ಸಿದ್ದಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಸಿದ್ದಾಪುರ ಗ್ರಾಮದ ಬಸವೇಶ್ವರ ಸ್ವಾಮಿಯ ರಥೋತ್ಸವ…!!!

Listen to this article

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲ್ಲೂಕು. ಗುಂಡುಮುಣುಗು ಗ್ರಾಮ ಪಂಚಾಯಿತಿ. ಸಿದ್ದಾಪುರ ಗ್ರಾಮ.
ಅದ್ದೂರಿಯಾಗಿ ಜರುಗಿದ ಸಿದ್ದಾಪುರ ಗ್ರಾಮದ ಬಸವೇಶ್ವರ ಸ್ವಾಮಿಯ ರಥೋತ್ಸವ.
ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ ಬಸವೇಶ್ವರ ರಥೋತ್ಸವ ದಿನಾಂಕ 21 12 2021 ರಂದು ವಿಜೃಂಭಣೆಯಿಂದ ಸಕಲ ವಾದ್ಯ ಮೇಳಗಳಿಂದ ಅದ್ದೂರಿಯಾಗಿ ಜರುಗಿತು.
ಗ್ರಾಮದ ದೈವ ಸ್ಥರು ಹಾಗೂ ಸ್ವಾಮಿಗಳಿಂದ ಬಸವೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಬಸವೇಶ್ವರ ಸ್ವಾಮಿಯ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು,
ಸಿದ್ದಾಪುರದ ಹರಿಜನ ಕೇರಿಯ ಭಕ್ತರು, ಬಸವೇಶ್ವರ ಸ್ವಾಮಿಯ ರಥದ ಹಗ್ಗವನ್ನು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ಪೂಜೆ ಪುರಸ್ಕಾರದಿಂದ ವಾದ್ಯ ಮೇಳಗಳಿಂದ ರಥದ ಹಗ್ಗವನ್ನು ತಂದು ರಥಕ್ಕೆ ಹಗ್ಗವನ್ನು ಕಟ್ಟಲಾಯಿತು. ಸಿದ್ದಾಪುರ ಗೊಲ್ಲರಹಟ್ಟಿ ಭಕ್ತಾದಿಗಳಿಂದ, ಹಾಲು, ಮೊಸರು, ತುಪ್ಪದ ನೈವೇದ್ಯವನ್ನು ತಂದು ಬಸವೇಶ್ವರ ಮೂರ್ತಿಗೆ ನೈವೇದ್ಯವನ್ನು ಮಾಡಲಾಯಿತು, ಗ್ರಾಮದ ಮುಖಂಡರು ಹಾಗೂ ದೈವಸ್ಥರ ಭಕ್ತಾದಿಗಳ, ಸಮ್ಮುಖದಲ್ಲಿ ಸ್ವಾಮಿಯ ಪಟ್ಟದ ಹಾರ ಹಾಗೂ ಹೂವಿನ ಹಾರಗಳ ಸವಾಲು ಜರಗಿದವು. ದೈವಸ್ಥರ ಸವಾಲಿನಂತೆ ಸ್ವಾಮಿಯ ಪಟ ಗ್ರಾಮ ಪಂಚಾಯಿತಿ ಸದಸ್ಯರಾದ ಆದಿ ವಿಜಯೇಂದ್ರ 35000. ರೂ,ಗಳಿಗೆ ಸವಾಲಿನಲ್ಲಿ ಸ್ವೀಕರಿಸಿದರು.ನಂತರ 5 ಹೂವಿನ ಹಾರಗಳನ್ನು ಸವಾಲು ಮಾಡಲಾಯಿತು.ಒಂದನೇ ಹೂವಿನ ಹಾರ ಹಡಪದ ಜಗದೀಶ್ ಐದುನೂರು,5,500, 2ನೇ ಹೂವಿನಹಾರ ಶಿಕ್ಷಕರಾದ ಶರಣಪ್ಪನವರು 4000. ಮೂರನೇ ಹೂವಿನ ಹಾರ,5601, ನಾಲ್ಕನೇ ಹೂವಿನ ಹಾರ 2501. ಗಳಿಗೆ ಚಿಕ್ಕೋಬನಹಳ್ಳಿ ಜಯಣ್ಣ,ಕೊನೆಯದಾಗಿ 5ನೇ ಹೂವಿನ ಹಾರ ಕೆ ಗಂಗಾಧರಪ್ಪ 15.501ರೂಪಾಯಿಗಳಿಗೆ ಸವಾಲಿನಲ್ಲಿ ಪಡೆದರು.
ಈ ಕಾರ್ಯಕ್ರಮ ಮುಗಿದ ನಂತರ ಬಸವೇಶ್ವರ ಸ್ವಾಮಿಯರ ರಥೋತ್ಸವ ನಂದಿಕೋಲು ಕುಣಿತ. ವಿವಿಧ ವಾದ್ಯ ಮೇಳಗಳಿಂದ. ನೂರಾರು ಭಕ್ತರ ಸಮ್ಮುಖದಲ್ಲಿ. ಶಾಂತಿಯುತವಾಗಿ ಜರಗಿತು. ಉತ್ಸವ ಮುಗಿದ ನಂತರ ಬಸವೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿಕೊಂಡು, ಗ್ರಾಮದ ಪ್ರಮುಖ ಬೀದಿಗಳಲ್ಲಿ,ಸಂಚರಿಸಿದರು, ಭಕ್ತರು ಮನೆಗಳ ಮುಂದೆ ಬಸವೇಶ್ವರ ಸ್ವಾಮಿಯನ್ನು ಪೂಜಿಸಿದರು. ಗ್ರಾಮದಲ್ಲಿ ಸಂಚರಿಸಿ 6:00 ಗಂಟೆ 30 ನಿಮಿಷಕ್ಕೆ ಬಸವೇಶ್ವರ ಮೂರ್ತಿಯನ್ನು ದೇವಸ್ಥಾನದಲ್ಲಿ ಗುಡಿ ತುಂಬಿಸಲಾಯಿತು.ಈ ರಥೋತ್ಸವದ ದಲ್ಲಿ, ಸಿದ್ದಾಪುರ ವಡ್ಡರಹಟ್ಟಿ, ಗೊಲ್ಲರಹಟ್ಟಿ,, ಸುತ್ತಮುತ್ತಲಿನ ಹಳ್ಳಿಯ ಭಕ್ತಾದಿಗಳು, ಹಾಗೂ ಈ ರಥೋತ್ಸವದ ಅಂಗವಾಗಿ ಬಂದೋಬಸ್ತ್ ನೀಡಲು, ಕಾನಹೊಸಹಳ್ಳಿ ಪೊಲೀಸ್ ಠಾಣೆಗೆ ನೂತನವಾಗಿ ಬಂದ ಎ.ಎಸ್.ಐ .ಎಚ್ ದುರುಗಪ್ಪನವರು. ಪೊಲೀಸ್. ಕಲ್ಲೇಶ್ ರವರು. ಸಿದ್ದಾಪುರ ಗ್ರಾಮದ ಸಮಸ್ತ ಗ್ರಾಮಸ್ಥರು ಭಕ್ತಾದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend