ಇಟ್ಟಿಗಿ ಅಯ್ಯಪ್ಪ ಮಾಲಾದಾರಿಗಳಿಂದ ಅಯ್ಯಪ್ಪ ಸ್ವಾಮಿಯ ಸನ್ನಿದಿಗೆ ಪಯಣ…!!!

Listen to this article

ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸ್ವಾಮಿಗಳ ಇರುಮುಡಿಕಾರ್ಯಕ್ರಮ’ ಸ್ವಾಮಿಯೇ ಶರಣಂ ಅಯ್ಯಪ್ಪ

ಯಾರು ನಿಯಮ ನಿಷ್ಠೆಗಳನ್ನು ಪಾಲಿಸಿ ಪಡಿಮೆಟ್ಟಿಲು ಹತ್ತಿ ದರ್ಶಿಸುತ್ತಾರೋ ಅವರಿಗೆ ಆಯುರಾರೋಗ್ಯ ಅಷ್ಟೈಶ್ವರ್ಯಗಳನ್ನು ದೇವರು ಪ್ರಸಾದಿಸುತ್ತಾನೆಂಬ ನಂಬಿಕೆ. ಮಾತು ಬರದವರಿಗೆ ಮಾತು ಬರುವಂತೆ ಮಾಡಿದ ಮಹಿಮೆಯುಳ್ಳ ಶಬರಿಗಿರಿವಾಸ ಹರಿಹರಸುತ ಅಯ್ಯಪ್ಪನ ದರ್ಶನಕ್ಕೆ ವಿಜಯನಗರ ಜಿಲ್ಲೆ,ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಧಾರಿ ಸ್ವಾಮಿಗಳ ದಿನಾಂಕ 7-1-2022ರಂದು ಇರುಮುಡಿ ಕಟ್ಟಿಕೊಂಡು ಶಬರಿಗಿರಿಗೆ ಯಾತ್ರೆ ಆರಂಭಿಸಿದರು. ಮಾಲೆ ಧರಿಸಿದ ಸ್ವಾಮಿಗಳೆಲ್ಲರು ಬ್ರಹ್ಮಚರ್ಯ, ಸಾತ್ವಿಕ ಆಹಾರ, ದಿನಕ್ಕೆರಡು ಬಾರಿ ತಣ್ಣೀರಿನ ಸ್ನಾನ, ಎರಡು ಬಾರಿ ಅಯ್ಯಪ್ಪ ಸ್ವಾಮಿ ಪೂಜೆ ಇನ್ನೂಹೆಚ್ಚಿನ ಕಠಿಣ ವ್ರತಗಳನ್ನು ಗುರುಸ್ವಾಮಿಗಳ ಮಾರ್ಗದಲ್ಲಿ ಆಚರಿಸಿ ಯಾತ್ರೆಗೆ ಸಿದ್ದರಾದ ದಿನ. ಇರುಮುಡಿ ಕಾರ್ಯಕ್ರಮ ಇಟ್ಟಿಗಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಯ 18ಮೆಟ್ಟಿಲಿನ ವಿಶೇಷ ಅಲಂಕಾರ ಭಕ್ತಿಯನ್ನು ಇನ್ನೂ ಹಿಮ್ಮಡಿಗೊಳಿಸಿತ್ತು. ಶಾಸ್ತ್ರೊಕ್ತವಾಗಿ ಯಂಕಪ್ಪ ಗುರು ಸ್ವಾಮಿ ಇವರಿಂದಿ ಇರುಮುಡಿ ಕಾರ್ಯಕ್ರಮ ನೇರವೇರಿತು.ಮೊದಲು ಕನ್ಯ ಸ್ವಾಮಿಯಾದ ಕಾಳಪ್ಪ ಕಮ್ಮಾರ ಇವರಿಂದ ಶುರುವಾದ ಇರುಮುಡಿ ಕಾರ್ಯಕ್ರಮ, ಒಟ್ಟಾರೆಯಾಗಿ 38 ಸ್ವಾಮಿಗಳ ಇರುಮುಡಿಯೊಂದಿಗೆ ನೆರವೇರಿತು. ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಅಂದು ಊರಿನ ದೇವಾಲಯಗಳನ್ನೆಲ್ಲ ಊರಿನ ಯುವಕರು ಸ್ವ ಪ್ರೇರಣೆಯಿಂದ ಸ್ವಚ್ಛಗೊಳಿಸಿದ್ದರು. ಸಂಜೆಯೊತ್ತಿಗೆ ಮುಗಿದ ಇರುಮುಡಿ ಕಾರ್ಯಕ್ರಮದ ನಂತರ ಮಾಲಾಧಾರಿ ಸ್ವಾಮಿಗಳೆಲ್ಲರು ಶರಣ ಘೋಷಣೆಯೊಂದಿಗೆ ಸಾಮಾಳ ವಾದ್ಯಕ್ಕೆ ಹೆಜ್ಜೆ ಹಾಕಿ ರಾತ್ರಿ 10ಕ್ಕೆ ಶಬರಿಯಾತ್ರೆ ಆರಂಭಿಸಿದರು. ಕಾರ್ಯದಲ್ಲಿ ಊರಿನ ಭಕ್ತರು ಪಾಲ್ಗೊಂಡು ತಮ್ಮಕೈಲಾದ ಸೇವೆ ಮಾಡಿ ಆಯುರಾರೋಗ್ಯ ಬೇಡಿಕೊಂಡರು..

ವರದಿ.ಪ್ರಕಾಶ್ ಆಚಾರ್ ಎ(ಇಟ್ಟಿಗಿ)

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend