ಕೂಡ್ಲಿಗಿ:ನಕಲಿ ಸಹಿ ಶೀಲು ದುರ್ಭಳಕೆ!?- ಆರೋಪಿ ಪೊಲೀಸರ ವಶಕ್ಕೆ-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ತಾಲೂಕು ಆಡಳಿತ ಸೌಧದ ಬಳಿ, ಅರ್ಜಿ ಫಾರಂ ಗಳನ್ನು ಮಾರುತ್ತಿದ್ದ ಮಾರುತಿನಾಯ್ಕ ತಂದೆ ಹನುಮಾನಾಯ್ಕ ಎಂಬ ಯುವಕನೋರ್ವ. ಹರಿಶಂಕರ ನಾಯ್ಕ ಎಂಬುವವರ ಹೆಸರಿನ ಪತ್ರ ಬರಹಗಾರ ಪರವಾನಗಿಯನ್ನು, ಈತನು ದುರುಪಯೋಗಪಡಿಸಿಕೊಂಡಿದ್ದಾನೆ. ಪ್ರತಿಯೊಂದು ವ್ಯವಹಾರಗಳಲ್ಲಿ ತಾನೇ ಹರಿಶಂಕರನಾಯ್ಕ ನೆಂದು ಹೇಳಿಕೊಂಡು, ಅಧೀಕೃತ ಪತ್ರಬರಹಗಾರನೆಂಬಂತೆ ಹರಿಶಂಕರನಾಯ್ಕ ರ ಶೀಲನ್ನು ಬಳಸುತ್ತಿದ್ದು. ಮತ್ತು ಹರಿಶಂಕರನಾಯ್ಕರ ಸಹಿಯನ್ನು ಈತನೇ ಫೋರ್ಜರಿ ಮಾಡಿ ವ್ಯವಹರಿಸುತ್ತಿರುವುದು ಸಾಬೀತಾಗಿದ್ದು. ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದು, ಹಾಗೂ ಸಾರ್ವಜನಿಕರಿಗೆ ವಂಚಿದಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ. ಕೂಡ್ಲಿಗಿ ನ್ಯಾಯಾಲಯದ ಹಿರಿಯ ಶ್ರೀಣಿ ನ್ಯಾಯಾಧೀಶರಾದ ಯೋಗೆೇಶರವರು, ಆರೋಪಿ ಮಾರುತಿನಾಯ್ಕ ನನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಅಪರಾಧ ಎಸಗಿರುವುದು ದೃಢಪಟ್ಟಿದ್ದು, ನ್ಯಾಯಾಧೀಶರ ಸೂಚನೆಯ ಮೇರೆಗೆ. ನ್ಯಾಯಾಲಯದ ಶಿರಸ್ಥೆದಾರರಾದ ಹೆಚ್.ನಾಗರಾಜರವರು ಆರೋಪಿ ಮಾರುತಿನಾಯ್ಕ ವಿರುದ್ಧ, ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಮಾರುತಿ ನಾಯ್ಕ ಇದೇ ರೀತಿ ಕೆಲವು ವರ್ಷಗಳಿಂದ, ಇದನ್ನೆ ತನ್ನ ದಂಧೆಯನ್ನಾಗಿಸಿಕೊಂಡಿದ್ದನೆಂದು ಹೇಳಲಾಗುತ್ತಿದೆ. ಮಾ27ರಂದು ನ್ಯಾಯಾಧೀಶರು ಆರೋಪಿ ಮಾರುತಿ ನಾಯ್ಕ ನನ್ನು ನ್ಯಾಯಾಲಯಕ್ಕೆ ಕರೆಸಿ, ವಿಚಾರಣೆ ನಡೆಸಿದಾಗ ಆತನು ಅಪರಾಧ ಎಸಗಿರುವುದು ಸಾಬೀತಾಗಿದೆ. ಅಂದೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕಾನೂನು ರೀತ್ಯ ಕ್ರಮ ಜರುಗಿಸಿದ್ದಾರೆ. ಕೂಡ್ಲಿಗಿ ಪೊಲೀಸರು ಮಾಧ್ಯಮದವರಿಗೆ ಹಾಗೂ ಪತ್ರಿಕೆಗಳ ವರದಿಗಾರರಿಗೆ, ಮಾಹಿತಿ ನೀಡದೇ ಗೌಪ್ಯವಾಗಿರಿಸುವ ಪ್ರಯತ್ನ ಮಾಡಿದ್ದಾದರೂ ಏಕೆ.!? ಎಂಬ ಪ್ರೆಶ್ನೆ ಪ್ರಜ್ಞಾವಂತರಲ್ಲಿ ಮೂಡದೇ ಇರದು…
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030