ವಿವಿಧ ಕಡೆ ಬಸವರಾಜ ನಾಡಗೌಡರ ಹುಟ್ಟು ಹಬ್ಬ ನಿಮಿತ್ಯ ಹಣ್ಣು ಹಾಲು ವಿತರಣೆ…!!!

Listen to this article

ವಿವಿಧ ಕಡೆ ಬಸವರಾಜ ನಾಡಗೌಡರ ಹುಟ್ಟು ಹಬ್ಬ ನಿಮಿತ್ಯ ಹಣ್ಣು ಹಾಲು ವಿತರಣೆ.

ಸಿಂಧನೂರು :ಅ.28.ಬಸವರಾಜ ನಾಡಗೌಡ ಅವರ ಅಭಿಮಾನಿ ಬಳಗದಿಂದ ಜವಳಗೇರಾ,
ನಗರದ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ಬ್ರೆಡ್ ಹಣ್ಣು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ, ಕಾರುಣ್ಯ ಆಶ್ರಮದಲ್ಲಿ ಅನಾಥ ಜೀವಿಗಳ ಹಾಗೂ ಬುದ್ದಿಮಾಧ್ಯ ಮಕ್ಕಳ ,ನಗರದ ವಾರ್ಡ್ ನಂ- 13 ಭಗೀರಥ ಕಾಲೋನಿಯ ಸರಕಾರಿ ಶಾಲೆಯಲ್ಲಿ ಹುಟ್ಟು ಹಬ್ಬ ಆಚರಣೆ, ಆಶಾಕಿರಣ ಅನಾಥ ಆಶ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಅವರ 63 ನೇ ಹುಟ್ಟು ಹಬ್ಬದ ಪ್ರಯುಕ್ತ ಆಸ್ಪತ್ರೆಯಲ್ಲಿನ ಒಳ ಮತ್ತು ಹೊರ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಲಾಯಿತು.
ನಗರ ಕಾರಣ್ಯವೃದ್ಧಾಶ್ರಮದಲ್ಲಿ ತಮ್ಮ 63ನೇ ಹುಟ್ಟುಹಬ್ಬನ್ನು ಸರಳವಾಗಿ ಆಚರಿಸಿಕೊಂಡು ನಂತರ ಮಾತನಾಡಿದ ಅವರು ಸರ್ವರೋಗಕ್ಕೆ ವ್ಯಾಯಾಮ ದಿವ್ಯಾ ಔಷಧಿಯಾಗಿದೆ.ಕ್ರೀಡೆ ಹಾಗೂ ನಿರಂತರ ವ್ಯಾಯಾಮದಿಂದ ಮನುಷ್ಯ ಸದಾ ಹಸನ್ಮುಖಿ ಜೊತೆಗೆ ಆರೋಗ್ಯ ದಿಂದ ಇರುತ್ತಾನೆ ಕ್ರೀಡೆ ಹಾಗೂ ವ್ಯಾಯಾಮ ಮಾಡುವುದರಿಂದ ನಾನು ಯಾವುದೆ ರೋಗ ರುಜೀನಗಳಿಲ್ಲದೆ ಆರೋಗ್ಯದಿಂದ ಇದ್ದೇನೆ ಎಂದು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಹೇಳಿದರು.
ತಮ್ಮ ಬಳಿ ಬರುವ ಜನರನ್ನು ಸದಾ ನಗುಮುಖ ದಿಂದ ಸ್ವಾಗತಿಸಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಬಸವರಾಜ ನಾಡಗೌಡರು 63 ವರ್ಷವಾದರೂ ಸಹ ಇನ್ನೂ ಯುವಕರು ನಾಚುವಂತೆ ಸದಾ ಲವ ಲವಕೆಯಿಂದ ಇರುವ ಮೂಲಕ ಯುವಕರಿಗೆ ಮಾದರಿ ನಾಯಕರಾಗಿದ್ದಾರೆ ಅವರು ಸದಾ ಈಗೆ ನಗುಮುಖದಿಂದ ಆರೋಗ್ಯ ವಂತರಾಗಿರಲಿ ಮುಂದೆ ಅವರು ಜನ ನಾಯಕರಾಗಿ ಬೆಳೆಯಲಿ ಎಂದು ನಗರ ಸಭೆಯ ಸದಸ್ಯರಾದ ಚಂದ್ರಶೇಖರ ಮೈಲಾರ ಮತಾನಾಡಿದರು.
ಕಾರಣ್ಯಾಶ್ರಮದ ಮುಖಂಡರಾದ ಶರಣು ಪಾ ಹಿರೇಮಠ,ಯಡಿಯೂರಮಠ, ನಗರ ಸಭೆಯ ಸದಸ್ಯರಾದ ಚಂದ್ರಶೇಖರ ಮೈಲಾರ,ಅಲ್ಲಮಪ್ರಭು ಪೂಜಾರ,ಲಿಂಗರಾಜ ಹೂಗಾರ ಸೇರಿದಂತೆ ಇತರರು ಬಸವರಾಜ ನಾಡಗೌಡರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿ ಶುಭಾ ಹಾರೈಸಿದರು. ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವ ಹರಟೆನೂರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ದಾಸರಿ ಸತ್ಯ ನಾರಾಯಣ ಮುಖಂಡರಾದ ವೆಂಕಟೇಶ ನಂಜಲದಿನ್ನಿ, ಗದ್ದೆಪ್ಪ,ಮಮ್ಮದ್ ಅಲಿ, ಅಜಯ ದಾಸರಿ, ಶಂಕರಗೌಡ ಎಲೆಕೂಡ್ಲಿಗಿ, ಹನುಮನಗೌಡ, ಎಂ.ಚಂದ್ರಶೇಖರ, ನದಿಮುಲ್ಲಾ, ಸುಮೀತ ತಡಕಲ್, ಅಣ್ಣರಾವ, ಹುಸೇನಬಾಪಾ, ಸುಬ್ಬರಾವ್‌, ಅಸೀಪ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend