ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ
*ಭ್ರಷ್ಟಾಚಾರ ನಿಗ್ರಹಕ್ಕೆ ಸರ್ವರೂ ಸಂಕಲ್ಪ ತೊಡಬೇಕು-ಎಸಿಬಿ,ಪ್ರಭುಲಿಂಗಸ್ವಾಮಿ ಹಿರೇಮಠ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಯ ತಹಶಿಲ್ದಾರರ ಛೇಂಬರ್ ನಲ್ಲಿ,ಶನಿವಾರ ಭ್ರಷ್ಟಾಚಾರ ನಿಗ್ರಹ ದಳದವರಿಂದ “ಭ್ರಷ್ಟಾಚಾರ ನಿಗ್ರಹ ಜಾಗೃತಿ” ಕಾರ್ಯಕ್ರಮ ಜರುಗಿತು.ಬಳ್ಳಾರಿ ಎಸಿಬಿ ಇನ್ಸ್ಪೆಕ್ಟರ್ ಪ್ರಭುಲಿಂಗಸ್ವಾಮಿ ಹಿರೇಮಠ ರವರು,ನೆರೆದವರಿಗೆ ಭ್ರಷ್ಟಾಚಾರ ನಿಗ್ರಹ ಕುರಿತು ಜಾಗೃತಿ ಮೂಡಿಸಿದರು.ಭ್ರಷ್ಟಾಚಾರ ಅವ್ಯವಸ್ಥೆಯ ವಿರುದ್ಧ ಎಲ್ಲರೂ ಹೋರಡಿದರೆ ಮಾತ್ರ,ಅದನ್ನ ಬೇರು ಸಮೇತ ಕಿತ್ತು ಹಾಕಬಹುದು ಅದಕ್ಕೆ ಎಲ್ಲರೂ ಸಂಕಲ್ಪ ತೊಡಬೇಕಿದೆ ಎಂದರು. ಪ್ರತಿಯೊಬ್ಬರು ಅಗತ್ಯ ಕಾನೂನು ತಿಳುವಳಿಕೆ ಹೊಂದ ಬೇಕಿದೆ, ಕಾನೂನನ್ನು ಗೌರವಿಸಬೇಕು ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ವಾಮ ಮಾರ್ಗ ಅನುಸರಿಸಬಾರದು.ನೌಕರರು ನಿಯಮ ಮೀರಿ ಕರ್ಥವ್ಯ ಲೋಪ ಎಸಗಬಾರದು,ದುರಾಸೆಗೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡರೆ ಎಸಿಬಿ ದಾಳಿ ಇತ್ಯಾದಿ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಇದರಿಂದಾಗಿ ಮಾನ ಹಾನಿ ಮಾತ್ರವಲ್ಲದೆ,ಎಲ್ಲಾ ರೀತಿಯ ಸಂಕಷ್ಟಗಳನ್ನ ಅನುಭವಿಸಬೇಕಾಗುತ್ತದೆ ಎಂದು ನೌಕರರಿಗೆ ಎಚ್ಚರಿಸಿದರು.
“ಹಾಸಿಗೆ ಇದ್ದಷ್ಟು ಕಾಲುಚಾಚು”ಎಂಬ ನೀತಿಯನ್ನ ಪ್ರತಿ ನೌಕರರು ಜೀವನದಲ್ಲಿ ಅಳವಡಿಸಿಕೊಂಡರೆ, ಸಂತೃಪ್ತಿ ಹಾಗೂ ನೆಮ್ಮದಿ ಜೀವನ ನಡೆಸಬಹುದು. ಹಾಗೂ ಪ್ರಮಾಣಿಕತೆ ಕೀರ್ತಿಗಳನ್ನ ಗಳಿಸಬಹುದಾಗಿದೆ ಎಂದರು.ಭ್ರಷ್ಟಾಚಾರ ನಿಗ್ರಹಕ್ಕಾಗಿ ಇಲಾಖೆ ಸಾರ್ವಜನಿಕರೊಂದಿಗೆ ನೆರವಿನ ಸೇವೆಗಾಗಿ ಇದ್ದು, ಯಾವುದೇ ಇಲಾಖೆಯ ಅಧಿಕಾರಿ ಅಥವಾ ಯಾವುದೇ ಸಾರ್ವಜನಿಕ ನೌಕರ.ನ್ಯಾಯ ಯುತವಾಗಿ ಮಾಡಬೇಕಾದ ಸಾರ್ವಜನಿಕ ಕೆಲಸಕ್ಕೆ. ಲಂಚದ ಬೇಡಿಕೆ ಅಥವಾ ಹಣ ನೀಡುವಂತೆ ಪೀಡಿಸುವುದು,ಸಾರ್ವಜನಿಕ ಹುದ್ದೆಯನ್ನು ದುರ್ಭಳಕೆ ಮಾಡಿಕೊಂಡು,ಬೇರೆ ರೀತಿಯಲ್ಲಿ ಅವ್ಯವಹಾರಗಳನ್ನು ನಡೆಸುವುದು ಹಾಗೂ ಇದರಿಂದಲೇ ಅಕ್ರಮ ಆಸ್ಥಿಗಳಿಸಿದ್ದರೆ. ಅದು1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಅಪರಾಧವಾಗುತ್ತದೆ,ಇದನ್ನ ಎಲ್ಲರೂ ಅರಿಯ ಬೇಕಿದೆ ಮತ್ತು ಜಾಗ್ರತರಾಗಬೇಕಿದೆ ಎಂದರು.ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹದಳವನ್ನು ರಚಿಸಿದ್ದು,
*ಸಾರ್ವಜನಿಕರು ಅಗತ್ಯವಿದ್ದಲ್ಲಿ ಬಳ್ಳಾರಿ ನಗರದಲ್ಲಿ ಅನಂತಪುರ ರಸ್ಥೆಯಲ್ಲಿರುವ.ಅಮೇರಿಕನ್ ಗೆಸ್ಟ್ ಹೌಸ್ ನಲ್ಲಿರುವ “ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ” ಖುದ್ದು ಸಂಪರ್ಕಿಸಬಹುದು.ಭ್ರಷ್ಟಾಚಾರ ನಿಗ್ರಹದಳದ ಠಾಣೆ ಸ್ಥಿರ ದೂರವಾಣಿ 08392-2927421,ಉಪ ಅಧಿಕ್ಷಕರು-9480806243,ಇನ್ಸ್ಪೆಕ್ಟರ್-9480806315 ಮತ್ತು 9480806316, ಸಂಪರ್ಕಿಸಬಹುದಾಗಿದೆ*
ಪ್ರತಿ ಸಾರ್ವಜನಿಕ ಸೇವಾ ಕಚೇರಿಗಳಲ್ಲಿ,ಗ್ರಾಮೀಣ ಪ್ರದೇಶಗಳಲ್ಲಿ ಮೊದಲ್ಗೊಂಡು ಎಲ್ಲಾ ಹಂತದ ಪ್ರತಿ ಇಲಾಖಾ ಕಚೇರಿಗಳಲ್ಲಿ.ಭ್ರಷ್ಟಾಚಾರ ನಿಗ್ರಹ ದಳದ ಸೇವಾ ಮಾಹಿತಿ ಹಾಗೂ, ಅಧಿಕಾರಿಗಳ ಸಂಪರ್ಕ ವಿಳಾಸ ಸಂಖ್ಯೆ ವಿವರ ಉಳ್ಳ ಫಲಕ ಅಳವಡಿಕೆ ಖಡ್ಡಾಯವಾಗಿದೆ.ಕಾರಣ ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು,ತಹಶಿಲ್ದಾರರಿಗೆ ಎಸಿಬಿ ಪ್ರಭುಲಿಂಗಸ್ವಾಮಿ ಹಿರೇಮಠ ಸೂಚಿಸಿದರು. ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಮಾತನಾಡಿ,ಎಸಿಬಿ ಅಧಿಕಾರಿಗಳ ಸೂಚನೆಗಳನ್ನ ಪಾಲಿಸುವುದಾಗಿ ಭರವಸೆಯನ್ನಿತ್ತರು.ತಾಲೂಕು ಮಟ್ಟದ ವಿವಿದ ಇಲಾಖಾಧಿಕಾರಿಗಳು,ತಹಶಿಲ್ದಾರರ ಕಚೇರಿ ಸಿಬ್ಬಂದಿ ಹಾಜರಿದ್ದರು.ಪಟ್ಟಣ ಸೇರಿದಂತೆ ವಿವಿದ ಗ್ರಾಮ ಗ್ರಾಮಸ್ಥರು ಸಾರ್ವಜನಿಕರು,ಭ್ರಷ್ಟಾಚಾರ ನಿಗ್ರಹ ದಳದ ಕುರಿತು ತಮ್ಮಲ್ಲಿಯ ಗೊಂದಲಗಳನ್ನ ನಿವಾರಿಸಿಕೊಂಡು ಮಾಹಿತಿ ಪಡೆದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಎಚ್ಚರಿಕೆ ಕನ್ನಡ ನ್ಯೂಸ್,9972422030