ಕೂಡ್ಲಿಗಿ:ಅಕ್ರಮಗಳ ತಾಣಗಳಾಗಿವೆ.!? ಸರ್ಕಾರಿ ಅನುಪಯುಕ್ತ ಕಟ್ಟಡಗಳು…!!!

Listen to this article

ಕೂಡ್ಲಿಗಿ:ಅಕ್ರಮಗಳ ತಾಣಗಳಾಗಿವೆ.!? ಸರ್ಕಾರಿ ಅನುಪಯುಕ್ತ ಕಟ್ಟಡಗಳು-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿರುವ ಸರ್ಕಾರಿ ಅನುಪಯುಕ್ತ ಕಟ್ಟಡಗಳು,ಅಕ್ರಮ ಚಟುವಟಿಕೆಗಳ ತಾಣವಾಗುತ್ತಿವೆ ಹಾಗೂ ಕೆಲವೆಡೆಗಳಲ್ಲಿ ಜಾಗ ಒತ್ತುವರಿಗೆ ಸಂಚು ನಡೆದಿದೆ ಎಂದು ನಾಗರೀಕರು ದೂರಿದ್ದಾರೆ.
ಪಟ್ಟಣದ ಸಂತೆ ಮೈದಾನದಲ್ಲಿರುವ ಆಸ್ಪತ್ರೆ ಸಿಬ್ಬಂದಿಯ ಹಳೇ ನಿವೇಶನಗಳು,ಹಳೇ ಸಾರ್ವಜನಿಕ ಆಸ್ಪತ್ರೆ, ಅರ್ಧಬಂರ್ದ ಬಿದ್ದಿರುವ ಚಾವಡಿಯ ಅನುಪಯುಕ್ತ ಕಟ್ಟಡ ಸೇರಿದಂತೆ ಇನ್ನೂ ಕೆಲವು ಇಂತಹ ಕೆಲ ಸರ್ಕಾರಿ ಅನುಪಯುಕ್ತ ಕಟ್ಟಡಗಳು ಅಕ್ರಮ ಚಟುವಟಿಕೆಗಳ ತಾಣಗಳಾಗಿವೆ.ಅಕ್ರಮ ಕೋರರ ಅಡ್ಡೆಯಾಗಿದ್ದು ಕೆಲವು ಕಟ್ಟಡಗಳು ಕಸ ಸಂಗ್ರಹ ಕೇಂದ್ರಗಾಳಾಗಿವೆ.ಬಯಲು ಶೌಚಾಲಯಗಳಾಗಿದ್ದು ಸುತ್ಯ ಮುತ್ತ ದುರ್ನಾಥ ಬೀರುತ್ತಿದ್ದು,ಸಹಿಸದ ಕೆಲ ಕುಟುಂಬಗಳು ಅನಿವಾರ್ಯವಾಗಿ ಜಾಗ ಕಾಲಿಮಾಡಿವೆ.
ಈ ದುರಾವಸ್ಥೆಯಿಂದಾಗಿ ಇದರಿಂದಾಗಿ ಇಡೀ ವಾತಾವರಣ ಕಲುಷಿತವಾಗಿದ್ದು,ಹಲವಾರು ಸಾಂಕ್ರಾಮಿಕ ರೋಗಗಳನ್ನು ಉತ್ಪಾಧಿಸುವ ಕಾರ್ಖಾನೆಗಳಂತಾಗಿವೆ.
ಹೀಗಿದ್ದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ತಹಶಿಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಹಲವಾರು ಸಂಘಟನೆಗಳು ದೂರಿವೆ,
ಕೆಲ ವರ್ಷಗಳಿಂದ ಈ ಅವ್ಯವಸ್ಥೆ ಇದ್ದು ಈ ಸಂಬಧಿಸಿದಂತೆ ನಾಗರೀಕರು ಮತ್ತು ಕೆಲ ಸಂಘಟನೆಗಳವರು ಸಾಕಷ್ಟು ಬಾರಿ ಮನವಿ ಮಾಡಿದ್ದು,ಅಧಿಕಾರಿಗಳು ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಜರುಗಿಸಿಲ್ಲ.ಪಟ್ಟಣದಲ್ಲಿ ನೈರ್ಮಲ್ಯತೆ ಕಾಪಾಡಬೇಕಿರುವ ಪಪಂ ಮುಖ್ಯಾಧಿಕಾರಿ ಮುಖ್ಯ ಕರ್ಥವ್ಯಗಳನ್ನೇ ಮಾಡುತ್ತಿಲ್ಲ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಇದು ಆವರ ಜನಪರ ಕಾರ್ಯಕ್ಕೆ ಸಾಕ್ಷಿಯಾಗಿದೆ,ಈ ಅವ್ಯವಸ್ಥೆ ಜನಪ್ರತಿನಿಧಿಗಳು ಜನರಪರ ತೋರುವ ನಿಜವಾದ ಕಾಳಜಿಯಾಗಿದೆ,
ಕಾರಣ ಜಿಲ್ಲಾಧಿಕಾರಿಗಳು ವಸ್ಥು ಸ್ಥಿತಿ ವರದಿ ಪಡೆದು ಶೀಘ್ರವೇ ಸಂತೆ ಮಾರ್ಕೆಟ್ ನಲ್ಲಿರುವ,ಹಳೇ ನಿವೇಶನಗಳನ್ನು ತೆರವು ಗೊಳಿಸಿ ಆ ಸ್ಥಳದಲ್ಲಿಯೇ ಶುಕ್ರವಾರದ ಸಂತೆ ಜರುಗಿಸಲು. ಅಗತ್ಯ ಕ್ರಮಗಳನ್ನು ಮಾಡಬೇಕಾಗಿದೆ ಹಾಗೂ ಹಳೇ ಆಸ್ಪತ್ರೆಯನ್ನ ದುರಸ್ಥಿಗೊಳಿಸಿ, ಉಪ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ಕೇಂದ್ರವನ್ನಾಗಿಸಬೇಕಿದೆ.ಹಳೇ ಚಾವಡಿಯನ್ನು ತೆರವು ಗೊಳಿಸಿ ಗ್ರಂಥಾಲಯವನ್ನು ನಿರ್ಮಿಸಬೇಕಿದೆ,ಈ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳಿಗೆ ಕೆಲ ಸಂಘಟನೆಗಳು ಹಲವು ಬಾರಿ ಮನವಿ ಮಾಡಿದ್ದು.ಯಾವುದೇ ಪ್ರಯೋಜನವಾಗಿಲ್ಲ ಕಾರಣ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಕೋರಿದೆ.

*ಆಲಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ*-
ವಂದೇ ಮಾತರಂ ಜಾಗೃತಿ ವೇದಿಕೆಯ ನಗರ ಘಟಕದ ಪದಾಧಿಕಾರಿಗಳು ಮಾತನಾಡಿದ್ದು,
ಈಗ ನಡೆಯುವ ಶುಕ್ರವಾರದ ಸಂತೆ ಸ್ಥಳ ನಾಗರೀಕರಿಗೆ ಹಾಗೂ ಗ್ರಾಮೀಣ ಜನರಿಗೆ ತುಂಬಾ ದೂರವಾಗುತ್ತಿದೆ.ಕಾರಣ ಹಳೇ ವಸತಿ ನಿಲಯಗಳನ್ನ ತೆರವು ಗೊಳಿಸಬೇಕಿದ್ದು.ಈ ಹಿಂದೆ ಇದ್ದ ಜಾಗದಲ್ಲಿಯೇ ಸುಜ್ಜಿತ ಸಂತೆ ಮಾರ್ಕೇಟ್ ಮಾಡಬೇಕಿದೆ,
ಹಳೇ ಸರ್ಕಾರಿ ಆಸ್ಪತ್ರೆಯ ಕಟ್ಟಡವನ್ನು ಸುಸ್ಥಿತಿಗೆ ತಂದು ಉಪ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ಕೇಂದ್ರವನ್ನಾಗಿ ಪ್ರಾರಂಭಿಸಬೇಕಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಬಿದ್ದಿರುವ ಚಾವಡಿಯ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಬೇಕು,ಅಲ್ಲಿ ಗ್ರಾಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಿ ಪ್ರಾರಂಭಿಸಬೇಕಿದೆ ಎಂದು. ವಂದೇ ಮಾತರಂ ಜಾಗೃತಿ ವೇದಿಕೆ ನಗರ ಘಟಕ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳಲ್ಲಿ ಈ ಮೂಲಕ ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ವೇದಿಕೆಯ ಬಿ.ಕೆ.ರಾಘವೇಂದ್ರ, ವೆಂಕಟೇಶ, ಕೃಷ್ಣ(ಕಿಟ್ಟಿ),ಸೋಮು,ಶಿವು,ಮಂಜುನಾಥ,ಸೇರಿದಂತೆ ಮತ್ತಿತರರು ಇದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend