ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ 19 ರ ಕಾರ್ಯ ಪಡೆ ಸಭೆ ಜರುಗಿತು…!!!

Listen to this article

ದಿನಾಂಕ .2/6/2021.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ S K D D V ಪ್ರೌಢಶಾಲೆಯ ಆವರಣದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ 19 ರ ಕಾರ್ಯ ಪಡೆ ಸಭೆ ಜರುಗಿತು. ಕೋವಿಡ್ 19 ರ ಹೊಸ ಹಳ್ಳಿ ಗ್ರಾಮ ಪಂಚಾಯಿತಿಯ ನೋಡಲ್ ಅಧಿಕಾರಿ ರವಿಚಂದ್ರ ಮಾತನಾಡಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತರು ಗ್ರಾಮದ ಮನೆಮನೆಗೆ ಹೋಗಿ ರೋಗಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ರೋಗ ಲಕ್ಷಣಗಳು ಇದ್ದ ವ್ಯಕ್ತಿ ವ್ಯಕ್ತಿಗಳಿಗೆ ಸ್ಥಳೀಯ ಪ್ರಾಥಮಿಕ ಆರೋಗ್ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಲು ತಿಳಿಸಿ ನಂತರ ಪ್ರತಿಯೊಬ್ಬ ವ್ಯಕ್ತಿಯೂ 45 ವರ್ಷ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಲಸಿಕೆಯನ್ನು ಪಡೆಯಬಹುದು ಮತ್ತು ಎರಡನೇ ಡೋಸ್ 8 4 ದಿನಗಳ ನಂತರ ಲಸಿಕೆ ಪಡೆಯಬೇಕು ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಟಿ.ಜಗದೀಶ್ ಮಾತನಾಡಿ ಕೊರೋನಾ ಎಂಬ ಹೆಮ್ಮಾರಿ ದೇಶವ್ಯಾಪಿ ಹರಡಿದ್ದು ಇದನ್ನು ಧೈರ್ಯ ದಿಂದ ಕೊರೋನಾ ರೋಗವನ್ನು ಗುಣಪಡಿಸಿಕೊಳ್ಳಬಹುದು. ಗ್ರಾಮದ ಪ್ರತಿ ಮನೆಯ ಸದಸ್ಯರುಗಳು ಕೊರೋನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿ. ನಂತರ ಕೋರೋನಾ ಪಾಸಿಟಿವ್ ಬಂದ ವ್ಯಕ್ತಿ ಸಿ.ಸಿ.ಸಿ ಕೋರೋನಾ ಕೇಂದ್ರಕ್ಕೆ ಕಳುಹಿಸಿ ಮತ್ತು. ಸಿಸಿಸಿ ಕೇಂದ್ರವನ್ನು ಸ್ನೇಹಮಯಿ ಕ್ಲಿನಿಕ್ ಎಂದು ಕರೆದರೆ ತಪ್ಪಾಗಲಾರದು ಎಂದರು. ಮತ್ತು ಗ್ರಾಮದಲ್ಲಿ ಸಭೆ-ಸಮಾರಂಭಗಳು ಎಲ್ಲಾ ಕಾರ್ಯಕ್ರಮಗಳನ್ನು ತಡೆಹಿಡಿಯಲಾಗಿದೆ. ಹೊಸ ಹಳ್ಳಿ ಗ್ರಾಮ ಪಂಚಾಯಿತಿಯನ್ನು ಕೊರೋ ನಾ ಮುಕ್ತ ಗ್ರಾಮ ಪಂಚಾಯತಿ ಯನ್ನಾಗಿ ಮಾಡಿ ಎಂದು ಕಾರ್ಯಪಡೆಗೆ ತಿಳಿಸಿದರು.
ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಸಣ್ಣ ಮಾತನಾಡಿ
ಕೊರೋನಾ ಕೇಂದ್ರದಲ್ಲಿ ಊಟ ಉಪಹಾರ ಶುದ್ಧ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಕೊರೋನಾ ಪಾಸಿಟಿವ್ ಬಂದರೆ ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಬಹುದು.
ಬೀದಿಬದಿ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಚಾಲಕರು,ನಿರ್ವಾಹಕರು, ಆಟೋ ಕಾರು ಚಾಲಕರು, ಹಮಾಲರು, ವಿಕಲಚೇತನರು, ಇವರಿಗೆ ಕೊರೋನಾ ಲಸಿಕೆ ಹಾಕಿಸಿ ಕೊಳ್ಳಿ ಎಂದು ತಿಳಿಸಿ.
ಇದೇ ಸಂದರ್ಭದಲ್ಲಿ ನಾಡಕಛೇರಿಯ ಉಪತಹಶೀಲ್ದಾರ್ ಚಂದ್ರಮೋಹನ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನೀಲಮ್ಮ ಬೊಮ್ಮಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬೋರಪ್ಪ,ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಬಸಮ್ಮ ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳಾದ ASI ಗೋವಿಂದಪ್ಪ, ಕಂದಾಯ ಪರಿವೀಕ್ಷಕರಾದ ಮುರಳಿಕೃಷ್ಣ, ಗ್ರಾಮಲೆಕ್ಕಾಧಿಕಾರಿಗಳು ಶ್ರೀನಿವಾಸ್ ಕೊಂಡಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಸಿ ಚೇತನ್. ಶಿವಕುಮಾರ, ಮುಕ್ಬುಲ್, ಹೊನ್ನೂರ ಸ್ವಾಮಿ, ಪಿತಾಂಬರ, ಚೆನ್ನಪ್ಪ, ಕಲಾವತಿ ಸಿದ್ದಲಿಂಗಪ್ಪ, ಮಂಜಮ್ಮ, ನಾಗರಾಜು ಇಮ್ರಾಪುರ, ಗೋಪಾಲಪ್ಪ ಸೇರಿ ಗ್ರಾಮ ಪಂಚಾಯತಿ ಸದಸ್ಯರು ಗಳು ಇದ್ದರು, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸೇರಿ ಅನೇಕರು ಉಪಸ್ಥಿತರಿದ್ದರು…

ವರದಿ ಕೆಎಸ್, ವೀರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend