ಗೋವಿಂದ ಕಾರಜೋಳ ಹಾಗೂ ಯಡಿಯೂರಪ್ಪರ ವಿರುದ್ಧ ನಿಂದನೆಯ ಮಾತುಗಳನ್ನಾಡಿರುವ ಶಾಸಕ ಡಾ.ಎಂ ಚಂದ್ರಪ್ಪ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಕಾರ್ಯಕರ್ತರ ಪಟ್ಟು…!!!

Listen to this article

ಹೊಳಲ್ಕೆರೆ : ಚಿತ್ರದುರ್ಗ ಲೋಕಸಭಾ ಬಿಜೆಪಿ ಪಕ್ಷದ ಅಭ್ಯರ್ಥಿ ಗೋವಿಂದ ಕಾರಜೋಳ ಹಾಗೂ ಯಡಿಯೂರಪ್ಪರ ವಿರುದ್ಧ ನಿಂದನೆಯ ಮಾತುಗಳನ್ನಾಡಿರುವ ಶಾಸಕ ಡಾ.ಎಂ ಚಂದ್ರಪ್ಪ ಇವರನ್ನು ಪಕ್ಷದಿಂದ ಕೂಡಲೇ ಉಚ್ಛಾಟಿಸಬೇಕೆಂದು ಹೊಳಲ್ಕೆರೆ ತಾಲೂಕು ಬಿಜೆಪಿ ಪಕ್ಷದ ನೂರಾರು ಮುಖಂಡರು ಆಗ್ರಹಿಸಿದ್ದಾರೆ.

ಕಳೆದ ಎರಡು ದಿನಗಳಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ವಿದ್ಯಮಾನಗಳ ಹಿನ್ನೆಲೆ ತಾಲೂಕಿನಲ್ಲಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಪಟ್ಟಣದ ಸ್ನೇಹ ಕಂಫರ್ಟ್ನಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಜಿ ಆಧ್ಯಕ್ಷ ರಾಜಶೇಖರ್ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಇವರ ಕೃಪಾ ಆಶೀರ್ವಾದದಿಂದ ಕಳೆದ ಮೂರು ಚುನಾವಣೆಗಳಲ್ಲಿ ಎಂ.ಚಂದ್ರಪ್ಪ ಶಾಸಕರಾಗಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಬಿಜೆಪಿ ಪಕ್ಷದ ಮುಖಂಡ ಮೊದಲಿನಿಂದಲೂ ಎಂ.ಚಂದ್ರಪ್ಪ ವಿರೋಧಿಸುತ್ತಾ ಬಂದಿದ್ದಾರೆ. ಇಂತಹ ಜನವಿರೋದಿ ಬಿ.ಎಸ್ ಯಡಿಯೂರಪ್ಪ ಬೆಂಬಲ ಇರುವ ಏಕೈಕ ಉದ್ದೇಶ ದಿಂದ ಮತ ನೀಡಿ ಶಾಸಕರನ್ನಾಗಿ ಮಾಡಲಾಗಿದೆ. ಸ್ವಂತ ಬಲದಿಂದ ನೂರು ಮತ ಪಡೆಯುವ ಶಕ್ರಿ ಚಂದ್ರಪ್ಪಗಿಲ್ಲ. ಇದನ್ನ ಶಾಸಕ ಎಂ ಚಂದ್ರಪ್ಪ ಅರಿತುಕೊಳ್ಳದೆ ಬಿಜೆಪಿ ಪಕ್ಷ ಹಾಗೂ ಪಕ್ಷದ ಬಿಎಸ್ ಯಡಿಯೂರಪ್ಪ ವಿರುದ್ಧ ಮೋಸ ವಂಚನೆ ಮಾತನಾಡಿರುವು ಖಂಡದೀಯ ಹಾಗಾಗಿ ತಕ್ಷಣವೇ ಶಾಸಕ ಸ್ಥಾನಕ್ಕೆ ಚಂದ್ರಪ್ಪ ರಾಜಿನಾಮೆ ನೀಡಬೇಕು. ಇಲ್ಲವೆ ಬಿಜೆಪಿ ಪಕ್ಷ ಇವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಮತ್ತಿಘಟ್ಟದ ರಂಗಸ್ವಾಮಿ ಮಾತನಾಡಿ , ಲೋಕಸಭಾ ಚುನಾವಣಾ ಗೋವಿಂದ ಕಾರಜೋಳ ಇವರನ್ನ ಗೋ ಬ್ಯಾಕ್ ಎನ್ನಲು ಯಾವ ನೈತಿಕತೆ ಎಂ.ಚಂದ್ರಪ್ಪನಿಗೆ ಇದೆ. ಎಂ.ಚಂದ್ರಪ್ಪನು ಸಹ ಹೊಳಲ್ಕೆರೆ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿ, ಇವರು ಸಹ ಗೋ ಬ್ಯಾಕ್ ಆಗಬೇಕು ಎಂದು ಒತ್ತಾಯಿಸಿದರು .

ಆರ್.ಟಿ.ಒ.ಮೂರ್ತಿಣ್ಣ ಮಾತನಾಡಿ, ಹೊಳಲ್ಕೆರೆ ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ ಸಾವಿರಾರು ಕಾರ್ಯಕರ್ತರನ್ನು ಶಾಸಕ ಎಂ. ಚಂದ್ರಪ್ಪ ಮೂಲೆಗುಂಪು ಮಾಡಿದ್ದಾರೆ. ಪಕ್ಷದ ಮೌಲ್ಯಗಳು ಗೊತ್ತಿಲ್ಲ ವ್ಯಕ್ತಿಗಳನ್ನ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಯಾವತ್ತು ಇವರು ಪಕ್ಷ ಸಂಘಟನೆ ಬಗ್ಗೆ ಒತ್ತುನೀಡಿಲ್ಲ. ಯಡಿಯೂರಪ್ಪ ಬಿಜೆಪಿ ಎನ್ನುವ ಸಿದ್ಧಾಂತದ ಮೇಲೆ ತಾಲೂಕಿನ ನಾಗರಿಕರು ಮತ ನೀಡಿದ್ದಾರೆ. ಇವರು ಶಾಸಕರಾಗಿದ್ದಾರೆ. ಇವರಿಗೆ ಸ್ವಂತ ಬಲ ಇದ್ದಲ್ಲಿ ತಕ್ಷಣವೇ ರಾಜೀನಾಮೆ ಕೊಟ್ಟು ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಲಾಗಿದ್ದಾರೆ.

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಯಸಿಂಹ ಖಟ್ರೋತ್ ಮಾತನಾಡಿ,ಬಿಜೆಪಿ ಪಕ್ಷ ಬಿ.ಎಸ್. ಯಡಿಯೂರಪ್ಪ ಹೊಳಲ್ಕೆರೆ ಕ್ಷೇತ್ರದ ಮತದಾರರ ಜೀವನಾಡಿ. ಬಿಜೆಪಿ ಪಕ್ಷಕ್ಕೆ ತನ್ನದೇ ಆದ ನೆಲೆಯನ್ನ ಮತದಾರರು ಕಲ್ಪಿಸಿಕೊಟ್ಟಿದ್ದಾರೆ. ಟಿಕೆಟ್ ಯಾರಿಗೆ ಕೊಟ್ಟರು ಜನರು ಬಿಜೆಪಿಗೆ ವೋಟ್ ಹಾಕುತ್ತಾರೆ. ಇ.ಎಸ್.ಯಡಿಯೂರಪ್ಪ ಎಂ.ಚಂದ್ರಪ್ಪ ಇವರಿಗೆ ಟಿಕೆಟ್ ಕೊಟ್ಟ ಪರಿಣಾಮ ಎಂ.ಚಂದ್ರಪ್ಪ ಶಾಸಕರಾಗಿದ್ದಾರೆ. ಯಡಿಯೂರಪ್ಪ ನವರ ಬೆಂಬಲದಿಂದ ಶಾಸಕರಾಗಿ ಇಷ್ಟು ದೊಡ್ಡ ಮಟ್ಟದ ರಾಜಕಾರಣಿಯಾಗಿದ್ದಾರೆ. ಇವರಿಗೆ ರಾಜಕೀಯ, ಸ್ಥಾನ ಮಾನ, ಶಕ್ತಿ ,ನೀಡಿದ ಯಡಿಯೂರಪ್ಪ ಹಾಗೂ ಪಕ್ಷವನ್ನು ನಿಂದಿಸುವಂತಹ ವ್ಯಕ್ತಿತ್ವದ ಎಂ. ಚಂದ್ರಪ್ಪ ಮತ್ತು ಮಗ ರಘುಚಂದನ್ ಇವರನ್ನು ಪಕ್ಷ ಉಚ್ಛಾಟಿಸಬೇಕೇಂದರು. ಹೊಳಲ್ಕೆರೆ ವಿಧಾನಸಭಾ

ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತಗಳನ್ನ ಗೋವಿಂದ ಕಾರಜೋಳ ಸಿಕ್ಕಲಿವೆ. ಬಿಜೆಪಿ ಪಕ್ಷದ ಮೂಲ ಕಾರ್ಯಕರ್ತರು ಬಿಜೆಪಿ ಪಕ್ಷ ಸಿದ್ಧಾಂತವನ್ನು ಉಳಿಸಿ ಬೆಳೆಸಲು ನಿರಂತರವಾಗಿ ಹೋರಾಟ ನಡೆಸುತ್ತಿರುವ ಪರಿಣಾಮ ಬಿಜೆಪಿ ಬಲಿಷ್ಠವಾಗಿದೆ. ಎಂ.ಚಂದ್ರಪ್ಪ ಇವರಿಂದಲ್ಲ ಎಂದರು.

ಮುಖಂಡ ಅಗ್ರಹಾರ ಬಸವರಾಜ್ ಮಾತನಾಡಿ, ಬಿಜೆಪಿ ಪಕ್ಷ ಉತ್ತಮ ಅಭ್ಯರ್ಥಿಯನ್ನು ಲೋಕಸಭೆಗೆ ನಿಲ್ಲಿಸಿದೆ. ನಾವೆಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಎಂ.ಚಂದ್ರಪ್ಪ ಕ್ಷೇತ್ರದ ಎಂಎಲ್ಎ ಆಗಿದ್ದರೂ ಅವರ ಅಗತ್ಯ ಇಲ್ಲ. ಅವರನ್ನು ನೋಡಿ ಯಾರೂ ಮತ ಹಾಕಲ್ಲ. ಎಂ.ಚಂದ್ರಪ್ಪ ಬರುವ ಅಗತ್ಯವೂ ಇಲ್ಲ, ಜನರು ಸ್ವಯಂ ಪ್ರೇರಿತರಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡುತ್ತಾರೆ ಎಂದರು.

ಕಲ್ಲನಾಗ್ತಿಹಳ್ಳಿ ಸುರೇಶ್ ಮಾತನಾಡಿ, ಶಾಸಕ ಎಂ ಚಂದ್ರಪ್ಪ ಕಳೆದ ಲೋಕಸಭಾ ಚುನಾವಣೆ, ಎಂ.ಎಲ್.ಸಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕೆಲಸ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಪ್ರಚಾರ ಮಾಡಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರು. ಎಂಎಲ್ಸಿ ಕೆಎಸ್ ನವೀನ್ ಚುನಾವಣೆಯಲ್ಲಿ ಪಕ್ಷದ ವಿರೋಧಿ ಚಟುವಟಿಕೆ ಕೈಗೊಂಡಿದ್ದರು. ಪಕ್ಷದಲ್ಲಿರುವ ಮುಖಂಡರನ್ನು ಸೋಲಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡಿರುವ ಎಂ ಚಂದ್ರಪ್ಪ ಪಕ್ಷದ್ರೋಹಿ.
ಬಾಡಿಗೆ ಬಂಟರನ್ನು ಕರೆಸಿ ಪ್ರತಿಭಟನೆ ಮಾಡಿದರೇ ಯಾರು ಎದರಲ್ಲ ಶಕ್ರಿ ಸಾಮಾಥ್ಯ ಇದ್ದರೆ ಪಕ್ಷೇತರವಾಗಿ ಗೆಲ್ಲಲ್ಲಿ ಎಂದು ಸವಾಲಾಕಿದರೂ.
ಗುಂಡೇರಿ ಚಂದ್ರಶೇಖರ್ ತಾ. ಪಂ. ಮಾಜಿ ಸದಸ್ಯ ಲವಕುಮಾರ್, ನಂದನ ಹೊಸೂರ್ ಮಂಜು, ಶರತ್ ಕುಮಾರ್ ಪಾಟೀಲ್ , ಕರಿಬಸಪ್ಪ, ಶಿವಲಿಂಗಪ್ಪ, ಕುಡಿನೀರುಕಟ್ಟೆ ಪ್ರಭು, ಚಿಕ್ಕ ಎಮ್ಮಿಗನೂರು ಪ್ರಕಾಶ್, ಅಂದನೂರು ರಾಜಣ್ಣ, ಮಾಳೇನಹಳ್ಳಿ ಶಿವಲಿಂಗಪ್ಪ, ಬಿಎಸ್ ವೇದಮೂರ್ತಿ, ಜಗದೀಶ್ ದಂಡಿಗೇನಹಳ್ಳಿ, ದಿನೇಶ್ , ಪ್ರಶಾಂತ್ ಬಿದುರ್ಗ, ತಿಪ್ಪೇಸ್ವಾಮಿ, ರವಿಶಂಕರ್ ಕುಬೇರಪ್ಪ ,ವಕೀಲರಾದ ರಂಗಸ್ವಾಮಿ, ಎಸ್. ವಿಜಯ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.ಹೊಳಲ್ಕೆರೆ ಪಟ್ಟಣದ ಸ್ನೇಹ ಕಂಪರ್ಟ್ ನಲ್ಲಿ ಬಿಜೆಪಿ ಪರಿವಾರದಿಂದ ನಡೆದ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತ…

ವರದಿ. ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend