ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ವಿಶೇಷ ಕಾರ್ಯಾಗಾರ…!!!

Listen to this article

ವರದಿ. ಮುಕ್ಕಣ್ಣ ಹುಲಿಗುಡ್ಡ

ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ವಿಶೇಷ ಕಾರ್ಯಾಗಾರ

ಉಚಿತವಾಗಿ ಸಿಗುವ ಆ್ಯಪ್ ಬಳಸುವದರಿಂದ ಹ್ಯಾಕಿಂಗ್ ಸಾಧ್ಯತೆ ಹೆಚ್ಚು:
ವಿವೇಕ ಹೊನಗುಂಟಿಕರ್

ಯಾದಗಿರಿ.- ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಆ್ಯಪ್ ಮತ್ತು ಸಾಫ್ಟ್ ವೇರ್‌ಗಳ ಬಳಕೆಯಿಂದ ಅನುಮತಿಯಿಲ್ಲದೇ ಮಾಹಿತಿ ಕದಿಯುವ (ಹ್ಯಾಕಿಂಗ್) ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ವಿವೇಕ ಹೊನಗುಂಟಿಕರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ, ಆಡಳಿತ ಸಂಸ್ಥೆ ಮೈಸೂರು, ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ತರಬೇತಿ ಸಂಸ್ಥೆ, ಯಾದಗಿರಿ ಇವರ ಸಹಯೋಗದೊಂದಿಗೆ ಎನ್‌ಇಜಿಡಿ ಸಾಮರ್ಥ್ಯಾಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಹ್ಯಾಕಿಂಗ್ ಮತ್ತು ಹ್ಯಾಕರ್ಸ್ ಕಾನೂನು ಬಾಹಿರವಾಗಿ ತೀರಾ ಖಾಸಗಿ ವಿಷಯಗಳನ್ನು ಸಹ ಕದಿಯುತ್ತಿದ್ದು, ಇದನ್ನು ತಡೆಯಲು ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಅಂತರ್ಜಾಲವನ್ನು ಬಳಸಿ ಇನ್‌ಸ್ಟಾಲ್ ಮಾಡಿಕೊಳ್ಳುವ ಆ್ಯಪ್ ಮತ್ತು ಸಾಫ್ಟ್ ವೇರ್ ಗಳಿಂದ ವೈರಸ್ ಸಹ ಇನ್‌ಸ್ಟಾಲ್ ಆಗುತ್ತದೆ. ಹೀಗಾಗಿ ಹ್ಯಾಕಿಂಗ್ ಮಾಡಲು ಹ್ಯಾಕರ್ಸ್ ಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.

ಜಗತ್ತಿನಲ್ಲಿ ಅಂತರ್ಜಾಲವನ್ನು ಕೇವಲ 4% ರಷ್ಟು ಮಾತ್ರ ಸಕ್ರಮ ಕಾರ್ಯಗಳಿಗೆ ಬಳಸುತ್ತಿದ್ದು ಇನ್ನುಳಿದ 96% ರಷ್ಟು ಅಕ್ರಮವಾಗಿ ಬಳಸುತ್ತಿದ್ದಾರೆ ಮತ್ತು ಹ್ಯಾಕಿಂಗ್ ತಡೆಗಟ್ಟಲು ಒಟಿಪಿ ಕ್ರಮವನ್ನು ಬಳಸುತ್ತಿರುವುದು ನಮ್ಮ ದೇಶ ಮಾತ್ರ ಎಂದರು.

ಸಾಮಾಜಿಕ ಜಾಲತಾಣಗಳ ಮೂಲಕ ನೋಟಿಫಿಕೇಷನ್ ಗಳನ್ನು ಕಳುಹಿಸಿ ನಮ್ಮ ಗಮನ ಸೆಳೆಯಲು ಆಮಿಷಯೊಡ್ಡಿ ಹಣ ಸೇರಿದಂತೆ ನಮ್ಮ ಮಾಹಿತಿಗಳನ್ನು ಕದಿಯುತ್ತಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.

ಕಾರ್ಯಗಾರವನ್ನು ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಉದ್ಘಾಟಿಸಿದರು. ಯಾದಗಿರಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಂಬೋಜಿ ನಾಯ್ಕೊಡಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ್ ನಾಯಕ್, ಡಿಸ್ಟಿçಕ್ಟ್ ಇನ್ಫಾರಮಿಟಿಕ್ ಅಧಿಕಾರಿ ಶ್ರೀನಿವಾಸರಾವ ಕುಲಕರ್ಣಿ, ಕಲಬುರಗಿ ವಿಭಾಗಿ ಇ-ಆಡಳಿತ ಸಂಸ್ಥೆಯ ಹಿರಿಯ ಭೊದಕರು ಕವಿತಾ ಎಮ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಮನವಿ

ಯಾದಗಿರಿ.- ಶಹಾಪುರ ನಗರಸಭೆ ವ್ಯಾಪ್ತಿಯ 2021-22ರ ಟ್ರೇಡ್ ಲೈಸನ್ಸ್ ಫೀ ದರಗಳ ಪಟ್ಟಿಯನ್ನು ನಗರಸಭೆ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು ವ್ಯಾಪರಸ್ಥರಿಂದ ಯಾವುದೇ ತಕರಾರು/ಆಕ್ಷೇಪಣೆಗಳಿದ್ದಲ್ಲಿ ವಾರದೊಳಗೆ ನಗರಸಭೆ ಕಾರ್ಯಾಲಯಕ್ಕೆ ಲಿಖಿತವಾಗಿ ಸಲ್ಲಿಸಬಹುದಾಗಿದೆ. ನಂತರ ಬರುವ ತಕರಾರು/ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲವೆಂದು ಶಹಾಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಚ್ 3 ರಂದು ಕೆಡಿಪಿ ಸಭೆ
ಯಾದಗಿರಿ.:- ಇದೇ ಮಾಚ್ 3ರಂದು ಪಶು ಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದ್ದು ಸಭೆಯಲ್ಲಿ 2021ರ ಜನವರಿ ತಿಂಗಳ ಅಂತ್ಯದವರೆಗೆ ಇಲಾಖೆವಾರು ಸಾಧಿಸಿರುವ ಪ್ರಗತಿ ಸೇರಿದಂತೆ ಇನ್ನುಳಿದ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಅಧಿಕಾರಿಗಳು ಸಭೆಗೆ ಹಾಜರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ.26 ರಂದು ಸಾರಿಗೆ ಅದಾಲತ್
ಯಾದಗಿರಿ.:- ಇದೇ ಫೆ.26 ರಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮಧ್ಯಾಹ್ನ 3 ಗಂಟೆಯಿAದ 5 ರವರೆಗೆ ಸಾರಿಗೆ ಅದಾಲತ್ ಆಯೋಜಿಸಲಾಗಿದೆ.
ಸಾರ್ವಜನಿಕರು ತಮ್ಮ ವಾಹನದ ಹಾಗೂ ಚಾಲನಾ ಪತ್ರದ ಕುರಿತು ಯಾವುದೇ ಕುಂದು-ಕೊರತೆಗಳಿದ್ದಲ್ಲಿ ಹಾಜರಾಗಿ ಬಗೆಹರಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend