ಡಾ //ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಕುಡಚಿ ಈ ಶಾಲೆಯಲ್ಲಿ ಕೆಲವು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ…!!!

Listen to this article

ಎಸ್ ಸಿ ಎಸ್ ಟಿ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮತ್ತು ಪರಿಶಿಷ್ಟ ಜಾತಿಯ ಸಿಬ್ಬಂದಿಗಳಿಗೆ ಮೆಲ್ ಜಾತಿಯ ಪ್ರಭಾರಿ ಪ್ರಧಾನ ಗುರುಗಳೇ ಕಿರಕುಳ ನೀಡುತ್ತಿರುವದರಿಂದ ಬೇಸತ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು.

ಬೆಳಗಾವಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಭಾರತ ರತ್ನ ಡಾ //ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಕುಡಚಿ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯ ವರಗೆ ವಸತಿ ಶಾಲೆ ಇಲ್ಲಿನ ಪ್ರಭಾರಿ ಪ್ರಧಾನ ಗುರುಗಳಾದ ಶ್ರೀಮತಿ ವೀಣಾ ಎಮ್ ಮುನೋಳ್ಳಿ ಇವರು ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪರಿಶಿಷ್ಟ ಜಾತಿಯ ಸಿಬ್ಬಂದಿಗಳಿಗೆ ಜಾತಿ ನಿಂದನೆ ಮಾಡುವುದು ಪದೇ ಪದೇ ನೀವು ಕೀಳು ಜಾತಿ ಎಸ್ ಸಿ ಇದ್ದೀರಿ ನಾನು ಹೇಳಿದ ಹಾಗೆ ಕೇಳಬೇಕು ಇಲ್ಲವೆಂದರೆ ನಿಮ್ಮನ್ನು ಕೆಲಸದಿಂದ ತೆಗೆಯುತ್ತೇನೆ ಎಂದು ಹೆದರಿಸುತ್ತಿರುವುದು, ಪರಿಶಿಷ್ಟ ಜಾತಿಯ ಸಿಬ್ಬಂದಿಗಳಿಂದ ಶೌಚಾಲಯ ಸ್ವಚ್ಛ ಮಾಡಿಸುತ್ತಾರೆ ನಮ್ಮನ್ನು ಕೀಳಾಗಿ ಕಾಣುತ್ತಾರೆ ಅಸಹ್ಯವಾದ ಪದಗಳನ್ನು ಉಪಯೋಗಿಸುತ್ತಾರೆ.

ಈ ವಸತಿ ಶಾಲೆಯಲ್ಲಿ ಎಸ್ ಸಿ ಎಸ್ ಟಿ ಮತ್ತು ಇತರೆ ವರ್ಗದ ಮಕ್ಕಳು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಸುಮಾರು 125 ಮಕ್ಕಳು ಕಲಿಯುತ್ತಿದ್ದಾರೆ. ಆದರೇ ಇಲ್ಲಿ ಸರ್ಕಾರದ ನಿಯಮಾವಳಿ ಪ್ರಕಾರ ಅಂದರೆ ಮೆನು ಪ್ರಕಾರ ಮಕ್ಕಳಿಗೆ ಸರಿಯಾಗಿ ಹೊಟ್ಟೆ ತುಂಬ ಕೊಡೋದಿಲ್ಲ, ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದಿಲ್ಲ, ಚಿಕ್ಕ ಮಕ್ಕಳ ಮೇಲೆ ಕೆಲವು ಸಲ ಹಲ್ಲೆ ಮಾಡಿದ್ದಾರೆ ಈ ರೀತಿ ಮಕ್ಕಳ ಮೇಲೆ ಆಗುವ ದೌರ್ಜನ್ಯತಡೆ ಹಿಡಿದು ಎಸ್ ಸಿ ಎಸ್ ಟಿ ಮಕ್ಕಳಿಗೆ ಮತ್ತು ಅಲ್ಲಿನ ಎಸ್ ಸಿ ಸಿಬ್ಬಂದಿಗಳಿಗೆ ರಕ್ಷಣೆ ನೀಡಬೇಕು. ಮೆಲ್ ಜಾತಿಯ ಪ್ರಧಾನ ಗುರುಗಳ ಮೇಲೆ ಕರ್ನಾಟಕ ನಾಗರೀಕ ಸೇವಾ (ನಡತೆ )ನಿಯಮಾವಳಿ -2010 ರ ಪ್ರಕಾರ ಕ್ರಮ ಇವರ ಮೇಲೆ ಸೂಕ್ತ ಕೈಗೊಳ್ಳಬೇಕು. ಇಲ್ಲವಾದರೆ ಇವರ ಮೇಲೆ ಮಕ್ಕಳ ಹಕ್ಕು ಆಯೋಗಕ್ಕೆ ದೂರು ದಾಖಲೆ ಮಾಡಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ತಮ ಕಾಂಬಳೆ ರಿಪಲ್ಬಿಕನ್ ಸೇನಾ, ಮಹಾಲಿಂಗಹ ಗಗ್ಗರಿ ಶೈಕ್ಷಣಿಕ ಜಿಲ್ಲಾಧ್ಯಕ್ಷರು ಚಿಕ್ಕೋಡಿ…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend