ಶರಣರ ಮರಣವೇ ಮಹಾನವಮಿ, “ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ”!

Listen to this article

ಶರಣರ ಮರಣವೇ ಮಹಾನವಮಿ,
“ಮಹಿಷಾಸುರ ರಾಕ್ಷಸನಲ್ಲ ! ರಕ್ಷಕ”!

ಸಿಂಧನೂರು :ಅ.7.ಪ್ರಗತಿಪರ ಸಂಘಟನೆ ಹಾಗೂ ಬಿ.ಎಸ್.ಪಿ.ತಾಲೂಕು ಘಟಕಗಳ ಮುಖಂಡರ ತಂಡ ತಾಲೂಕಿನ ಸಿದ್ದಪರ್ವತ ಸೋಮಲಾಪುರದ ಅಂಭಾಮಠದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಬಿ.ಎಸ್.ಪಿ.ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪೂರ ಮಾತನಾಡಿ ಮಹಿಷಾಸುರ ಒಬ್ಬ ಮಹಾರಾಜ ದೇಶದಲ್ಲಿರುವಂತಹ ಮನುವಾದಿಗಳ ಕುತಂತ್ರದಿಂದ ಮಹಾರಾಜನನ್ನು ಒಬ್ಬ ರಾಕ್ಷಸ ಎಂದು ಬಿಂಬಿಸಿ ಈ ದೇಶದ ಬಹುಜನರಿಗೆ ಅವಮಾನ ಮಾಡಿ ಇತಿಹಾಸವನ್ನು ತಿರುಚಿದ್ದಾರೆ. ಬಹುಜನರಾದ ನಾವೂ ಇದನ್ನು ಸಹಿಸುವುದಿಲ್ಲ. ಮತ್ತು ಕಳಿಂಗ ಯುದ್ಧದ ಮೇಲೆ ನಡೆದ ಸಾವು ನೋವುಗಳನ್ನು ಕಂಡು ಅಶೋಕಚಕ್ರವರ್ತಿ ಶಸಾಸ್ತ್ರಗಳನ್ನು,ಮುಟ್ಟುವುದಿಲ್ಲ ಯುದ್ಧವನ್ನು ಮಾಡುವುದಿಲ್ಲ ಎಂದು ಶಪಥಗೈದನು. ಆ ಒಂದು ವಿಜಯದಶಮಿ ದಿನ ಕೂಡ ಅದು ಅಂದು ಬೌದ್ಧ ಧರ್ಮವನ್ನು ಸ್ವೀಕರಿಸಿ ದೇಶಕ್ಕೆಲ್ಲ ಶಾಂತಿಯ ಪ್ರೀತಿ ಯನ್ನ ಬೋಧನೆ ಮಾಡಿದಂತಹ ದೇವಮಾನವ ಕೂಡ,ಆ ದಿನವನ್ನು ಬಹುಜನರಿಗೆ ತಿಳಿಸಲು ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದೇವೆ ಎಂದು ಪ್ರಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಯೋಜಕರಾದ, ಎಂ. ಗಂಗಾಧರ ಮಾತನಾಡಿ, ಮಹಿಷ ಎಮ್ಮೆಗಳ ರಾಜ. ಮೈಸೂರು ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿಯಿದ್ದಿದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡಲು ಬಯಲು ಹುಡುಕುತ್ತಿದ್ದರು. ಅದು ಸಾಲದಾದಾಗ ಅರಣ್ಯವನ್ನು ಕಡಿದು, ಬೆಂಕಿ ಹಾಕಿ ನಾಶ ಮಾಡಿ ಬಯಲಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಿದ ಮಹಿಷ ತನ್ನ ನಾಡನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ತಮ್ಮ ತಂತ್ರಗಾರಿಕೆಗೆ ವಿರೋಧ ತೋರಿದ ಮಹಿಷ ನನ್ನು ಆರ್ಯರು ರಾಕ್ಷಸನಂತೆ ಚಿತ್ರಿಸಿದರು.
ಅತಿ ಸಾಮಾನ್ಯ ನಾಯಕಿಯಾಗಿದ್ದ ಚಾಮುಂಡಿ ಯನ್ನು ಮಹಿಷನ ವಿರುದ್ಧ ಆರ್ಯರು ಎತ್ತಿ ಕಟ್ಟಿ ದರು.ಅವಳಿಗೆ ಬೆಂಬಲಿಸಿ ಮಹಿಷನನ್ನು ಕುತಂತ್ರ ದಿಂದ ಕೊಂದರು.ಆ ನಂತರವೇಚಾಮುಂಡಿ ಯನ್ನು ದೇವತೆಯೆಂದು ಈ ಬೆಟ್ಟವನ್ನು ಚಾಮುಂಡಿ ಬೆಟ್ಟ ವೆಂದು ಹೆಸರಿಟ್ಟರು. ಅಲ್ಲಿಯವರೆಗೂ ಮಹಾಬಲ ಗಿರಿಯಾಗಿದ್ದ ಬೆಟ್ಟವು ಚಾಮುಂಡಿ ಬೆಟ್ಟವಾಯಿತು. ದೊರೆಯಾಗಿದ್ದ ಮಹಿಷನು ಮಹಿಷಾಸುರನಾದನು. ನಾಡನ್ನಾಳಿದ ಮಹಿಷ ಇಲ್ಲಿ ಬಿಸಿಲಿನಲ್ಲಿ ನಿಲ್ಲುವ ಅಗತ್ಯವಿರಲಿಲ್ಲ. ಆರ್ಯರ ತಂತ್ರ, ಜಾತಿ ಪದ್ಧತಿ, ಶೋಷಣೆಗಳಿಗೆ ಯಾರು ವಿರೋಧಿಸಿದರೋ ಅವರೆಲ್ಲ ಊರ ಆಚೆಗೆ ತಳ್ಳಲ್ಪಟ್ಟರು. ಹಾಗಾಗಿಯೇ ಹೊಲೆ–ಮಾದಿಗರು ಊರಿನ ಆಚೆಯೂ ಶೋಷಣೆ ಯನ್ನು ಒಪ್ಪಿಕೊಂಡ ಮೇಲ್ಜಾತಿಯವರು ಊರಿನ ಒಳಗೂ ವಾಸ ಮಾಡಿದಂತ ಇತಿಹಾಸವೇ ಮಹಿಷಾಸೂರನ ಇತಿಹಾಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಕಾರ್ಯಾಧ್ಯಕ್ಷ ನರಸಪ್ಪ ಕಟ್ಟಿಮನಿ, ಸಿಂಧನೂರು ಗೆಳೆಯರ ಬಳಗದ ವಿಜಯಕುಮಾರ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗ್ರಾಮ ಘಟಕ AIAWU ಅಧ್ಯಕ್ಷರಾದ ವೀರೇಶ ,ರಂಗಣ್ಣ ಸೋಮ ಲಾಪುರ, ಬಿಎಸ್ಪಿಯ ಫಕೀರಪ್ಪ ಸಾಲಗುಂದಾ, ಚಂದ್ರು ಮಡಿವಾಳ ಮಲ್ಕಾಪೂರ, ತೆಲಂಗಾಣದ ಶರಣ ಸಾಧು, ಬಸವರಾಜ ಗೋಮರ್ಸಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend