,ಸಾಣೆ ರಜ‍ಕ್ ಸಾಬ್ ಹೇಳುತ್ತಾ ತನ್ನ ಕಣ್ಣಾಲೆಯದಂಚಿನಲ್ಲಿ ಜಿನುಗಿದ ಹನಿ ನೀರನ್ನ ಒರೆಸಿಕೊಳ್ಳುತ್ತಾರೆ.

ಅಂದು ಇಡೀ ಕುಟುಂಬವನ್ನೇ ಸಾಕಿ ಸಲವಿದ ಸಾಣೆ ಹಿಡಿಯುವ ಕಸುಬು ಕೈಹಿಡಿದು ನಡೆಸಿತ್ತು,ಆಧುನಿಕ ಬದುಕು ಯೂಜ್ ಅಂಡ್ ತ್ರೋ ಬದುಕು ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ.ಸಾಣೆಯಿಡಿಯುವರ ಬದುಕೇ ಆರ್ಥಿಕ ಸಂಕಷ್ಟದಲ್ಲಿದ್ದು ಮೊಂಡಾಗಿದೆ,ಅವರ ಕುಟುಂಬಗಳಿಗೆ ಆರ್ಥಿಕ ನೆರವು ಸರ್ಕಾರ ನೀಡಬೇಕಿದೆ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಳ್ಳುವ ಸಾಣೆಯಿಡಿಯುವವರು, ತೀರಾ ಆರ್ಥಿಕ ಸಂಕಷ್ಟದಲ್ಲಿದ್ದು ಕಾರ್ಮಿಕ ಇಲಾಖೆ ಮೂಲಕ ಅಗತ್ಯ ಆರ್ಥಿಕ ನೆರವು ನೀಡಿ.ಸರ್ಕಾರ ಇವರ ಬದುಕಿಗೆ ಸಾಣೆ ಇಡಿಯಬೇಕಿದೆ ಮೊನಚು ಮಾಡಬೇಕಿದೆ,ಅವರೂ ಕೂಡ ಮುಖ್ಯವಾಹಿನಿಗೆ ಬರಬೇಕಿದೆ ಸರ್ವತೋಮುಖ ಅಭಿವೃದ್ಧಿ ಹೊಂದಬೇಕಿದೆ ಎನ್ನುತ್ತಾರೆ, ಕಾರ್ಮಿಕ ಮುಖಂಡರು, ಹೋರಾಟಗಾರರು, ಪ್ರಜ್ಞಾವಂತರು ಹಾಗೂ ಪತ್ರಕರ್ತರು….

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend