4ನೇ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ 369ಕ್ಕೆ ಅಲೌಟ್ ಭಾರತ 2ವಿಕೆಟ್ ನಷ್ಟಕ್ಕೆ 62ರನ್….

Listen to this article

ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್

ಬ್ರಿಸ್ಬೇನ್: ಬೌಲರ್ ಗಳ ಮೇಲಾಟದಲ್ಲಿ ಆಸ್ಟ್ರೇಲಿಯಾ ತಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 369 ರನ್ ಗೆ ಆಲೌಟಾದರೆ, ಭಾರತ ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಬ್ರಿಸ್ಬೇನ್ ನಲ್ಲಿ ಶನಿವಾರ 5 ವಿಕೆಟ್ ಗೆ 274 ರನ್ ಗಳಿಂದ ಆಟ ಮುಂದುವರಿಸಿದ ಆಸೀಸ್ 369 ರನ್ ಗಳಿಗೆ ಸರ್ವ ಪತನ ಕಂಡಿತು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 62 ರನ್ ಕಲೆ ಹಾಕಿದೆ.

ರೋಹಿತ್ ಶರ್ಮಾ 74 ಎಸೆತಗಳಲ್ಲಿ 44 ಹಾಗೂ ಶುಭಮನ್ ಗಿಲ್ 7 ರನ್ ಗಳಿಗೆ ಆಟ ಮುಗಿಸಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (8), ಅಜಿಂಕ್ಯ ರಹಾನೆ (2) ಭಾನುವಾರಕ್ಕೆ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಈ ಇಬ್ಬರೂ ಆಟಗಾರರು ಸಮಯೋಚಿತದ ಆಟದ ಮೇಲೆ ಚಿತ್ತ ನೆಡಬೇಕಿದೆ.

ಚಹಾ ವಿರಾಮದ ನಂತರ ಸುರಿದ ಮಳೆಯಿಂದ ನಂತರದ ಆಟಕ್ಕೆ ಅಡ್ಡಿಯಾಯಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಟಿಮ್ ಪೇನ್ 104 ಎಸೆತಗಳಲ್ಲಿ 6 ಬೌಂಡರಿ ಸೇರಿದ 50 ರನ್ ಬಾರಿಸಿ ಔಟಾದರೆ, ಮಿಚೆಲ್ ಸ್ಟಾರ್ಕ್ 20 ಮತ್ತು ನಾಥನ್ ಲಿಯಾನ್ 24 ರನ್ ಗಳಿಸಿದರು.

ಭಾರತದ ಪರ ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಕಬಳಿಸಿದರೆ, ಮೊಹಮದ್ ಸಿರಾಜ್ 1 ವಿಕೆಟ್ ಗೆ ತೃಪ್ತಿ ಹೊಂದಿದರು.

ನಟರಾಜನ್ 78 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಚೊಚ್ಚಲ ಪಂದ್ಯದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಎಡಗೈ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ಆರ್.ಪಿ. ಸಿಂಗ್ 2005-06ರಲ್ಲಿ 89 ರನ್ ಗೆ 4 ವಿಕೆಟ್ ಪಡೆದಿದ್ದು ಇದುವರೆಗಿನ ಸಾಧನೆಯಾಗಿದೆ. 1952ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯಾಲ್ ಚಂದ್ 97 ರನ್ ಗೆ 5 ವಿಕೆಟ್ ಪಡೆದಿದ್ದರು.

ಈ ಪಂದ್ಯದಲ್ಲಿ ಆಡುವ ಮೂಲಕ ನೆಟ್ ಬೌಲರ್ ಆಗಿದ್ದ ನಟರಾಜನ್ ಒಂದೇ ಪ್ರವಾಸದಲ್ಲಿ 3 ಮಾದರಿಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಗೌರವಕ್ಕೆ ಪಾತ್ರರಾಗಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend