ಕನ್ನಡ ಒಂದು ಭಾಷೆಯಲ್ಲ, ಅದು ಈ ನಾಡಿನ ದೇವಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ…!!!

Listen to this article

ಕನ್ನಡ ಒಂದು ಭಾಷೆಯಲ್ಲ, ಅದು ಈ ನಾಡಿನ ದೇವಭಾಷೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧುನಿಕ, ಸಾಮಾಜಿಕ ಮತ್ತು ವಿದ್ಯುನ್ಮಾನ ಪ್ರಸರಣ ಕಾಲದಲ್ಲಿ ನಾವು ಕನ್ನಡ ಭಾಷೆಯನ್ನು ಹೆಚ್ಚು ಬೆಳೆಸಬೇಕಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ 221 ದತ್ತಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಮೂಲಕ ಜನ ಸಾಮನ್ಯರಿಗೂ ಸಾಹಿತ್ಯದ ಘಮಲನ್ನು ಪಸರಿಸುತ್ತಿದೆ, ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಶಾಲಾ,ಕಾಲೇಜುಗಳಲ್ಲಿ ಸ್ವರಚಿತ ಕವನ,ಗಾಯನ ಸ್ಪರ್ಧೆ ಹಾಗೂ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಹೆಚ್ಚು ಹಮ್ಮಿಕೊಂಡು ಜನರಿಗೆ ಕನ್ನಡ ಸಾಹಿತ್ಯ ಹಾಗೂ ಸಂಸೃತಿಯ ಪರಿಚಯ ಮಾಡಿಸಿ ಮುಂದಿನ ಯುವ ಪೀಳಿಗೆಗೆ ಪ್ರೇರೇಪಿಸುವ ಕಾರ್ಯ ಮಾಡುತ್ತದೆ ಎಂದರು.
ಶ್ರೀಮತಿ ರುದ್ರಮ್ಮ ವಾಮದೇವ ಶಿವಾಚಾರ್ಯ ದತ್ತಿಯಲ್ಲಿ ಉಪನ್ಯಾಸದಲ್ಲಿ, ಸಮಾಜ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಬಡೇಲಡಕು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಎನ್.ಜೆ. ಮಂಜುನಾಥ ಮಾತನಾಡಿ, ಒಬ್ಬ ಉತ್ತಮ ಶಿಕಕ್ಷಕ ಮಾತ್ರ ದಕ್ಷ ದೇಶ ಕಟ್ಟಲು ಸಾಧ್ಯ. ಇಲ್ಲವಾದಲ್ಲಿ ಶೈಕ್ಷಣಿಕ ಅಧಃಪತನ ತಲುಪುತ್ತದೆ. ಆದರೆ ಒಬ್ಬ ಉತ್ತಮ ಶಿಕ್ಷಕ ಅತ್ಯುತ್ತಮ ಪ್ರಜೆ ಸೃಷ್ಟಿಸಲು ಸಾಧ್ಯ. ಗುರು ಶಿಷ್ಯ ಮತ್ತು ಪೋಷಕರ ಸಮನ್ವಯತೆಯಿಂದ ದೋಷ ರಹಿತ ಸಮಾಜ ಕಟ್ಟಲು ಮುಂದಾಗಬೇಕಾಗುತ್ತದೆ. ಶಿಕ್ಷಕರ ಮಾತು ವೇದ ವಾಕ್ಯ ಎಂಬ ಕಾಲ ಹೋಗಿ ಶಿಕ್ಷಕ ಬಗ್ಗೆ ಅಸಡ್ಡೆ ಮಾತುಗಳು ಕೇಳಿ ಬರುತ್ತಿವೆ.
ಆಧುನೀಕರಣ ದಿಂದ ವಿದ್ಯಾರ್ಥಿಗಳಲ್ಲಿ ವಿದೆಯತೆ ಹಾಳಾಗದೆ ಎಂದರು.
ಡಾ. ಸಿದ್ದನಗೌಡ ಮತ್ತು ಶ್ರೀಮತಿ ಹನುಮಂತಮ್ಮ ದತ್ತಿಯಲ್ಲಿ ಶರಣ ಸಾಹಿತ್ಯ ಕುರಿತು ಶಿವಪುರ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಎ.ಎರ್ರಿಸ್ವಾಮಿ ಮಾತನಾಡಿ, ನಮಗೆ ಕಷ್ಟ ಬಂದಾಗ ಮಾತ್ರ ದೇವರ ಮೊರೆ ಹೋಗುತ್ತಾರೆ. ಆದರೆ ಶರಣರು ಪ್ರತಿ ದಿನವೂ ಕಾಯಕ ಮಾಡುವ ಮೂಲಕ ದೇವರ ಮೊರೆ ಹೋಗುತ್ತಿದ್ದರು. ಶರಣರು ತಮ್ಮ ಅಂಕಿತ ನಾಮಗಳಿಂದ ಮಾತನಾಡುತ್ತ, ಲೋಕದ ಡೊಂಕುಗಳನ್ನು ತಿದ್ದಿರು.ಅವುಗಳೆ ಶರಣ ಸಾಹಿತ್ಯವಾಗಿತ್ತು. ಈ ಹಿಂದೆ ಸಾಹಿತ್ಯ ಎಂಬುದು ಅರಸರ ಆಸ್ಥಾನಗಳಿಗೆ ಸೀಮಿತವಾಗಿತ್ತು. ಇಂತಹ ಸನ್ನಿವೇಶದಲ್ಲಿ, 12ನೇ ಶತಮಾನದಲ್ಲಿ ಕ್ರಾಂತಿಯಾಗಿ ಸಾಹಿತ್ಯ ಎಂಬುದು ಅರಮನೆಯಿಂದ ಗುರುಮನೆಗೆ, ಗುರು ಮನೆಯಿಂದ, ಜನ ಸಮಾನ್ಯರ ಮನೆ, ಮನಗಳಿಗೆ ಬಂದು ಮುಟ್ಟಿತು. ಇದರಿಂದ 27 ಸಾವಿರಕ್ಕೂ ಹೆಚ್ಚು ವಚನಗಳು ಸೃಷ್ಟಿಯಾದವು. ಶರಣರು ಜನ ಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ಬರೆದು ಅವರನ್ನು ಅಧ್ಯಾತ್ಮದತ್ತ ಕೊಂಡಯ್ದರು ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ವೀರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಆದರ್ಶ ವಿದ್ಯಾಲಯದ ಪ್ರಾಚಾರ್ಯ ಎಚ್. ಲಕ್ಷ್ಮಣಸಿಂಗ್, ಎಸ್ ಡಿಎಂಸಿ ಅಧ್ಯಕ್ಷ ಗಣೇಶ ಅಂಗಡಿ, ಜಾನಪದ ಪರಿಷತ್ತು ಅಧ್ಯಕ್ಷ ಕೆ.ಎಂ. ವೀರೇಶ, ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಂದಿ ಬಸವರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜು ಮಯೂರ, ಕಸಾಪ ಸದಸ್ಯರಾದ ಎಸ್.ವಿ. ಸಿದ್ದಾರಾಧ್ಯ, ಶಿದ್ದಗಂಗಮ್ಮ, ಸರ್ವಮಂಗಳ, ವೀರೇಶ್ ಮಾಡ್ಲಕನಹಳ್ಳಿ,ರಿಯಾಜ್ ಇದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend