ತಾಲ್ಲೂಕಿನ ಮೈದೂರು ಗ್ರಾಮದ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ವತಿಯಿಂದ ಸುಮಂತ್ ರಾಯಸಂ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು…!!!

Listen to this article

ತಾಲ್ಲೂಕಿನ ಮೈದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡ ಶಾಲೆಯ ವತಿಯಿಂದ ಸುಮಂತ್ ರಾಯಸಂ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಹರಪನಹಳ್ಳಿ: ತಾಲ್ಲೂಕಿನ ಮೈದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು,

ಬಡತನದ ನೆಪವೊಡ್ಡಿ ಶಿಕ್ಷಣದಿಂದ ವಂಚಿತರಾಗಬೇಡಿ ಬಡತನವನ್ನು ಮೆಟ್ಟಿನಿಲ್ಲುವ ಶಕ್ತಿ ಶಿಕ್ಷಣದಿಂದ ಮಾತ್ರ ಸಾದ್ಯ. ಹಾಗೂ ಹಿಂದೆ ಗುರು ಮುಂದೆ ಗುರಿ ಇದ್ದರೆ ಮಾತ್ರ ನಾವು ಕಂಡ ಕನಸು ನನಸಾಗಲು ಸಾದ್ಯ ಎಂದು ಸುಮಂತ್ ರಾಯಸಂ ಹೆಳಿದರು.

ಬಡತನ ಎಂಬ ಸಾಮಾಜಿಕ ಶಾಪ ನಮ್ಮ ಬದುಕನ್ನು ಇನ್ನೂ ಸುತ್ತಿಕೊಂಡಿದೆ. ಆದರೆ ಅಂತಹ ಶಾಪದಿಂದ ನಾವು ಹೊರಬರಬೇಕಾದರೆ ಮೊದಲು ಸುಶಿಕ್ಷಿತರಾಗಬೇಕು . ಜತಗೆ ದುಡಿಯುವ ಕೈಗಳಿಗೆ ಉದ್ಯೊಗದ ಅವಕಾಶಗಳನ್ನು ಕಲ್ಪಸುವ ಕೈಗಾರಿಕೆಗಳನ್ನು ನಮ್ಮ ತಾಲ್ಲೂಕಿನಲ್ಲಿ ಬೇರೂರಬೇಕು ಆಗ,ಆ ಸಾಮಾಜಿಕ ಶಾಪದಿಂದ ನಾವು ಮುಕ್ತರಾಗಲು ಸಾದ್ಯ ಎಂದು ಹೆಳಿದರು.

ನಮ್ಮನ್ನು ಯಾರೋ ಬಂದು ಉದ್ದರಿಸುತ್ತಾರೆ,ನಮ್ಮ ಬದುಕನ್ನು ಸಂಪೂರ್ಣವಾಗಿ ಬದಲವಣೆ ಮಾಡುತ್ತಾರೆಂದು ಕಾದು ಕುಳಿತರೆ ಅದು ನಮ್ಮ ಬ್ರಮೆ ಅಷ್ಟೆ.ಹಿಗಾಗಿ,ಶಾಪಗ್ರಸ್ಥ ಬದುಕಿಗೆ ವಿದಾಯ ಹೆಳುವ ನಾಯಕನನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಿದೆ.ಇಂತಹ ಅನೇಕ ಕನಸುಗಳು ನನ್ನಲ್ಲಿ ಮೇಳೈಸಿವೆ ನಾನು ಹರಪನಹಳ್ಳಿಯ ಒಂದು ಬಡಕುಟುಂಬದಲ್ಲಿ ಜನಸಿ ನಾನು ವಿದ್ಯಾಬ್ಯಾಸವನ್ನು ಕಸ್ಟಪರಸ್ಥಿತಿಯಲ್ಲಿ ಎದೆಗುಂದದೆ ,ಸೈಕಲ್ ಶಾಪ್ ಗಳ್ಳಿ ,ಗ್ಯಾರೇಜುಗಳಲ್ಲಿ ಕೆಲಸ ಮಾಡಿಕೊಂಡು ವಿದ್ಯಬ್ಯಾಸವನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ಕೆಲಸಕ್ಕಾಗಿ ಹೊದಾಗ ಗೊತ್ತಾಯಿತು 50 ರಿಂದ 100 ಪ್ರತೀಸ್ಟಿತ ಕಂಪನಿಗಳಲ್ಲಿ ತಿರುಗಾಡಿದರು ಕೆಲಸ ಸಿಗಲಿಲ್ಲ ಕಾರಣ ಬಾಷೇಗಳ ಕೊರತೆಯಿಂದ ಕೆವಲ ಕನ್ನಡ ಬಾಷೆ ಇದ್ದರೆ ಸಾಕು ಅಂದುಕೊಂಡಿದ್ದು ನನ್ನ ತಪ್ಪು ಹಾಗಾಗಿ ನನಗೆ ಕೆಲಸ ಸಿಗಲಿಲ್ಲ ಹಾಗಂತ ನಾನು ದೃತಿಗೇಡದೆ ,ನಾನೆ ಸ್ವತಹಃ ಬೆಂಗೂರಿನಲ್ಲಿ ಮಹಾನಗರದಲ್ಲಿ ಪ್ರತಿಸ್ಠಿತ ಕಂಪನಿ ಸ್ಥಾಪಿಸುವ ಮೂಲಕ ನೂರಾರು ಯುವಕರಿಗೆ ಉದ್ಯೋಗವನ್ನು ನೀಡಿದ್ದೇನೆ.

ಯುವ ಜನಾಂಗದ ಶಕ್ತಿ ಪೋಲಾಗಬಾರದು,ಯುವಕರುಗಳು ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು,ಕನ್ನಡದ ಜೊತೆಗೆ ಇಂಗ್ಲೀಷ್ ,ಇನ್ನಿತರ ಬಾಷೆಗಳ ಮೇಲೆ ಪ್ರೌಡಿರಿಮೆ ಬೆಳಿಸಿಕೊಂಡಾಗ ಮಾತ್ರ ನಾವು ಸಹಜವಾಗಿಯೇ ಬಡತನವನ್ನು ಮೆಟ್ಟಿನಿಲ್ಲುವ ತಾಕತ್ತನ್ನು ಹೊಂದುತ್ತೇವೆ,ಎಂದು ಬೀಚಿ ವಂಶದ ಸುಮಂತ್ ರಾಯಸಂ ಅವರು ಯುವ ಜನಾಂಗಕ್ಕೆ ಕಿವಿಮಾತು ಹೆಳಿದರು.

“ಮನುಷ್ಯನ ನಿಜವಾದ ಶಕ್ತಿ ಸ್ಫೂರ್ತಿ ಎಂದರೆ ಅದು ಅವನ ನಂಬಿಕೆ ಮತ್ತು ಆತ್ಮವಿಶ್ವಾಸ”.
ಇವೆರಡು ಇದ್ದರೆ ಎಂತ ಕಠಿಣ ಸಮಸ್ಯೆಯನ್ನು ಕೂಡ ಧೈರ್ಯದಿಂದ ಎದುರಿಸಬಹುದು.

ಇದೆ ಸಂದರ್ಬದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷರಾದ ಜಗದೀಶ್,ಅದ್ಯಕ್ಷತೆ ವಹಿಸಿಕೊಂಡ್ಡಿದ್ದರು. ಮುಖಂಡರಾದ ಪಾಲಕ್ಷಪ್ಪ,ಕರವೇ ಕೊಟ್ರೇಶ್ ,ನಿಂಗಪ್ಪ,ಎ,ಕೆ, ದೇವಾರಾಜ್ ,ಪರಶುರಾಮ್ , ವೀರಣ್ಣ,ಸಿದ್ದೇಶ್ ,ಮೂರ್ತಿ, ಮಹೇಂದ್ರ,ನಿಂಗನಗೌಡ ,ಅಣ್ಣಿ ಸೊಲ್ಲಪ್ಪ,ಶಾಲೆಯ ಶಿಕ್ಷಕಾರಾದ ಮಲ್ಲಿಕಾರ್ಜುನಯ್ಯ, ಮಂಜುನಾಥ್, ಶಂಬುಲಿಂಗಪ್ಪ,ಜಗದೀಶ್ , ಮಹೇಶ್ ,ಚನ್ನವೀರಯ್ಯ,ಡಿ.ಸನಿತಾ,ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend