ಹೂವಿನ ಹಡಗಲಿ ನಂದಕುಮಾರ ಅವರ ಹಡಗಲಿ ಭಾಗದ ಭಾಷೆಯ ಕತೆಗಳ ಸಂಕಲನ ‘ಜಾಲಿಮುಳ್ಳು’ ಕೃತಿ ಬಿಡುಗಡೆ…!!!

Listen to this article

ಹೂವಿನ ಹಡಗಲಿ ನಂದಕುಮಾರ ಅವರ ಹಡಗಲಿ ಭಾಗದ ಭಾಷೆಯ ಕತೆಗಳ ಸಂಕಲನ ‘ಜಾಲಿಮುಳ್ಳು’ ಕೃತಿ ಬಿಡುಗಡೆ.

ವಿಜಯ ನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಯುವ ರಂಗಕರ್ಮಿ ನಂದಕುಮಾರ ಅವರ ಹೂವಿನ ಹಡಗಲಿ ಭಾಗದ ಭಾಷೆಯಲ್ಲಿ ರಚನೆಯಾದ ಕತೆಗಳ ಸಂಕಲನ ‘ಜಾಲಿಮುಳ್ಳು’ ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇದನ್ನ ಅಂಕಿತ ಪ್ರಕಾಶನದಿಂದ ಅಂಕಿತ ಪ್ರತಿಭಾ ಮಾಲಿಕೆಯಲ್ಲಿ ಪ್ರಕಟಿಸಲಾಗಿತ್ತು.
ಇದರ ಜೊತೆಗೆ ಜೋಗಿ ಅವರ ‘ಕತೆ ಪುಸ್ತಕ’ ಮತ್ತು ‘ಸು ಬಿಟ್ರೆ ಬಣ್ಣ ಬ ಬಿಟ್ರೆ ಸುಣ್ಣ’ ನಾಟಕವೂ ಬಿಡುಗಡೆಯಾಗಿದೆ. ವಿಶೇಷವೆಂದರೆ ನಂದಕುಮಾರ ಈ ನಾಟಕದ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಜೊತೆಗೆ ಅನನ್ಯ ತುಷಿರಾ ಅವರ ‘ಅರ್ಧ ನೆನಪು ಅರ್ಧ ಕನಸು ‘ ಯೂ ಬಿಡುಗಡೆಗೊಂಡಿತು.

ನಾಲ್ಕು ಪುಸ್ತಕಗಳನ್ನ ಖ್ಯಾತ ನಟ ಅನಂತನಾಗ್ ರವರು ಬಿಡುಗಡೆ ಮಾಡಿದರು.ಲೇಖಕಿ ಸಂಧ್ಯಾ ರಾಣಿ, ವಿಮರ್ಶಕ ಹರೀಶ್ ಕೇರಾ ಪುಸ್ತಕದ ಕುರಿತು ಮಾತನಾಡಿದರು.
ಮಲ್ಲಿಗೆ ನಾಡಿನ ಮನೆಮನಗಳಲ್ಲಿ ನಟನೆ, ನೃತ್ಯ, ಪ್ರತಿಭೆಯ ಮೂಲಕ ಹೆಸರುವಾಸಿ ಆಗಿದ್ದ ನಂದಕುಮಾರ ಇನ್ನೂ ಹಡಗಲಿ ಭಾಷೆಯ ಕತೆಗಳ ಸಂಕಲನ ಬಿಡುಗಡೆಗೆ ಕೊಂಡಿದ್ದಕ್ಕೆ ಅಪ್ತ ಬಳಗ ಸೇರಿದಂತೆ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಅಜಯ.ಚ
ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend