ಕೊಪ್ಪಳದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ…!!

Listen to this article

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಏರ್ಪಾಡಾಗಿತ್ತು.

ವೇದಿಕೆಯ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಚಾಲನೆ ಗೊಂಡಿತು.

ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ದೊಡ್ಡ ಕೊಡುಗೆ ನೀಡಿದೆ. ಮೋದಿ ಮಾತಿನ ಮೋಡಿಗಾರ ಜನ ಅವರ ಮಾತು ನಂಬಬಾರದು. ದೇಶದ ಶಾಂತಿ ಸುವ್ಯವಸ್ಥೆಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದರು.

ಕಾರ್ಯಾಧ್ಯಕ್ಷ ವಸಂತ ಕುಮಾರ, ಕಳೆದ ಹತ್ತು ವರ್ಷದಲ್ಲಿ ಎರೆಡು ಬಾರಿ ಲೋಕಸಭಾ ಚುನಾವಣೆ ಸೋತಿದ್ದೇವೆ. ಬಿಜೆಪಿ ಜಾತಿ ಹೆಸರಲ್ಲಿ ಒಡೆದು ಆಳುವ ನೀತಿ ಮಾಡಿ ಗೆದ್ದಿದೆ. ಆದರೆ ಕಾಂಗ್ರೆಸ್ ಎಲ್ಲಾ ಜಾತಿ ಜನಾಂಗಗಳನ್ನು ಒಗ್ಗೂಡಿಸುವ ಪಕ್ಷವಾಗಿದೆ. ಕಾರಣ ಮತ್ತೆ ಚುನಾವಣೆ ಬಂದಿದ್ದು ಪರಿಣಾಮಕಾರಿಯಾಗಿ ಎದುರಿಸಿ. ಮೂರನೇ ಬಾರಿ ಮೋದಿಯವರು ಗೆದ್ದರೆ ಹಿಟ್ಲರ್ ಆಗುತ್ತಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷಗೆಲ್ಲಿಸೋಣ ಎಂದರು.

ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಯೋಗಿ ಪ್ರಜಾಪ್ರಭುತ್ವ ಕಷ್ಠದಲ್ಲಿದೆ. ಎಲ್ಲ ದರಗಳು ಏರಿದ್ದು ದರ ನಿಯಂತ್ರಣ ಆಗುತ್ತಿಲ್ಲ. ಇದುವರೆಗೂ ಮೋದಿ ಮಣಿಪುರಕ್ಕೆ ಹೋಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಹಸ್ತದ ಗುರುತಿಗೆ ಮತ ನೀಡುವಂತೆ ಕೋರಿದರು.

ಶಾಸಕ ಬಿ.ಎಂ. ನಾಗರಾಜ, ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ನೀಡಿದ ಸರ್ಕಾರ ನಮ್ಮದಾಗಿದೆ. ಕಳೆದ ಚುನಾವಣೆಯಲ್ಲಿ 12,000 ಹೆಚ್ಚಿನ ಮತ ಕೊಟ್ಟಿದ್ದಿರಿ ನಿಮ್ಮ ಎಲ್ಲರ ಸಹಕಾರದಿಂದ ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರನ್ನು ಗೆಲ್ಲಿಸುವ ಭರವಸೆ ನೀಡುತ್ತಿದ್ದೇನೆ. ಸಣ್ಣಪುಟ್ಟ ತೊಂದರೆಗಳಿಗೆ ನೇರವಾಗಿ ಭೇಟಿಮಾಡಿ. ಅಭಿವೃದ್ಧಿಗೆ ಒತ್ತು ಕೊಡೋಣ. ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ ಎಂದರು.

ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಕಳೆದೆರೆಡು ಚುನಾವಣೆಗಳಲ್ಲಿ ಮೊದಲು‌ ನಮ್ಮ ತಂದೆ ಹಾಗೂ ಎರಡನೇ ಬಾರಿ ನಾನು ಸ್ಪರ್ಧಿಸಿದ್ದೆ. ಕಳೆದ ಬಾರಿ ನಾನು ಸ್ಪರ್ಧಿಸಿದ್ದಾಗ ನರೇಂದ್ರ ಮೋದಿಯವರ ಗಾಳಿ ಇತ್ತು. ಆವಾಗಲೂ ಈ ಸಿರುಗುಪ್ಪ ಕ್ಷೇತ್ರದಲ್ಲಿ ಹನ್ನೆರಡು ಸಾವಿರ ಹೆಚ್ಚಿನ ಮತಗಳು ಸಿಕ್ಕಿದ್ದವು. ಈ ಬಾರಿ ರಾಜ್ಯ ಮತ್ತು ಕೇಂದ್ರದಲ್ಲಿಯೂ ಬದಲಾವಣೆ ಗಾಳಿ ಬೀಸುತ್ತಿದ್ದು ಸಿರುಗುಪ್ಪ ಕ್ಷೇತ್ರದ ಜನತೆ ನನಗೆ ಕೈ ಬಿಡುವುದಿಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ನೀಡುತ್ತಿರಿ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದೇನೆ ಎಂದರು

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಶಿವರಾಜ್ ತಂಗಡಗಿ ಮಾತನಾಡಿ ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆಯುವ ಚುನಾವಣೆ ಯಾಗಿದ್ದು ಕಳೆದ ಹತ್ತು ವರ್ಷಗಳಿಂದ ಸುಳ್ಳಿನ ಭರವಸೆಗಳನ್ನು ನೀಡುತ್ತಾ ಬಂದಿರುವ ಬಿಜೆಪಿ ಪಕ್ಷ ಇದೀಗ ವಿಶ್ವಾಸ ಕಳೆದುಕೊಂಡಿದೆ. ಸುಳ್ಳನ್ನೇ ಹೇಳಿ ಯುವಕರ ದಾರಿ ತಪ್ಪಿಸಿರುವ ಯುವಕರು ಇದನ್ನು ಅರ್ಥಮಾಡಿಕೊಳ್ಳಬೇಕು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರು ಮಾಡಿದ್ದಾರೆಯೇ ಇದರಿಂದ ನಿಜವಾಗಿಯೂ ನಿಮಗೆ ಸಿಟ್ಟು ಬಂದರೆ ಮತ್ತೆ ಮೋದಿ ಹೆಸರು ಹೇಳುವವರಿಗೆ ಪ್ರಶ್ನೆ ಕೇಳಿ ಮತ್ತು ಅವರ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ ಮಾತನ್ನು ಸಮರ್ಥಿಸಿ ಕೊಂಡರು. ಈ ಬಾರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರನ್ನು ಈ ನಿಮ್ಮ ಸಿರುಗುಪ್ಪ ಕ್ಷೇತ್ರದಿಂದ 50,000 ಹೆಚ್ಚಿನ ಮತ ನೀಡುವುದರೊಂದಿಗೆ ಗೆಲ್ಲಿಸಬೇಕೆಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ಸಹಕಾರಿ ರತ್ನ ಚೊಕ್ಕ ಬಸವನಗೌಡ ಮಾತನಾಡಿದರು. ಸಭೆಯಲ್ಲಿ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ನಾಗೇಂದ್ರಗೌಡ, ತಿಮ್ಮಣ್ಣ ನಾಯಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ವರಪ್ರಸಾದರೆಡ್ಡಿ, ಶಿವಯೋಗಿ, ಎಂ ಗೋಪಾಲ ರೆಡ್ಡಿ, ಉಮೇಶ ಗೌಡ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ರಾಮಸ್ವಾಮಿ ಸಾಹುಕಾರ, ಬಿ.ಎಂ. ಸತೀಶ್, ಕೊಡ್ಲೆ ಮಲ್ಲಿಕಾರ್ಜುನ, ಬಿ.ಎಂ. ಅಪ್ಪಾಜಿ ನಾಯಕ, ಮುತ್ಯಾಲ ಶೆಟ್ಟಿ, ಕೋಟಿರೆಡ್ಡಿ, ಕರಣಂ ಬಸವರಾಜ, ಪವನ್ ದೇಸಾಯಿ, ಬಿ.ವೆಂಕಟೇಶ, ಗೊರವರ ಶ್ರೀನಿವಾಸ, ಕಾಯಿಪಲ್ಯ ನಾಗರಾಜ, ಮೋದ್ದೀನ್ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು…

ವರದಿ. ಉಮೇಶ್, ಎಚ್, ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend