ಕಾಣಹೋಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚುನಾವಣಾ ಪ್ರಚಾರ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗಾಣಿಗರ ಸಮುದಾಯ ಭವನದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗೆ ಉದ್ಘಾಟಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ .ಕೊಂಡಯ್ಯ ಮಾತನಾಡಿ 26 ವರ್ಷದಿಂದ ಕ್ಷೇತ್ರದ ಒಡನಾಟ ಇದೆ. ನಾನು ಮೊದಲಿನಿಂದಲೂ ಜನರ ಜೊತೆಯಲ್ಲಿ ಇದ್ದೇನೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಹಕ್ಕು ಕೊಡಿಸುವಲ್ಲಿ ನಾನು ಧ್ವನಿ ಎತ್ತಿದ್ದೇನೆ. ಅಂದಿನ ಕೇಂದ್ರಸರ್ಕಾರ ಮತ ಹಾಕುವ ಅವಕಾಶವನ್ನು ನೀಡಿತು. ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿ ಕುಡಿಯುವ ನೀರು ರೈಲ್ವೆ ಮಾರ್ಗ ತರುವಲ್ಲಿ ಕ್ಷಮಿಸಿದ್ದೇನೆ. ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ನನಗೆ ಮತ ನೀಡುವಂತೆ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಶಾಲೆ ಆರೋಗ್ಯ ಇಲಾಖೆ ವಿದ್ಯಾಕೇಂದ್ರ ಗಳಿಗೆ ತೆರಳಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದು ಎಂದು ತಿಳಿಸಿದರು.

ಯುವ ಮುಖಂಡ  ಗುಜ್ವಲ್ ರಘು ಮಾಜಿ ಕಾರ್ಯದರ್ಶಿ ಕೆಪಿಸಿಸಿ, ಯವರು ಮಾತನಾಡಿ ರಾಜಕೀಯ ಅನುಭವವಿರುವ ಕೆ.ಸಿ. ಕೊಂಡಯ್ಯ ಅವರನ್ನು ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಜಿಂಕಲ್ ನಾಗಮಣಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರಿಗಾಗಿ ಶೇಕಡ 50ರ ಮೀಸಲಾತಿ ಜಾರಿಗೆ ತಂದಿದ್ದೇವೆ ಎಂದರು ಕೆ.ಸಿ. ಕೊಂಡಯ್ಯ ರವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಅನಿಲ್ ಲಾಡ್ ಮಾತನಾಡಿ ಅಚ್ಚೆ ದಿನ್ ಆಯೀಂಗೇ ಅಂದಿದ್ದರು. ಆ ಮಾತನ್ನು ನಂಬಿ ಮತದಾರ ಮತ ನೀಡಿದ ಜನರಿಗೆ ಅಗತ್ಯವಸ್ತುಗಳ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ.
ನಾವು ನೀವೆಲ್ಲರೂ ಸೇರಿ ಕೆಸಿ ಕೊಂಡಯ್ಯ ರವರನ್ನು ಕಂಕಣಬದ್ಧರಾಗಿ ಗೆಲ್ಲಿಸೋಣ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತದಾನ ಮಾಡುವಾಗ ಮತದಾನ ತಿರಸ್ಕೃತ ಗೊಳ್ಳದಂತೆ ಜಾಗೃತಿಯಿಂದ ಮತದಾನ ಮಾಡಬೇಕು ಎಂದರು.
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಲೋಕೇಶ್ ವಿ ನಾಯಕ್ ಮಾತನಾಡಿ ಹಾಲಿನಲ್ಲಿ ಹುಳಿ ಹಿಂಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಾರೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮತ್ತು ಒಳಿತನ್ನು ಬಯಸುವ ಪಕ್ಷ ಕಾಂಗ್ರೆಸ್ . ನಮ್ಮ ಪಕ್ಷದ ಅಭ್ಯರ್ಥಿ ಕೆಸಿ ಕೊಂಡಯ್ಯ ಅವರನ್ನು ಆಯ್ಕೆ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ. ಶಿವಯೋಗಿ ಬಳ್ಳಾರಿ .ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಜಿ ಕುಮಾರ ಗೌಡ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪೂರ್ಣಿಮಾ ಬನವಿಕಲ್. ಮಮತಾ. ಹೊನ್ನೂರಪ್ಪ. ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಬೋರಣ್ಣ. ಮುಖಂಡರಾದ ದೊಡ್ಡರಾಮಣ್ಣ. ನರಸಿಂಹಗಿರಿ ವೆಂಕಟೇಶ್. ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಿದ್ದನಗೌಡ. ಕಾವಲಿ ಶಿವಪ್ಪನಾಯಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಎಂ ಶಶಿಧರ. ಎರಿಸ್ವಾಮಿ ಬಣವಿಕಲ್. ಗುರು ಸಿದ್ದನಗೌಡ ಹೊಸಹಳ್ಳಿ. ಜಿ ಓಬಣ್ಣ ಜುಮ್ಮೋಬನಹಳ್ಳಿ. ರಾಘವೇಂದ್ರ ತಾಯ ಕನಹಳ್ಳಿ. ಹಾರಕಭಾವಿ ಶೇಖರಪ್ಪ. ಹಿರೇಕುಂಬಳಗುಂಟೆ ಉಮೇಶ್. ಸೇರಿ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಜನಪ್ರತಿನಿಧಿಗಳು ಮುಖಂಡರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend