ಕೂಡ್ಲಿಗಿ ಪಪಂ: ಬಾಯ್ತೆರೆದಿರುವ ಯಮ ಕಿಂಕರ-ಅಧಿಕಾರಿಯ ಕರ್ಥವ್ಯ ನಿಷ್ಠೆ.!?, ಜನ ಪ್ರತಿನಿಧಿಗಳ ಹಾಗೂ ಸಮಾಜ ಸೇವಕರ ಕಾಳಜಿಗೆ.!?-ಕನ್ನಡಿ…!!!

Listen to this article

ಕೂಡ್ಲಿಗಿ ಪಪಂ: ಬಾಯ್ತೆರೆದಿರುವ ಯಮ ಕಿಂಕರ-ಅಧಿಕಾರಿಯ ಕರ್ಥವ್ಯ ನಿಷ್ಠೆ.!?, ಜನ ಪ್ರತಿನಿಧಿಗಳ ಹಾಗೂ ಸಮಾಜ ಸೇವಕರ ಕಾಳಜಿಗೆ.!?-ಕನ್ನಡಿ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಅಂಗಳದಲ್ಲಿರುವ, ಸ್ಟೀಟ್ ಲೈಟ್ ಕಂಬದ ಬುಡದಲ್ಲಿ. ಕಂಬಕ್ಕೆ ಅಳವಡಿಸಿರುವ ಸ್ವಿಚ್ಚ ಬಾಕ್ಸ್ ನೆಲದಲ್ಲಿದೆ, ಕೆಲ ತಂತಿಗಳು ಜೋಡಣೆಗೊಂಡು ತಂತಿಗಳು ತೆರೆದಿದ್ದು. ಮಳೆಬಂದಾಗ ಸುತ್ತ ಮುತ್ತ ಅರ್ತಿಂಗ್ ಗ್ರೌಂಡ್ ಆಗೋ ಮೂಲಕ, ಯಮನಂತೆ ಬಲಿಗಾಗಿ ಬಾಯ್ತೆರೆದು ಕೂತಂತಿದೆ. ಹಲವು ತಿಂಗಳುಗಳಿಂದ ಈ ಪೆಟ್ಟಿಗೆ ಹೀಗೇ ನೆಲದಲ್ಲಿಯೇ ಇದೆ, ಮಳೆ ಬಂದಿದೆಯಾದರೂ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಇಲ್ಲಿ ನಿತ್ಯ ಜೆಸ್ಕಾ ನವರು ಪಟ್ಟಣ ಪಂಚಾಯ್ತಿಯವರು, ಜನಪ್ರತಿನಿಧಿಗಳು, ತಾವು ಬಾರೀ ಸಮಾಜ ಸೇವಕರು ಹೋರಾಟಗಾರರು. ಸಂಘಟನೆಕಾರರು ಎಂದು ಗುರುತಿಸಿಕೊಳ್ಳುವವರು, ಬಿಟ್ಟಿ ಪ್ರಚಾರದ ಹುಚ್ಚಲ್ಲಿ ಸದಾ ಮುಳುಗಿ ತೇಲುತ್ತಿರುವವರು. ಈ ಭಾಗದಲ್ಲಿಯೇ ಸಂಚರಿಸುತ್ತಾ, ಸ್ಟೀಟ್ ಲೈಟ್ ಕಂಬವನ್ನೇ ಆಚೆ ಈಚೆಯಿಂದ ಸುತ್ತುತ್ತಾ ಸದಾ ಗಿರಿಕಿ ಹೊಡೆಯುತ್ತಿರುತ್ತಾರೆ. ಆದ್ರೆ ಈ ದುರಾವಸ್ಥೆಯ ಪೆಟ್ಟಿಗೆ ಅವರ ಗಮನಕ್ಕೆ ಬಂದೇ ಇಲ್ಲ ಏನ್ನುವುದು ಅಚ್ಚರಿಯೇ ಸರಿ, ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗೆ ಬುದ್ದಿ ಹೇಳೋ ಧೈರ್ಯ ಮಾಡಿಲ್ಲ. ಆದ್ರೆ ಅವರು ಪೇಪರ್ ಗಳಲ್ಲಿ ಆಕಸ್ಮಾತ್ ಅವರ ಹೆಸರುಗಳು ಬಂದಿಲ್ಲಂದ್ರೆ, ಪತ್ರಕರ್ತರನ್ನು ಪ್ರೆಶ್ನೆ ಮಾಡೋ ಉದ್ಧಟನತ ತೋರುತ್ತಾರೆ. ಇದು ಅವರ ಸಾಮಾಜಿಕ ಕಾಳಜಿ.. ಇದು ಅವರ ನಿಜವಾದ ಸಾಮಾಜಿಕ ಕಳ ಕಳಿ.!?. *ಶ್ರೀಕೊತ್ತಲಾಂಜನೇಯನ ಪವಾಡವೇ ಸರಿ*- ಅದೇನೇ ಇರ್ಲಿ ಮಳೆ ಬಂದಾಗ ಯಾರೇ ಆಗಲಿ, ಶ್ರೀಕೊತ್ತಲಾಂಜನೇಯ ದೇವಸ್ಥಾನದ ಅಂಗಳಕ್ಕೆ ಬಂದು. ಸೌಖ್ಯವಾಗಿ ಅವರು ಹಿಂತಿರುಗಿದ್ದಾರೆಂದರೆ.!?, ಅದು ಶ್ರೀಕೊತ್ತಲ‍ಾಂಜನೇಯ ಸ್ವಾಮಿ ಕೃಪೆಯೇ ಅವರಿಗಿರುತ್ತದೆ ಎಂದರ್ಥ. ಇದು ಕಠು ಸತ್ಯ. ಹಾಗಂತ ಕೊತ್ತಲಾಂಜನೇಯ ಸ್ವಾಮಿಯ ದೇವಸ್ಥಾನದ ಅಂಗಳಲ್ಲಿ ತಂಗುವವರು, ತಮ್ಮ ಭಕ್ತಿಪೂರ್ವಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿವರು, ಸರ್ವ ಸದಸ್ಯರು ಒಂದಲ್ಲ ಒಂದು ಕಾರಣಕ್ಕೆ ಇಲ್ಲಿ ಸಂಚರಿಸುವವರಿದ್ದಾರೆ. ಶ್ರೀಕೊತ್ತಲಾಂಜನೇಯ ದೇವಸ್ಥಾನದ ಸ್ಥಳವು, ಕೊಟ್ಟೂರು ರಸ್ತೆ ಹಾಗೂ ಗಾಂಧಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಾಗೂ ಶ್ರೀಮದಕರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ. ಹಾಗೂ ಹೊಸಪೇಟೆ ರಸ್ತೆಗೆ, ಸಂಪರ್ಕ ಸಾಧಿಸುವ ರಸ್ತೆಗಳು ಇಲ್ಲಿ ಸಂಧಿಸಿವೆ. ಹಾಗಾಗಿ ಇದು ವೃತ್ತದಂತೆ ಸದಾ ಜನಸಂದಣಿ ಇರೋ ಸ್ಥಳವಾಗಿದೆ, ನಿತ್ಯ ಮಕ್ಕಳು ವೃದ್ದರು ಮಹಿಳೆಯರು ವಿಕಲಾಂಗರು ಸಂಚರಿಸುತ್ತಿರುತ್ತಾರೆ. ಪಟ್ಟಣ ಮಾತ್ರವಲ್ಲ ಕೆಲವು ತಾಂಡಗಳ ಜನರು, ತಾಲೂಕಿನ ಹಲವು ಗ್ರಾಮೀಣ ಭಾಗದ ಜನರು. ಪ್ರಯಾಣ ತಮ್ಮ ಪ್ರಯಾಣವನ್ನು ಇಲ್ಲಿಂದಲೇ ಪ್ರಾರಂಭಿಸುತ್ತಾರೆ, ಕೆಲ ಕಾಲ ಇಲ್ಲಿಯೇ ತಂಗಿ ವಿಶ್ರಮಿಸುತ್ತಿರುವುದರಿಂದಾಗಿ ಇದು ಜನ ಸಂದಣಿ ಜಾಗವಾಗಿದೆ. ಶ್ರೀಕೊತ್ತಾಲಾಂಜನೇಯ ದೇವಸ್ಥಾನದ ಅಂಗಳದಲ್ಲಿರುವ, ಈ ಬೃಹತ್ ಸ್ಟೀಟ್ ಲೈಟ್ ಕಂಬದ ಬುಡದಲ್ಲಿ ಈ ಪೆಟ್ಟಿಗೆ ಬಲಿಗಾಗಿ ಬಾಯ್ತೆರೆದು ಕುಂತಿದೆ. ಇಂತಹ ವರದಿಗಳು ಬಂದಾಗ ಪ್ರಭಾವಿಗಳಿಂದ ಪತ್ರಕರ್ತರಿಗೆ ಫೊನ್ ಮಾಡಿಸಿ ವರದಿ ಮಾಡದಿರುವಂತೆ ತಿಳಿ ಹೇಳಿಸುವ ಅಧಿಕಾರಿಗಳು. ಸಾರ್ವಜನಿಕರ ಸೇವೆ ಹೆಸರಲ್ಲಿ ಸರ್ಕಾರಿ ಸಂಬಳ ತಗೊಂಡು, ಹೀಗೆ ನಿರ್ಲಕ್ಷ್ಯ ತೋರಿ ಕರ್ಥವ್ಯ ಲೋಪ ಎಸಗಿದರೆ ಯಾರು ಹೊಣೆ!?. ಮುಂದೆ ಆಗಬಹುದಾದ ಅವಘಡ ಅನಾಹುತಕ್ಕೆ ಯಾರು ಜವಾಬ್ದಾರಿ.? ಅದಿಕಾರಿಗಳು ಸಂಬಂಧಿಸಿದ ಸಿಬ್ಬಂದಿಗಳನ್ನು ಈ ಮೂಲಕ ಸಾರ್ವಜನಿಕರು ಪ್ರೆಶ್ನಿಸಿದ್ದಾರೆ. ಈ ಬಾಕ್ಸ್ ನ್ನು ಮಕ್ಕಳಿಗೆ ಕೈಗೆಟುಕದ ರೀತಿಯಲ್ಲಿ ಅಂತರದಲ್ಲಿ, ಸುಸ್ಥಿತಿಯಲ್ಲಿ ಸ್ಥಾಪಿಸಬೇಕಿದೆ. ಆದಕ್ಕೆ ಅಗತ್ಯ ಇರೋ ಸಾಮಾಗ್ರಿಗಳನ್ನು ಅಧಿಕಾರಿಗಳು ಸಿಬ್ಬಂದಿಯವರು, ತಮ್ಮ ಮನೆಯಿಂದ ತಗೊಂಡು ಬಂದು ಹಾಕುತ್ತಾರಾ.!?. ಎಂದು ಕೆಲ ಪ್ರಜ್ಞಾವಂತರು ಪತ್ರಿಕೆ ಮೂಲಕ ಪ್ರೆಶ್ನೆ ಕೇಳಿದ್ದಾರೆ, ಇದಕ್ಕೆ ಅವರೇ ಉತ್ತರಿಸಬೇಕಿದೆ…ಇನ್ನು ಕೆಲ ಕ್ರಾಂತಿಕಾರಿ ಹೋರಾಟಗಾರರು ಮಾತನಾಡಿ, ಈ ಪೆಟ್ಟಿಗೆಯನ್ನು ಸುಸ್ಥಿತಿಯಲ್ಲಿಡಬೇಕಿರುವ ಅಧಿಕಾರಿ. ಕೂಡ್ಲಿಗಿ ಯಲ್ಲಿದ್ದಾರೋ ಇಲ್ಲವೋ.. ಅವರು ಸರ್ಕಾರಿ ಸಂಬಳ ತಿಂತಾರೋ ಇಲ್ವೋ..ಪಾಪ. ಆ ಪೆಟ್ಟಿಗೆಯನ್ನು ಅವರು ಸ್ವಂತ ಕರ್ಚಿನಲ್ಲಿ ಮಾಡಿಸಿ ಕೊಡುತ್ತಾರೋ ಏನೋ..!? ಅಧಿಕಾರಿಗಳನ್ನು ಪ್ರೆಶ್ನೆ ಮಾಡೋ ಧೈರ್ಯ ಜನಪ್ರತಿನಿಧಿಗಳು ತೋರುತ್ತಿಲ್ಲವಲ್ಲಾ.!? ಏಕೆ.!? ಎಂಬ ಪ್ರೆಶ್ನೆಗಳನ್ನು ಪತ್ರಿಕೆ ಮೂಲಕ ಕೇಳುತ್ತಿದ್ದಾರೆ.. ಇದಕ್ಕೆ ಸಂಬಂಧಿಸಿದ ಅಧಿಕಾರಿ ಉತ್ತರಿಸಬೇಕಿದೆ, ಶೀಘ್ರವೇ ಈ ದುರಾವಸ್ಥೆಯ ಪೆಟ್ಟಿಗೆಯನ್ನು ತೆರವುಗೊಳಿಸಿ, ಸುಸ್ಥಿತಿಯ ಪೆಟ್ಟಿಗೆಯನ್ನು ಮಕ್ಕಳ ಕೈಗೆಟುಕದ ರೀತಿಯಲ್ಲಿ ಕಂಬಕ್ಕೆ ಅಳವಡಿಸಬೇಕಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ.. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಕರ್ಥವ್ಯದಲ್ಲಿದ್ದಾರೋ ಇಲ್ಲವೋ.!?, ಜನ ಪ್ರತಿನಿಧಿಗಳು ಪಟ್ಟಣದಲ್ಲಿದ್ದಾರೋ ಇಲ್ಲವೋ.!?, ಸಮಾಜ ಸೇವಕರೆಂದು ಬೀಗುವ ಮವರು ಏನು ಮಾಡುತ್ತಿದ್ದಾರೋ ಏನೋ.!?. ಜನಪರ ಕಾಳಜಿಯ ಹೊರಾಟಗಾರರು ಎಲ್ಲಿದ್ದಾರೆ.!?, ಎಂಬ ಪ್ರೆಶ್ನೆ ಜನಸಾಮಾನ್ಯರಲ್ಲಿ ಮೂಡದೇ ಇರದು. ಇಂತಹ ದುರಾವಸ್ಥೆಯಿಂದ ಆಗಬಹುದಾದ ಅನಾಹುತ ಹಾಗೂ ಅವಘಡಕ್ಕೆ, ಸಂಬಂಧಿಸಿದ ಇಲಾಖಾ ನೇರ ಹೊಣೆಗಾರರಾಗಿರುತ್ತಾರೆಂದು ನಾಗರೀಕರ ಈ ಮೂಲಕ ಎಚ್ಚರಿಸಿದ್ದಾರೆ….

 

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend