ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ…!!!

Listen to this article

ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ

ವೃತ್ತಿಯನ್ನೇ ಜೀವಾಧಾರವಾಗಿ ಮಾಡಿಕೊಂಡ ಬಸವರಾಜ್ ಕುಂಬಾರ ಕುಟುಂಬದ ಕಥೆ.

ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ಬಸವರಾಜ್ ಕುಂಬಾರ ಅವರ ಕುಟುಂಬದಲ್ಲಿ ಎರಡು ತಲೆಮಾರುಗಳಿಂದ ಗಣೇಶನ ಮೂರ್ತಿ ತಯಾರಿಯಲ್ಲಿ ಮಗ್ನವಾಗಿದೆ. ಪ್ರತಿ ವರ್ಷ ನೂರಾರು ಗಣಪತಿಮೂರ್ತಿ ತಯಾರಿಸಿ ಜನರಿಗೆ ಮಾರುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಗಣೇಶ ಚತುರ್ಥಿ ಬರುವ ಎರಡು ತಿಂಗಳು ಮುಂಚೆಯೇ ಬಸವರಾಜ್ ಕುಂಬಾರ್ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕೆಲಸ ಶುರು ಮಾಡುತ್ತಾರೆ. ಒಬ್ಬರು ಮಣ್ಣು ಹದ ಮಾಡಿದರೆ, ಇನ್ನೊಬ್ಬರು ಮೂರ್ತಿಗೆ ಬೇಕಾದ ಸೊಂಡಿಲು, ಕೈ ಹಾಗೂ ಕಿರೀಟ ರಚಿಸುತ್ತಾರೆ.

ಮನೆಯ ಕುಟುಂಬಸ್ಥರು ಶಾರದಾ ಕುಂಬಾರ, ಚೈತ್ರಾ ಕುಂಬಾರ, ವಿನಾಯಕ ಕುಂಬಾರ, ಪವನಕುಮಾರ ಕುಂಬಾರ, ಶಿವರುದ್ರಮ್ಮ ಶಿಕ್ಷಕಿ, ಅನಿಲ್ ಬಾಬು ಕುಂಬಾರ, ಸಹ ಈ ಪ್ರಕ್ರಿಯೆಯಲ್ಲಿ ಕೈಜೋಡಿಸುತ್ತಾರೆ. ಈ ಕುಟುಂಬವು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಕೋಮು ಸೌಹಾರ್ದ ಸಂದೇಶ ಸಾರುತ್ತಿರುವುದಕ್ಕೆ ಕಾನ ಹೊಸಹಳ್ಳಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಬಸವರಾಜ್ ಕುಂಬಾರ ಕುಟುಂಬ ತಯಾರಿಸುವ ಗಣಪತಿ ಮೂರ್ತಿಗಳನ್ನು ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯ ಹೂಡೇಂ, ತಾಯಕನಹಳ್ಳಿ, ಕುಮತಿ, ಹುರಳಿಹಾಳ್, ಹಿರೇ ಕುಂಬಳಕುಂಟೆ, ಚಿಕ್ಕಜೋಗಿಹಳ್ಳಿ ಆಲೂರು, ಕೆಂಚಮಲ್ಲನಹಳ್ಳಿ, ಕಲ್ಲಹಳ್ಳಿ ಸೇರಿ ಸುತ್ತಮುತ್ತಲಿನ 98 ಹಳ್ಳಿಯ ಭಕ್ತರು ಕೊಂಡೊಯ್ಯುತ್ತಾರೆ. ಬೆಳಗಾವಿ ಕಡೆಯಿಂದ ತಂದಂತ ಜೇಡಿಮಣ್ಣನ್ನು ಬಳಸಿ ತಯಾರಿಸುವ ಗಣಪನನ್ನೇ ಪ್ರತಿ ವರ್ಷ ತಯಾರಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೀವನಕ್ಕೆ ಗಣಪನ ಮೂರ್ತಿ ಮಾರಾಟವನ್ನೇ ಅವಲಂಬಿಸಿದ್ದಾರೆ. ಇವರು ಬೆಳಗಾವಿ ಕಡೆಯಿಂದ ಜೇಡಿ ಮಣ್ಣನ್ನು ತರಿಸಲು ತುಂಬಾ ದೂರವಾದ ಕಾರಣ ಮಣ್ಣಿಗೆ ಕೊರತೆ ಎದುರಾಗಿದೆ. ಇದೇ ತಿಂಗಳ 31ರಂದು ವಿನಾಯಕ ಚತುರ್ಥಿ ಇದೆ. ಹೀಗಾಗಿ ಹಬ್ಬದ ಬಹಳ ಮೊದಲೇ ಗಣೇಶನ ವಿಗ್ರಹಗಳ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ. ಹಲವು ವಿಶಿಷ್ಟ ಗಣಪನ ಮೂರ್ತಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದು ಅಯೋದ್ಯಾ ಗಣಪ, ಪುನೀತ್ ರಾಜ್ ಕುಮಾರ್ ಜೊತೆಗಿರುವ ಅಪ್ಪು ಗಣಪಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ.

ಪರಿಸರ ಸ್ನೇಹಿ ಗಣಪ ತಯಾರಿ: ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸರ್ಕಾರ ಹಲವು ವರ್ಷಗಳ ಹಿಂದೆಯೇ ನಿಷೇಧ ಹೇರಿರುವ ಹಿನ್ನೆಲೆ ಎಲ್ಲೆಡೆ ಮಣ್ಣಿನ ಗಣಪನ ಮೂರ್ತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅದರಂತೆ ಹೂಸಹಳ್ಳಿ ಗ್ರಾಮದ ಬಸವರಾಜ್ ಶಾರದಮ್ಮ ಕುಂಬಾರ ಅವರು ಜೇಡಿಮಣ್ಣನ್ನು ಬಳಸಿ ತಯಾರಿಸುವ ಗಣಪನನ್ನೇ ಪ್ರತಿ ವರ್ಷ ತಯಾರಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೀವನಕ್ಕೆ ಗಣಪನ ಮೂರ್ತಿ ಮಾರಾಟವನ್ನೇ ಅವಲಂಬಿಸಿದ್ದೇವೆ. ಮೂರ್ತಿ ತಯಾರಿಸಿ ಮಾರಾಟವಾಗದಿದ್ದರೆ ಇದಕ್ಕಾಗಿ ಖರ್ಚು ಮಾಡಿದ ಹಣವೂ ಹಿಂದಿರುಗದೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಜುಲೈ, ಆಗಸ್ಟ್ ಪ್ರಾರಂಭದ ದಿನದಿಂದಲೇ ನಾನಾ ವಿಧದ ಗಣಪನ ಮೂರ್ತಿಗಳನ್ನು ತಯಾರಿಸುವ ಆರ್ಡರ್‌ ಬರುತ್ತಿದ್ದ ಹಿನ್ನೆಲೆ ತಯಾರಕರಿಗೆ ಬಿಡುವೇ ಇಲ್ಲದಂತಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವಿವಿಧ ಸಾಮಗ್ರಿಗಳು ಗಗನಕ್ಕೆ ಏರಿದೆ ಕಾರಣ ಸಣ್ಣ ಗಣಪತಿಗಳಿಗೆ ಬೇಡಿಕೆ ಜಾಸ್ತಿ ಇದೆ. ಹೀಗಾಗಿ ಕಷ್ಟಪಟ್ಟು ಮಾಡಿದ ಗಣಪತಿ ಮೂರ್ತಿಗಳನ್ನು ಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ನೆರವಿಗೆ ಕಲಾವಿದ ಒತ್ತಾಯ: ತಲೆಮಾರುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಕೆಲಸ ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ, ನಮ್ಮ ಕಷ್ಟ ಯಾರಿಗೆ ಹೇಳಬೇಕು, ಸರ್ಕಾರ ನಮ್ಮಂಥವರ ಸಮಸ್ಯೆ ಎಲ್ಲಿ ಕೇಳುತ್ತದೆ? ಸರ್ಕಾರ ಎಲ್ಲಾ ಸಮುದಾಯಗಳ ನೆರವಿಗೆ ಧಾವಿಸಿ ಪರಿಹಾರ ನೀಡಿದೆ. ಆದರೆ ಗಣೇಶ ಮೂರ್ತಿ ತಯಾರಕ ಕುಂಬಾರ ಕಲಾವಿದರ ಸಂಕಷ್ಟ ಸ್ಪಂದಿಸದಿರುವುದು ನೋವು ತಂದಿದೆ. ಇನ್ನಾದರೂ ನಮ್ಮ ಕುಂಬಾರ ಸಮುದಾಯದವರಿಗೆ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಗಣೇಶ ತಯಾರಿಕರಾದ ಶಾರದಮ್ಮ, ಬಸವರಾಜ್ ಕುಂಬಾರ ಹಾಗೂ ಹಾಗೂ ಹೊಸಳ್ಳಿಯ ಕುಂಬಾರ ಸಮುದಾಯದವರು ಒತ್ತಾಯಿಸಿದ್ದಾರೆ…

ವಿಶೇಷ ವರದಿ:- ಡಿ. ಎಂ.ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend