ಬಕ್ರೀದ್(ಈದ್-ಉಲ್-ಅಝ್ಹಾ) ಹಬ್ಬದ ಆಚರಣೆಯ ಪೂರ್ವಭಾವಿ ಸಭೆ.
ಸಿಂಧನೂರು : ಜುಲೈ 8. ಮುಸ್ಲಿಂ ಬಾಂಧವರಎರಡನೇ ಪ್ರಮುಖ ಹಬ್ಬವಾದ ಬಕ್ರೀದ್ (ಈದ್-ಉಲ್- ಅಝ್ಹಾ) ಹಬ್ಬವನ್ನು ಜುಲೈ 10, ರವಿವಾರದಂದು ರಾಜ್ಯಾದ್ಯಂತ ಆಚರಿಸಲಾಗುವುದೆಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿರುತ್ತದೆ. ಸದರಿ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ಈದ್ಗಾ ಮೈದಾನ, ಮಸೀದಿಗಳಲ್ಲಿ ಬೆಳಿಗ್ಗೆ 8.30.ರಿಂದ 9.30 ರ ಒಳಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮುಗಿಸಬೇಕು. ಸಿಂಧನೂರು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದೆ ಅದನ್ನು ಮುಂದುವರೆಸಿಕೊಂಡು ಹೋಗೋಣ ಎಂದರು.
ನಗರದ ತಹಸೀಲ್ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ ಅರುಣ್.ಹೆಚ್.ದೇಸಾಯಿ ರವರು ಅಧಿಕಾರಿಗಳ ಹಾಗೂ ಮುಸ್ಲಿಂ ಬಾಂಧವರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಹಬ್ಬದ ಧಾರ್ಮಿಕ ಆಚರಣೆಯ ಪ್ರಯುಕ್ತ, ಹಬ್ಬದ ದಿನವನ್ನೂ ಒಳಗೊಂಡಂತೆ ಮೂರು ದಿನಗಳವರೆಗೆ ಖುರ್ಬಾನಿ (ಪಾಣಿ ಬಲಿದಾನ) ನೀಡುವುದನ್ನು ನೀಷೇದಿಸಲಾಗಿದೆ.ಪವಿತ್ರ ಬಕ್ರೀದ್ (ಈದ್-ಉಲ್-ಅಝ್ಹಾ) ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕಾಗಿರುವುದರಿಂದ ಹಬ್ಬದ ಆಚರಣೆ ಮಾಡುವ ಸಂದರ್ಭದಲ್ಲಿ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿಗಧಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಖುರ್ಜಾನಿಯನ್ನು ನೆರವೇರಿಸತಕ್ಕದ್ದು. ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು. ಎಲ್ಲೆಂದರಲ್ಲಿ ಬೀಸಾಡದಂತೆ
ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಯಾವುದೇ
ಪೊಲೀಸ್ ಇಲಾಖೆ, ಪಶು ಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಹಾಗೂ ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಖಡಕ್ಕಾಗಿ ಹೇಳಿದರು.
ಈದ್ಗಾ ಮೈದಾನ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಬುಲೇನ್ಸ್, ಅಗ್ನಿಶಾಮಕ ನೀರಿನ ವಾಹನ, ಕುಡಿಯಲು ನೀರು, ಗ್ರಾಮೀಣ ಭಾಗದಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕಲಾರದಂತೆ ಪಿಡಿಓಗಳು ಹಾಗೂ ವಿಎಗಳು ನೀಗಾವಹಿಸಬೇಕು, ಜನರಿಗೆ ಕಸ ವಿಲೇವಾರಿ ವಾಹನದಲ್ಲಿ ಜಿಂಗಲ್ ಮೂಲಕ ಪ್ರಚಾರಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರು, ಟಿಎಚ್‌ಓ ಡಾ. ಅಯ್ಯನಗೌಡ, ಪಶುಸಂಗೋಪನ ನಿರ್ದೇಶಕರಾದ ಡಾ.ಶರಣೇಗೌಡ,ಪಿ.ಎಸ್.ಐ.ಸೌಮ್ಯ ಹಿರೇಮಠ , ಬಸವರಾಜ,ಹಾಜಿಬಾಬು, ಮುಸ್ಲಿಂ ಸಮುದಾಯದ ಜೀಲಾನಿ ಪಾಶ, ಆಸೀಫ್, ಖಾಜಿ ಮಲಿಕ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030