ವಕೀಲರ ಸಂರಕ್ಷಣಾ ಕಾನೂನು ರೂಪಿಸಬೇಕು -ಜಿ. ಹೊನ್ನೂರಪ್ಪ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ವಕೀಲರ ಸಂರಕ್ಷಣಾ ಕಾನೂನು ರೂಪಿಸಬೇಕು-ಜಿ.ಹೊನ್ನೂರಪ್ಪ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಾ1ರಂದು,ಕೂಡ್ಲಿಗಿ ವಕೀಲರ ಸಂಘದ ಪದಾಧಿಕಾರಿಗಳು ವಕೀಲರ “ಸಂರಕ್ಷಣಾ ಕಾನೂನು” ರೂಪಿಸುವಂತೆ ಮತ್ತು ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಜರುಗಿದ ವಕೀಲ ತಾರಿಹಳ್ಳಿ ವೆಂಕಟೇಶ ಹತ್ಯೆ ಹಾಗೂ ರಾಷ್ಟ್ರ ಹಾಗೂ ರಾಜ್ಯದ ಕೆಲವೆಡೆ ಜರುಗಿರುವ ವಕೀಲರ ಹತ್ಯೆ ಮತ್ತು ಹಲ್ಯೆಗಳನ್ನ ವಕೀಲರು ತೀವ್ರವಾಗಿ ಖಂಡಿಸಿದರು.ವಕೀಲರ ರಕ್ಷಣೆಗೆ ಕಾನೂನು ರೂಪಿಸದೇ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು,ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕಾನೂನು ಜಾರಿತರಬೇಕೆಂದು,ವಕೀಲರ ಸಂಘದ ಅಧ್ಯಕ್ಷ ಜಿ.ಹೊನ್ನೂರಪ್ಪ ಆಗ್ರಹಿಸಿದರು.ಹಿರಿಯ ವಕೀಲರಾದ ಹೋ.ಮ.ಪಂಡಿತರಾಧ್ಯ ಮಾತನಾಡಿದರು,ಹೋರಾಟಗಾರ ಹಾಗೂ ವಕೀಲ ಸಿ.ವಿರುಪಾಕ್ಷಪ್ಪ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ತಹಶಿಲ್ದಾರ್ ಎಸ್.ಮಹಾಬಲೇಶ್ವರ ಮನವಿ ಮನವಿ ಸ್ವೀಕರಿಸಿ ಮಾತನಾಡಿದರು, ಕೂಡ್ಲಿಗಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದ್ಯರು ಮಹಿಳಾ ವಕೀಲರು ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *