ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿನ್ನಡೆಗೆ ಕಾರಣ ತಂತ್ರಗಾರಿಕೆಗಳು ವಿಫಲವಾಗಿದ್ದರಿಂದ ಕೆಪಿಸಿ ಉಸ್ತುವಾರಿ ಕವಿತಾ ರೆಡ್ಡಿ ಹೇಳಿಕೆ….
ಬಾಣಗೇರಿ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆ ಚುನಾವಣೆ ಪೂರ್ವದಲ್ಲಿ ಮೂರು ಬಾರಿ ಸಭೆ ನಡೆಸಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದೆ ಆದರೆ ಪಕ್ಷಕ್ಕೆ ಸಂಖ್ಯೆ ಬಲ ಇದ್ದರೂ ಸಹ ಅಧಿಕಾರ ಹಿಡಿಯಲು ವಿಫಲವಾಗಿದೆ ಎಂದರು.
ನಾವು ಮಾಡಿದ ಎಲ್ಲಾ ತಂತ್ರಗಾರಿಕೆಗಳು ವಿಫಲವಾಗಿದ್ದು ಸದಸ್ಯರು ಹಾಗೂ ಸಹಕಾರ ನೀಡದವರ ಬಗ್ಗೆ ಶಿಸ್ತು ಕ್ರಮ ವಹಿಸಲು ಸಮಗ್ರ ವರದಿಯನ್ನು ಹೈಕಮಾಂಡ್ಗೆ ನೀಡಲಾಗುವುದು ಎಂದು ಕೆಪಿಸಿಸಿ ಉಸ್ತುವಾರಿ ಕವಿತಾ ರೆಡ್ಡಿ ಹೇಳಿದರು .
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಿನ್ನಡೆಗೆ ಕಾರಣರಾದ ಹಾಗೂ ಚುನಾವಣೆಯಲ್ಲಿ ಪುರಸಭೆಯ ಸದಸ್ಯರು ಗೈರು ಆಗಿದ್ದು. ಇವರು ಪಕ್ಷಕ್ಕೆ ದ್ರೋಹವನ್ನು ಮಾಡಿದ್ದಾರೆ ಅಲ್ಲದೆ ಅವರಿಗೆ ಮತ ಹಾಕಿದ ಮತದಾರರಿಗೂ ದ್ರೋಹ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಜರಗಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ ಎಂದರು.
ಪುರಸಭೆ ಸದಸ್ಯರ ಹಾಗೂ
ಪಿಟಿ ಪರಮೇಶ್ವರ್ ನಾಯ್ಕ್ ಇತರೆ ಮುಖಂಡರನ್ನು ಒಳಗೊಂಡು ಚುನಾವಣೆ ಪೂರ್ವದಲ್ಲಿ ನಡೆಸಿದ ಸಭೆಯಲ್ಲಿ ಎಲ್ಲಾ ಸದಸ್ಯರು ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ಭರವಸೆ ನೀಡಿದ್ದರು,ವಿಫ್ ನ್ನು ಎಲ್ಲರ ಮನೆಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೀಡಿದ್ದರೂ ಸಹ ಚುನಾವಣೆಯಿಂದ ದೂರ ಸರಿಯುವುದು ಬೇಸರದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಿನಪ್ಪ, ಪ್ರೇಮ್ ಕುಮಾರ್,ಮುಖಂಡರಾದ ಎಂಟಿ ಸುಭಾಷ್ ಚಂದ್ರ, ಎಂಪಿ ವೀಣಾ, ಪುರಸಭೆ ಸದಸ್ಯರಾದ ಎಂ ವಿ ಅಂಜಿನಪ್ಪ,
ಟಿ ವೆಂಕಟೇಶ್ ಟಿ. ಅಬ್ದುಲ್ ರೆಹಮಾನ್, ಚಿಕ್ಕೇರಿ ಬಸಪ್ಪ ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್. ಉದ್ದಾರ್ ಗಣೇಶ್. ಲಾಟಿ ದಾದಾಪೀರ್. ಬಿ ಸೆಕ್ಷಾವಲಿ ಹಲವರು ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾ ಪ್ರಕಟಣೆ ಯಲ್ಲಿ ಭಾಗಿಯಾಗಿದ್ದರು….
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030