ವಾಲ್ಮೀಕಿ ನಗರದಲ್ಲಿ ಅ.7ರಂದು ಶುಕ್ರವಾರ ರಾತ್ರಿ 11ಕ್ಕೆ ಮುಳ್ಳುಗದ್ದುಗೆ ಉತ್ಸವ…!!!

Listen to this article

ವಾಲ್ಮೀಕಿ ನಗರದಲ್ಲಿ ಅ.7ರಂದು ಶುಕ್ರವಾರ ರಾತ್ರಿ 11ಕ್ಕೆ ಮುಳ್ಳುಗದ್ದುಗೆ ಉತ್ಸವ…..

ಹರಪನಹಳ್ಳಿ.ಅ.3. ಪಟ್ಟಣದ ವಾಲ್ಮೀಕಿ ನಗರದಲ್ಲಿ ಅ.7ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ಶ್ರೀ ಹಾಲಸ್ವಾಮಿಗಳ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಹಾಲಸ್ವಾಮಿ ಮಠದ ಶ್ರೀ ವೀರಯ್ಯ ಹಾಲಸ್ವಾಮಿಗಳು ತಿಳಿಸಿದರು.

ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಆವರಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದ ಪದ್ಧತಿಯಂತೆ ಪಟ್ಟಣದ ವಾಲ್ಮೀಕಿ ನಗರದಲ್ಲಿ ಶ್ರೀ ವೀರಯ್ಯ ಹಾಲಸ್ವಾಮಿಗಳರವರ ಸಮ್ಮುಖದಲ್ಲಿ ಅ.7ರಂದು ಶುಕ್ರವಾರ ರಾತ್ರಿ 11ಕ್ಕೆ ಮುಳ್ಳುಗದ್ದುಗೆ ಉತ್ಸವ ಜರುಗಲಿದೆ.

ಅ.8ರ ಶನಿವಾರ ಸಂಜೆ 4ಕ್ಕೆ ರಥೋತ್ಸವ ನಡೆಯಲಿದೆ ಹಾಗೂ ಅ.9ರ ಸಂಜೆ 5ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು.
ಆಗಸ್ಟ್ 9ರ ಭಾನುವಾರದಂದು ಮದ್ಯಾಹ್ನ 1ಗಂಟೆಯಿಂದ ದಾವಣಗೆರೆ, ಗುಲ್ಬರ್ಗ, ರಾಣೆಬೆನ್ನೂರು, ಬೆಳಗಾಂ, ವಿಜಾಪುರ, ಸೇರಿದಂತೆ ಪ್ರಸಿದ್ದ ಪೈಲ್ವಾನ್‍ರಿಂದ ಬಾರಿ ಬಯಲು ಜಂಗಿ ಕುಸ್ತಿಗಳು ಅಗಸ್ಟ್ .10ರ ರವರೆಗೆ ಎರಡು ದಿನಗಳ ಕಾಲ ನಡೆಯಲಿದ್ದು ಈ ಕುಸ್ತಿಪಂದ್ಯಾವಳಿಗಳು ವಾಲ್ಮೀಕಿ ನಗರದ 8ನೇ ವಾರ್ಡ, ಆಂಜನೇಯ ದೇವಸ್ಥಾನದ ಬಳಿ ಜರುಗಲಿವೆ ಎಂದು ಮಾಹಿತಿ ನೀಡಿದರು.
ನಾಲ್ಕು ದಿನಗಳ ಕಾಲ ನಡೆಯುವ ಹಾಲಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮೂರು ಕೇರಿಯ ಸಮಸ್ತ ದೈವಸ್ಥರು ಹಾಗೂ ಕುಸ್ತಿ ಸಮಿತಿಯವರು ಈ ಕಾರ್ಯಕ್ರಮ ನಡೆಸಿಕೊಡುವರು.

ಆದ್ದರಿಂದ ತಾಲೂಕಿನ ಸಮಸ್ತ ಹಾಲಸ್ವಾಮಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಿ.ರೊಕ್ಕಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಮುಖಂಡರಾದಕೆಂಗಳ್ಳಿಪ್ರಕಾಶ್ಆರ್.ಲೋಕೇಶ್, ಮ್ಯಾಕಿ ಸಣ್ಣ ಹಾಲಪ್ಪ, ಚಿಕ್ಕೇರಿ ಯಂಕಪ್ಪ, ಕಮ್ಮಾರ ಹಾಲಪ್ಪ, ನಿಟ್ಟೂರು ದೊಡ್ಡ ಹಾಲಪ್ಪ, ಮಂಡಕ್ಕಿ ಸುರೇಶ್, ಆರ್.ದುರುಗಪ್ಪ, ಕೆ.ಅಂಜಿನಪ್ಪ, ಧ್ಯಾಮಜ್ಜಿ ಹನುಮಂತಪ್ಪ, ಗಿಡ್ಡಿಹಳ್ಳಿ ನಾಗರಾಜ, ಪಿ.ಹಾಲಸಿದ್ದಪ್ಪ, ಕೆ.ಮಹಾಬಲೇಶ್, ವೈ.ಆಂಜಿನಪ್ಪ, ಪಟ್ನಾಮದ ನಾಗರಾಜ್, ಆರ್.ಸಿಂಗರಾಯಪ್ಪ,
ಕಳ್ಳಿ ದುರುಗಪ್ಪ, ಹೆಚ್.ಕೆ.ಬಸವಾಜಪ್ಪ, ಆರ್.ತಿಮ್ಮಣ್ಣ, ಧ್ಯಾಮಜ್ಜಿ ದುರುಗಪ್ಪ, ಟಿ.ದುರುಗಪ್ಪ ಹನುಮಂತಪ್ಪ, ಟಾಕ್ಟರ್ ದುರುಗಪ್ಪ, ಗಿಡ್ಡಹಳ್ಳಿ ಹಾಲೇಶ್, ಪರಸಪ್ಪ, ಕಂಭಟ್ರಹಳ್ಳಿ.ಉಚ್ಚೆಂಗೆಪ್ಪ, ಸೇರಿದಂತೆ ಇತರರು ಇದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend