ರಾಜ್ಯದಲ್ಲಿ ಮಾದರಿ ಶಾಲೆ ಸ್ಥಾಪನೆಗೆ ಚಿಂತನೆ ಬಿ.ಸಿ. ನಾಗೇಶ್…!!!

Listen to this article

ರಾಜ್ಯದಲ್ಲಿ ಮಾದರಿ ಶಾಲೆ ಸ್ಥಾಪನೆಗೆ ಚಿಂತನೆ
ಬಿ.ಸಿ. ನಾಗೇಶ್.

ಮಕ್ಕಳಿಗೆ ಗುಣಮಟ್ಟದ  ಶಿಕ್ಷಣದ ಜೊತೆಗೆ ಪ್ರತಿ ಮಗುವಿನ ಮೇಲೆ ವಿಶೇಷ ಕಾಳಜಿ, ಸ್ಪೋಕನ್ ಇಂಗ್ಲೀಷ ತರಬೇತಿ ಹಾಗೂ ಉತ್ತಮ ಮೂಲಸೌಕರ್ಯ ಹೊಂದಿರುವ ಮಾದರಿ ಶಾಲೆ ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ್ ಖಾತೆ ಸಚಿವ ಬಿ.ಸಿ. ನಾಗೇಶ ಹೇಳಿದರು.


ಸೋಮವಾರ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಫೈನಾನ್ಸಿಯಲ್ ಇನ್ಕ್ಲೂಷನ್ ಲಿ., ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಹಾಗೂ ಇಂಡುಸ್ ಇಂಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರೋಡ್ ಟೂ ಸ್ಕೂಲ್ ಕಾರ್ಯಕ್ರಮದಡಿ ಆಯೋಜಿಸಿದ ಡಿಜಿಟಲ್ ಲಿಟರಸಿ ಮತ್ತು ಲೈಫ್ ಸ್ಕಿಲ್ ಹಬ್ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯಮಿದಾರರು, ಕಾರ್ಪೋರೇಟ್ ಕಂಪನಿಗಳು ಇದಕ್ಕೆ ಮುಂದೆ ಬಂದಲ್ಲಿ ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ ಎಂದರು.
ರಾಜ್ಯದ್ಯಾಂತ 48 ಸಾವಿರ ಸರ್ಕಾರಿ ಶಾಲೆಗಳನ್ನು ನಡೆಸಲಾಗುತ್ತಿದೆ. ಇತರೆ ಪ್ರದೇಶದಲ್ಲಿ 30 ಮಕ್ಕಳಿಗೆ ಓರ್ವ ಶಿಕ್ಷರಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 23 ಮಕ್ಕಳಿಗೆ ಒಬ್ಬ ಶಿಕ್ಣಕರಿದ್ದಾರೆ. ಈ ಭಾಗದಲ್ಲಿನ ಶಾಲಾ ಶಿಕ್ಷಕರ ಸಮಸ್ಯೆ ತಕ್ಕಮಟ್ಟಿಗೆ ನಿವಾರಿಸಲು ಪ್ರಸ್ತುತ ನೇಮಕಾತಿ ಹಂತದಲ್ಲಿರುವ 15 ಸಾವಿರ ಶಿಕ್ಷಕರ ಪೈಕಿ ಕಲ್ಯಾಣ ಕರ್ನಾಟಕ ಭಾಗದಿಂದಲೇ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದರು.
ಕೋವಿಡ್ ಕಾರಣ ಮಕ್ಕಳ ಶಿಕ್ಷಣ ಮಟ್ಟ ಕುಂಠಿತಗೊಂಡಿದೆ. ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಸಂವಾದದಿಂದ ಇದು ನನ್ನ ಅರಿವಿಗೆ ಬಂದಿದೆ. ಇ-ಲರ್ನಿಂಗ್ನಿಂದಲೇ ಸಂಪೂರ್ಣ ಕಲಿಕೆ ಅಸಾಧ್ಯ ಎಂದು ಮಕ್ಕಳು ಸ್ಪಷ್ಠಪಡಿಸಿದ್ದಾರೆ. ಹೀಗಾಗಿ ಪ್ರಸ್ತುತ ಸಾಲಿನಲ್ಲಿ ಪಠ್ಯ ಬೋಧನೆ ಮುನ್ನ ಕಲಿಕಾ ಚೇತರಿಕೆ ಕೋರ್ಸ್ ಬೋಧಿಸಲಾಗುತ್ತಿದೆ ಎಂದರು.


ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಸಂಸ್ಥೆಯು ಕಲಬುರಗಿ ಜಿಲ್ಲೆಯ 12 ಪ್ರೌಢ ಶಾಲೆಯಲ್ಲಿ ಡಿಜಿಟಲ್ ಲಿಟರಸಿ ನೀಡುವ ಮೂಲಕ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿರುವುದು ಸಂತಸದ ವಿಷಯವಾಗಿದೆ. ಸಂಸ್ಥೆಯ ಸಾಮಾಜಿಕ ಕಾರ್ಯ ನಿರಂತರ ಸಾಗಲಿ, ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮಾತನಾಡಿ ಸಂಸ್ಥೆಯಿಂದ ರಾಜ್ಯದ 12 ಜಿಲ್ಲೆಗಳ 26 ಪ್ರಾಥಮಿಕ ಮತ್ತು 12 ಪ್ರೌಢ ಶಾಲೆಗಳಲ್ಲಿ ಶಾಲಾ ಮಕ್ಕಳ ಡ್ರಾಪ್ ಔಟ್ ಸಂಖ್ಯೆ ಕಡಿಮೆಗೊಳಿಸುವುದರ ಜೊತೆಗೆ ತಜ್ಞ ಶಿಕ್ಷಕರಿಂದ ಗಣಿತ, ವಿಜ್ಞಾನ, ಇಂಗ್ಲೀಷ ಬೋಧಿಸಿ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 12 ಜಿಲ್ಲೆಗಳಲ್ಲಿ 128 ಸಮುದಾಯ ಶಾಲೆ ನಡೆಸಲಾಗಿದೆ. ಶೇ.40 ಮಕ್ಕಳು ನಮ್ಮ ಕಲಿಕೆಯ ಲಾಭ ಪಡೆದಿದ್ದಾರೆ ಎಂದು ವಿವರಿಸಿದರು.
ಇದಕ್ಕು ಮುನ್ನ ಕಾರ್ಯಕ್ರಮದ ಉದ್ದೇಶ ಕುರಿತು ಭಾರತ ಫೈನಾನ್ಸಿಯಲ್ ಇನ್ಕ್ಲೂಜನ್ ಲಿಮಿಟೆಡ್ ಸಂಸ್ಥೆಯ ಶಿವರಾಜ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತರ ಗರೀಮಾ ಪನ್ವಾರ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸರ್ವಮಂಗಳಾ ದತ್ತಾತ್ರೇಯ ಪಾಟೀಲ, ಭಾರತ ಫೈನಾನ್ಸಿಯಲ್ ಇನ್ಕ್ಲೂಜನ್ ಲಿಮಿಟೆಡ್ ಸಿ.ಪಿ.ಓ ಶ್ರೀನಿವಾಸ ರೆಡ್ಡಿ ವುಡುಮಲಾ, ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಉದಗೀರಕರ್ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.
ಶಾಲೆಗೆ ಭೇಟಿ ನೀಡಿದ ಸವಿನೆನಪಿನಲ್ಲಿ ಸಚಿವ ಬಿ.ಸಿ.ನಾಗೇಶ ಅವರು ಶಾಲೆ ಅಂಗಳದಲಿ ಸಸಿ ನೆಟ್ಟು ನೀರುಣಿಸಿದರು. ಮಕ್ಕಳೊಂದಿಗೆ ಗ್ರೂಪ್ ಫೋಟೊ ತೆಗೆಸಿಕೊಂಡರು…

ವರದಿ.ಬಸಯ್ಯ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend