ಬ್ಲಾಕ್ ಫಂಗಸ್ ನಿಂದ ತಂದೆ ಸಾವು -ದುಃಖದ ಮಡುವಿನಲ್ಲೂ ಮಗಳು ಪರೀಕ್ಷೆ…!!!

Listen to this article

ಬ್ಲಾಕ್ ಫಂಗಸ್ ನಿಂದ ತಂದೆ ಸಾವು -ದುಃಖದ ಮಡುವಿನಲ್ಲೂ ಮಗಳು ಪರೀಕ್ಷೆ. ಕೂಡ್ಲಿಗಿ. ಜು. 22 :- ತಂದೆ ಬ್ಲಾಕ್ ಫಂಗಸ್ ನಿಂದ ಬಳ್ಳಾರಿ ವಿಮ್ಸ್ ನಲ್ಲಿ ಕಳೆದ ರಾತ್ರಿ ಮೃತಪಟ್ಟರೆ ಇಂದು ಮಗಳು ತಂದೆ ಕಳಕೊಂಡ ದುಃಖದ ಮಡುವಿನಲ್ಲೂ ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿರುವ ಮನಕಲಕುವ ಘಟನೆ ಜರುಗಿತು. ಹೊಸಹಟ್ಟಿಯ ಸಣ್ಣಓಬಯ್ಯ (51) ಬ್ಲಾಕ್ ಫಂಗಸ್ ಗೆ ಬಲಿಯಾದ ತಂದೆಯಾದರೆ ತಂದೆಯ ಸಾವಿನ ದುಃಖದಲ್ಲೂ ಚಂದನ ಎಂಬ ಮಗಳು ಇಂದು ಕೂಡ್ಲಿಗಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ದೇವರ ವಿಧಿಯಾಟ ಬಲ್ಲವರಾರು ಎಂಬುದಕ್ಕೆ ಕೋವಿಡ್ ಎಂಬ ಮಹಾಮಾರಿ ಜೊತೆಗೆ ವಕ್ಕರಿಸಿಕೊಂಡ ಬ್ಲಾಕ್ ಫಂಗಸ್ ಎಂಬ ದುರ್ವಿಧಿ ಖಾಯಿಲೆಗೆ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿಯ ಸಣ್ಣ ಓಬಯ್ಯ (51) ಜೂನ್ 1ರಂದು ಬ್ಲಾಕ್ ಫಂಗಸ್ ಇರುವ ಬಗ್ಗೆ ವೈದ್ಯರ ಸಲಹೆಯಂತೆ ಕೂಡ್ಲಿಗಿಯಿಂದ ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು ವಾರದ ಹಿಂದಷ್ಟೇ ಈತನಿಗೆ ಖಾಯಿಲೆಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದ್ದು ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಕುಟುಂಬಕ್ಕೆ ಇರುವಾಗಲೇ ಕಳೆದ ರಾತ್ರಿ 11-30ಗಂಟೆ ಸುಮಾರಿಗೆ ವಿಮ್ಸ್ ನಿಂದ ಸಣ್ಣಓಬಯ್ಯ ನ ನಿಧನದ ಸುದ್ದಿ ತಿಳಿದಿದ್ದು ಈತನಿಗಿದ್ದ 4ಜನ ಮಕ್ಕಳಲ್ಲಿ ಕೊನೆಯ ಮಗಳಾದ ಚಂದನ ಕಳೆದೆರಡು ದಿನದ ಹಿಂದೆ ಪರೀಕ್ಷೆ ಎದುರಿಸಿದ್ದು ಇಂದು ಸಹ ಇರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಕಳೆದ ರಾತ್ರಿ ಓದಿನ ತಯಾರಿಯಲ್ಲಿರುವಾಗ ತಂದೆ ಸಾವಿನ ಸುದ್ದಿ ಸಿಡಿಲು ಬಡಿದಂತಾಗಿದ್ದು ರಾತ್ರಿಪೂರ ತಂದೆಯ ಸಾವಿನ ಸುದ್ದಿ ತಿಳಿದು ಕಣ್ಣೀರ ಕಂಬನಿ ಹರಿಸಿ ದುಃಖದ ಮಡುವಿನಲ್ಲಿದ್ದ ಮಗಳು ಚಂದನ ದೇವರ ವಿಧಿಪರೀಕ್ಷೆಯ ನಡುವೆ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ನಂತರ ಇಂದು ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾಳೆಂದು ತಿಳಿದಿದೆ. ಇತ್ತೀಚಿನ ಮಹಾಮಾರಿ ಕಾಯಿಲೆಗಳು ಜನ ಜೀವನದ ಜೊತೆ ಎಂತಹ ವಿಧಿಯಾಟ ಆಡುತ್ತದೆ ಎನ್ನುವುದಕ್ಕೆ ಇಂದಿನ ಘಟನೆ ತಾಜಾ ಉದಾಹರಣೆಯಾಗಿದೆ..

ವರದಿ.ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend