ಬಡಲಡುಕು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ…!!!

Listen to this article

ಬಡಲಡುಕು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿನಲ್ಲಿ ನಿಂತಿದ್ದರು ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಮರೀಚಿಕೆ ಯಾಗಿದೆ ಎಂದು ತಹಸೀಲ್ದರ್ ಟಿ.ಜಗದೀಶ್ ಹೇಳಿದರು.ತಾಲೂಕಿನ ಬಡೇಲಡಕು ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು. ಸರ್ಕಾರ ಹತ್ತು ಹಲವು ಯೋಜನೆಗಳನ್ನ ನೀಡಲು ಮುಂದೆ ಬಂದರು ಅನಕ್ಷರಸ್ಥ ಜನರು ಅದನ್ನ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.ಕಾರಣ ಅವರಲ್ಲಿನ ಮೌಢ್ಯತೆ. ಸುಮಾರು ಎಂಟು ಹಳ್ಳಿಗಳಿಂದ ಕೂಡಿದ ಈ ಗ್ರಾಪಂ ನಲ್ಲಿ ಪೋತಿ ಖಾತೆ ವರ್ಗಾವಣೆಗೆ ಕೇವಲ ಇಪ್ಪತ್ತು ಅರ್ಜಿ ಮಾತ್ರ ಬಂದಿವೆ.ಇನ್ನೂ ಅನೇಕರು ಪೋತಿ ಖಾತೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ.ಮನೆ ಬಾಗಿಲಿಗೆ ಈ ಸೇವೆ ಒದಗಿಸಲು ನಾವು ಸಿದ್ದರಿದ್ದರು ಅಸಹಕಾರ ತೋರಿಸುತ್ತಾರೆ.ಇದರಿಂದ ಸರ್ಕಾರದ ಹಲವು ಸೇವೆ ಪಡೆಯಲು ಅನುಕೂಲವಾಗುತ್ತದೆ. ಅನೇಕರು ಮರಣ ಪತ್ರ ಪಡೆದಿಲ್ಲ,ಈಗಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.ಗ್ರಾಮದಲ್ಲಿ ಕೆಲ ಕಾಲನಿಗಳಲ್ಲಿ ನೀರಿನ ಸಮಸ್ಯೆ ಹಾಗೂ ಚರಂಡಿ ಸಮಸ್ಯೆ ಇದ್ದು,ಅದನ್ನ ಸರಿಪಡಿಸಲು ಸೂಚನೆ ನೀಡದ್ದು,ಇನ್ನು ವಸತಿ ಸಮಸ್ಯೆ ಇದೆ ಅದನ್ನ ಸಂಭಂದಿಸಿದ ಅಧಿಕಾರಿಗಳಿಗೆ ತಿಳಿಸಿ ಬಗೆಹರಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಡಿ.ಕೊಟ್ರೇಶ್ ಮಾತಾನಾಡಿ ಗ್ರಾಮದಲ್ಲಿ ಸಶ್ಮಾನ ಸಮಸ್ಯೆ ಇದ್ದು,ಈ ಬಗ್ಗೆ ಅನೇಕ ಬಾರಿ ತಾಲೂಕು ಆಡಳಿತಕ್ಕೆ ಅರ್ಜಿ ನಿಡಿದ್ದರು ಬಗೆಹರಿದಿಲ್ಲ,ಗ್ರಾಮದಲ್ಲಿನ ಸರ್ಕಾರಿ ಜಮೀನುಗಳ ಸಾಗು ಮಾಡುವ ರೈತರಿಗೆ ಪಟ್ಟ ನೀಡಬೇಕು,ಗ್ರಾಮದಲ್ಲಿನ ಮಹಿಳಾ ವಿಧ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ಕಾಲೇಜು ನಿರ್ಮಾಣ ಮಾಡುವುದು ಸೇರಿದಂತೆ ಇತರೆ ಸಮಸ್ಯೆಗಳನ್ನು ತಹಸೀಲ್ದರ್ ಜಗದೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.ಇದಕ್ಕೂ ಮುನ್ನ ತಹಸೀಲ್ದರ್ ಟಿ.ಜಗದೀಶ್ ದಲಿತ ಕಾಲನಿಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರು.ನಂತರ ಸಿಡಿಪಿಒ ಕಚೇರಿ ವತಿಯಿಂದ ಆಯೋಜನೆ ಮಾಡಿದ್ದ ಪೌಷ್ಟಿಕ ಆಹಾರ ಮೇಳದ ಉದ್ಘಾಟನೆ ಮಾಡಿದರು.ಆರೋಗ್ಯ ಇಲಾಖೆವತಿಯಿಂದ ಕಣ್ಣಿನ ತಪಾಸಣೆ ಶಿಬಿರ ಹಾಗೂ ಸ್ವಾಮಿ ವಿವೇಕಾನಂದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಗ್ರಾಪಂ ಅಧ್ಯಕ್ಷೆ ರೇಣುಕ ರಂಗನಾಥ, ಉಪಾಧ್ಯಕ್ಷೆ ಮಲ್ಲಮ್ಮ, ಟಿಎಚ್ಒ ಎಸ್.ಪಿ.ಪ್ರದೀಪ್ ಕುಮಾರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಿ.ಶಿವರಾಜ್,ಕೊಟ್ಟೂರು ತಾಲೂಕು ಅಧ್ಯಕ್ಷ ಜಗದೀಶ್ ನಾಯ್ಕ್,ತಾಪಂ ಸಹಾಯಕ ನಿರ್ದೇಶಕ ಬೋರಣ್ಣ,ಗ್ರಾಪಂ ಸದಸ್ಯರಾದ ಕರಿಯಪ್ಪ, ತಾ.ಪಂ. ಸದಸ್ಯ ಡಿ. ಕೊಟ್ರೇಶ್, ಸಂತೋಷ,ಪ್ರಕಾಶ,ವಿರುಪಾಕ್ಷಪ್ಪ,ಮುಖ್ಯ ಶಿಕ್ಷಕ ರಾಮಕೃಷ್ಣ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend