ಹೂಡೇಂ ಗ್ರಾಮಗಳಲ್ಲಿ ಸಂಭ್ರಮದ ಹೋಳಿಗೆ ಅಮ್ಮನ ಹಬ್ಬ ಆಚರಣೆ..!!!

Listen to this article

ಹೂಡೇಂ ಗ್ರಾಮಗಳಲ್ಲಿ ಸಂಭ್ರಮದ ಹೋಳಿಗೆ ಅಮ್ಮನ ಹಬ್ಬ ಆಚರಣೆ

ಮಳೆಗಾಗಿ ಪ್ರಾರ್ಥಿಸಿ ಹೋಳಿಗೆ ಅಮ್ಮನ ಹಬ್ಬ ಆಚರಣೆ

ಕೂಡ್ಲಿಗಿ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮಗಳಲ್ಲಿ ಆಷಾಢ ಮಾಸದ ಅಂಗವಾಗಿ ಮಂಗಳವಾರ ಸಡಗರ ಸಂಭ್ರಮದಿಂದ ಹೋಳಿಗೆ ಅಮ್ಮನ ಹಬ್ಬವನ್ನು ಆಚರಿಸಲಾಯಿತು. ಉತ್ತಮ ಮಳೆ ಬಂದು ರೈತರ ಬದುಕು ಹಸನಾಗಲಿ, ರೈತಾಪಿ ವರ್ಗದ ಜನರ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ಮನೆಗಳಲ್ಲಿನ ಧನ ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಬ್ಬ ಆಚರಿಸಿದರು. ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಪ್ಲೇಗ್‌, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಮಳೆ ಆಗುವುದಕ್ಕಾಗಿ ಹುಟ್ಟಿಕೊಂಡಿದ್ದೇ ಈ ಹೋಳಿಗೆ ಅಮ್ಮ. ಈ ಹಬ್ಬವನ್ನು ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ ಎನ್ನುವುದು ವಿಶೇಷ. ಬಿದಿರಿನ ಮರದಲ್ಲಿ ಕುಡಿ ಬಾಳೆದೆಲೆ ಹಾಸಿ ಅದರ ಮೇಲೆ ಕುಂಬಾರನ ಮನೆಯಿಂದ ತಂದ ಮಣ್ಣಿನ ಕುಡಿಕೆಗೆ, ಬೇವಿನ ಸೊಪ್ಪು, ಅರಿಶಿನ ಕುಂಕುಮ, ಬಳೆ, ಹೋಳಿಗೆ, ಮೊಸರಿನ ಎಡೆ ಮಾಡಿ, ಗ್ರಾಮದಲ್ಲಿ ಹೋಳಿಗೆ ಅಮ್ಮನ ಗದ್ದಿಗೆಯ ಬೇವಿನ ಮರದ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿದರು. ನಂತರ ಗ್ರಾಮದ ಹೊರವಲಯದ ಗಡಿ ಅಂಚಿನ ಹೊರೆಗೆ ಹೋಗಿ ಹೋಳಿಗೆ ಅಮ್ಮನ ಗದ್ದಿಗೆಯ ಬೇವಿನ ಮರದಡಿ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿ ನಂತರ ಹಿಂದಕ್ಕೆ ತಿರುಗಿ ನೋಡದೆ ಭಕ್ತರು ಬರುತ್ತಾರೆ…

ವರದಿ. ವಿರೇಶ್. ಕೆ. ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend