ಅಂತರಾಷ್ಟ್ರೀಯ ಮಹಿಳಾ ದಿನದ ಆಚರಣೆ…!!!

Listen to this article

ಅಂತರಾಷ್ಟ್ರೀಯ ಮಹಿಳಾ ದಿನದ ಆಚರಣೆ.

ಸಿರುಗುಪ್ಪ, : ತಾಲೂಕು ಕಾನೂನು ಸೇವೆಗಳ ಸಮಿತಿ ತಾಲೂಕು ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಿಡಿಪಿಓ ಕಚೇರಿ ಸಭಾಂಗಣದಲ್ಲಿ ಗುರುವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜನೆಗೊಂಡಿತ್ತು.

ಕಾರ್ಯಕ್ರಮವನ್ನು ಹಾಜಿ ಹುಸೇನ್ ಸಾಬ್ ಯಾದವಾಡ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ಸಿರುಗುಪ್ಪ ಹಾಗೂ ವೇದಿಕೆಯ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನ್ಯಾಯಾಧೀಶರು ತಮ್ಮ ಉದ್ಘಾಟನಾ ನುಡಿಗಳನ್ನು ಮಾತನಾಡಿ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇರಲಿಲ್ಲ ಅಲ್ಲದೆ ಸತಿ ಸಹಗಮನ ಪದ್ಧತಿ ಅಂತಹ ಅನೇಕ ಕೆಟ್ಟ ಪದ್ಧತಿಗಳು ಇದ್ದವು. ಮಹಿಳೆಯರ ಮೇಲೆ ಶೋಷಣೆ ಆಗುತ್ತಿತ್ತು. ಮಹಿಳೆಯರು ತುಳಿತಕ್ಕೆ ಒಳಗಾಗಿದ್ದರು. ವಿಶ್ವದ ಎಲ್ಲ ದೇಶಗಳು ಚರ್ಚಿಸಿ ಮಹಿಳೆಯರಿಗೆ ಸ್ವಾವಲಂಬನೆ ಬದುಕು ರೂಪಿಸಲು ಸಬಲೀಕರಣಗೊಳಿಸಲು ವಿಶೇಷ ಕಾಯ್ದೆಗಳನ್ನು ರಚಿಸಲಾಯಿತು. ಈ ಮೂಲಕ ಅವರಿಗೆ ಅನೇಕ ಹಕ್ಕುಗಳನ್ನು ಕಲ್ಪಿಸಲಾಗಿದೆ. ಇದೀಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನ ಹೊಂದುತ್ತಿದ್ದಾರೆ. ಈ ಸಭಾಂಗಣದಲ್ಲಿ ನಡೆದಿರುವ ಎಲ್ಲ ಮಹಿಳೆಯರೆಲ್ಲರೂ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಅಂಗನವಾಡಿ ಮಹಿಳೆಯರು ಮಕ್ಕಳನ್ನು ಉತ್ತಮವಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ವರದಕ್ಷಿಣೆ ಬಾಲ್ಯ ವಿವಾಹ, ಕೌಟುಂಬಿಕ ದೌರ್ಜನ್ಯಗಳಿಗೆ ವಿಶೇಷ ಕಾನೂನುಗಳು ರಚನೆಯಾಗಿವೆ ನ್ಯಾಯಾಲಯಗಳಲ್ಲಿ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದು ತಮ್ಮ ನುಡಿಗಳಲ್ಲಿ ತಿಳಿಸಿದರು.

ಶಿಶು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಅಧ್ಯಕ್ಷತೆ ನುಡಿಗಳನ್ನು ಆಡಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಶಾರದಾ, ಸಂಪನ್ಮೂಲ ವ್ಯಕ್ತಿಗಳಾದ ಎನ್ ಅಬ್ದುಲ್ ಸಾಬ್ ಪ್ಯಾನಲ್ ವಕೀಲರು, ತಾಲೂಕು ಆರೋಗ್ಯ ಅಧಿಕಾರಿ ಡಾ ಈರಣ್ಣ ಇವರುಗಳು ಮಾತನಾಡಿದರು….

ವರದಿ. ಉಮೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend