ಶಾಸಕ ಜಿ ಕರುಣಾಕರ ರೆಡ್ಡಿಅವರು ಹರಪನಹಳ್ಳಿ ನಾಯಕ ಮಹಾರಾಜರ ಪರಂಪರೆಯ ಇತಿಹಾಸ ತಿಳಿದುಕೊಳ್ಳುವಲ್ಲಿ ವಿಫಲ…!!!

Listen to this article

ಶಾಸಕ ಜಿ ಕರುಣಾಕರ ರೆಡ್ಡಿಅವರು ಹರಪನಹಳ್ಳಿ ನಾಯಕ ಮಹಾರಾಜರ ಪರಂಪರೆಯ ಇತಿಹಾಸ ತಿಳಿದುಕೊಳ್ಳುವಲ್ಲಿ ವಿಫಲ….

ಹರಪನಹಳ್ಳಿ :-ವಾಲ್ಮೀಕಿ ನಾಯಕ ಸಮುದಾಯವನ್ನು ಸಂಪೂರ್ಣವಾಗಿ ಕಡೆ ಗಣಿಸಿರುವ ಶಾಸಕ ಕರುಣಕರ ರೆಡ್ಡಿಯವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗವುದು ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಮುಖಂಡ ಹೊಸಳ್ಳಿ ಮಲ್ಲೇಶ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹರಪನಹಳ್ಳಿಯನ್ನು ಸುಧೀರ್ಘ 8೦೦ ವರ್ಷಗಳ ಕಾಲ ಆಳ್ವಿಕೆ ಮಾಡಿದ ರಾಜ ಮಹಾರಾಜರ ಹೆಸರುಗಳನ್ನು ಮರೆತು ನಿರ್ಲಕ್ಷವಹಿಸಿರುವುದಕ್ಕೆ ಇತ್ತೀಚಿಗೆ ಹರಪನಹಳ್ಳಿ ಪಟ್ಟಣದಲ್ಲಿ ಸ್ವಾಗತ ಕಮಾನು ಬೋರ್ಡುಗಳಿಗಳಿಗೆ ಪಾಳೆಯಗಾರರ ನಾಡು ಇಲ್ಲವೇ ಗಂಡು ಮೆಟ್ಟಿದ ನಾಡು ಎಂದಾಗಲಿ, ರಾಜರ ಹೆಸರನ್ನಾಗಲಿ ಅಥವಾ ಕೋಟೆ ನಾಡು ಎಂದಾಗಲಿ, (ಬೋರ್ಡ್ನಲ್ಲಿ) ಪಟ್ಟಣದ ಸುಸ್ವಾಗತ ನಾಮಫಲಕದಲ್ಲಿ ಬರೆಯಿಸದೆ, ವಿದ್ಯಾಸಿರಿ ನಾಡು ಹರಪನಹಳ್ಳಿ ಎಂದು ಬರೆಸಲು ಹೇಳಿದ್ದರಂತೆ.

ಹೀಗೆ ಬರೆಸಿರುವುದಕ್ಕೆ ನಮ್ಮ ತಕರಾರು ಏನು ಇಲ್ಲ. ಆದರೆ ಇದರ ಹಿಂದೆ ವಾಲ್ಮೀಕಿನಾಯಕ ಸಮುದಾಯಕ್ಕೆ ಸೇರಿದ ಪಾಳೆಯಗಾರರು ಇಲ್ಲಿ ಆಡಳಿತ ನಡೆಸಿರುವುದರಿಂದ ಈ ಸಮುದಾಯದವರು ದಲಿತ ವಿರೋಧಿ ಭಾವನೆ ಇರುವುದರಿಂದ ಶಾಸಕ ಜಿ.ಕರುಣಾಕರ ರೆಡ್ಡಿ ಯವರಲ್ಲಿ ಇರುವುದರಿಂದಲೇ ಉದ್ದೇಶ ಪೂರ್ವಕವಾಗಿ.

ಹರಪನಹಳ್ಳಿ ನಾಯಕ ಮಹಾರಾಜರುಗಳನ್ನು ಅವಮಾನ ಮಾಡಲೇಂದು ಹೀಗೆ ಬರೆಯಿಸಿದ್ದಾರೆ.

ಹರಪನಹಳ್ಳಿಯಲ್ಲಿ 10 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಜಿ.ಕರುಣಾಕರ ರೆಡ್ಡಿಯವರು ನಾಯಕ ಸಮುದಾಯಕ್ಕೆ ಯಾವ ಕೊಡುಗೆಯನ್ನೂ ನೀಡದೇ, ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಈ ಸಮುದಾಯವನ್ನು ಬಳಸಿಕೊಂಡು ನಾಯಕ ಸಮುದಾಯ ಮತ್ತು ಅವರ ಪರಂಪರೆ, ಹರಪನಹಳ್ಳಿಯಲ್ಲಿ ನಾಯಕ ಮಹಾರಾಜರ ಇತಿಹಾಸದ ಮೇಲೆ ನಿರ್ಲಕ್ಷ ಧೋರಣೆ ತೋರಿದ್ದಾರೆ.

ಹರಪನಹಳ್ಳಿಯಲ್ಲಿ ಆಳಿದ ಸುಮಾರು 15 ಕ್ಕೂ ಹೆಚ್ಚು ಮಹರಾಜರುಗಳು ಆಳಿ ಹೋಗಿದ್ದಾರೆ. ದಾದಣ್ಣ ನಾಯಕ, ರಂಗಣ್ಣ ನಾಯಕ, ಬಸವಂತಪ್ಪ ನಾಯಕ, ಸೋಮಶೇಖರನಾಯಕ, ರಾಣಿ ಸೋಮಮ್ಮಾಜಿ, ರಾಣಿ ಹೊನ್ನನಾಗತಿ ಸೇರಿದಂತೆ ಮುಂತಾದವರಾಗಿದ್ದಾರೆ.

ಈ ನೆಲದ ಮೇಲೆ ಅಥವಾ ನಾಯಕ ಜನಾಂಗದ ಮೇಲೆ ಇವರಿಗೆ ಕಾಳಜಿ ಇದ್ದಿದ್ದರೆ ಇವರ ಹೆಸರುಗಳನ್ನು ಸರ್ಕಾರಿ ಬಸ್ ನಿಲ್ದಾಣಕ್ಕೆ, ಪುರಸಭೆ ಸಭಾ ಭವನಕ್ಕೆ, ರೈಲ್ವೆ ನಿಲ್ದಾಣಕ್ಕೆ, ಕ್ರೀಡಾಂಗಣಕ್ಕೆ, ಪಟ್ಟಣದ ಮುಖ್ಯ ವೃತ್ತಗಳಿಗೆ, ಈ ಊರನ್ನು ಆಳಿದ ಅರಸರ ಹೆಸರುಗಳನ್ನು ನಾಮಕರಣ ಮಾಡಿದ್ದರೆ. ಅವರ ನೆನಪು ಮತ್ತು ಇತಿಹಾಸವನ್ನು ಗೌರವಿಸಿದಂತಾಗುತ್ತಿತ್ತು.
ಆದರೆ ನಾಯಕ ಜನಾಂಗದವರ ಮೇಲಿನ ಕೀಳಿರಿಮೆ ಭಾವನೆಯಿಂದಲೇ ಉದ್ದೇಶಪೂರ್ವಕವಾಗಿ ಈ ಮಹಾರಾಜರ ಹೆಸರುಗಳನ್ನು ನಿರ್ಲಕ್ಷಿಸಲಾಗಿದೆ.

ಇವರ ಹೆಸರುಗಳನ್ನು ಹರಪನಹಳ್ಳಿಯಲ್ಲಿ ಮೇಲ್ಕಾಣಿಸಿದ ಸ್ಥಳಗಳಲ್ಲಿ ನಾಮಕರಣ ಮಾಡದೇ ಜಮ್ಮು ಕಾಶ್ಮೀರ, ಕಲ್ಕತ್ತಾ, ಗಾಂಧಿನಗರ, ದೆಹಲಿ, ಭೂಪಾಲ್, ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ, ನಗರಗಳಲ್ಲಿ ನಾಮಕರಣ ಮಾಡಲು ಸಾಧ್ಯವೇ. ಇದನ್ನು ಶಾಸಕರು ಮರೆತಂತಿದೆ.

ಕನಿಷ್ಠ ಪಕ್ಷ ಪಟ್ಟಣದಲ್ಲಿ ಒಂದು ಪುರಾತನ ವಸ್ತುಸಂಗ್ರಾಹಲಯವನ್ನು ತೆರೆದು ಹರಪನಹಳ್ಳಿ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಳಿದುಳಿದ ಸ್ಮಾರಕಗಳು, ಶಾಸನಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ಸ್ಥಳೀಯ ಇತಿಹಾಸ ಸಾರುವ ಮುಂತಾದ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ನಿರ್ಲಕ್ಷವಹಿಸಿರುವುದು ಈ ಜನಾಂಗದ ದ್ವೇಷದಿಂದಲ್ಲದೇ ಮತ್ತಿನ್ನೇನೂ ಅಲ್ಲ.

ತಾಲ್ಲೂಕಿನಲ್ಲಿ ವಾಲ್ಮೀಕಿನಾಯಕ ಸಮುದಾಯವು ದೊಡ್ಡ ಸಮುದಾಯವಾಗಿದೆ.

ಈ ಜನಾಂಗಕ್ಕೆ ಶಾಸಕ ಜಿ.ಕರುಣಾಕರ ರೆಡ್ಡಿಯವರು ಕಣ್ಣಿರು ಒರೆಸುವ ತಂತ್ರವನ್ನು ಮಾಡಿ, ಅಷ್ಟು ಇಷ್ಟು ಪುಡಿಗಾಸು ಅನುದಾನವನ್ನು ತಂದು ಈಗ ಅಧಿಕಾರದ ಕೊನೆಯಲ್ಲಿ ಸಮುದಾಯ ಭವನಕ್ಕೆ ಅನುದಾನ ತಂದಿದ್ದೇನೆ ಎಂದು ಹೇಳುತ್ತಿರುವುದು ಬಕಾಸುರನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಹೊಯ್ದಂತೆ ಈ ಜನಾಂಗವನ್ನು ನಿರ್ಲಕ್ಷವಹಿಸಿರುವುದಕ್ಕೆ ಪ್ರಮುಖ ಸಾಕ್ಷಿ.

ಇತ್ತೀಚಿಗೆ ಸಮುದಾಯದ ಸರ್ಕಾರಿ ಅಧಿಕಾರಿಯೊಬ್ಬರು ಸಾಮಾನ್ಯ ವರ್ಗಾವಣೆಯ ಮೂಲಕ ತಾಲ್ಲೂಕಿಗೆ ಕರ್ತವ್ಯ ನಿರ್ವಹಿಸಲು ಬಂದರೆ ಇವರು ನಾಯಕ ಸಮಾಜದವರು ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಇಲ್ಲಿ ಕರ್ತವ್ಯ ನಿರ್ವಹಿಸಲು ಬಿಡದೇ ವಾಪಸ್ಸು ಕಳುಹಿಸಿರುವುದು ಅವರು ಈ ಜನಾಂಗದವರ ಮೇಲೆ ದ್ವೇಷವನ್ನು ಎತ್ತಿ ತೋರಿಸುತ್ತದೆ.

ಮುಂದಿನ ದಿನಮಾನಗಳಲ್ಲಿ ವಾಲ್ಮೀಕಿ ನಾಯಕ ಸಮಾಜದ ವಿರೋಧಿ, ಶಾಸಕ ಜಿ.ಕರುಣಾಕರ ರೆಡ್ಡಿಯವರಿಗೆ ತಕ್ಕ ಪಾಠವನ್ನು ಮುಂಬರುವ ಚುನಾವಣೆಯಲ್ಲಿ ಸಮಾಜ ಕಲಿಸಲಿದೆ ಎಂಬುವುದನ್ನು ಅವರು ಮರೆಯಬಾರದು ಎಂಬುವುದನ್ನು ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend