ಸಚಿವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಸಂತ್ರಸ್ಥರಿಗೆ ಚೆಕ್ ವಿತರಣೆ.
ಸಿಂಧನೂರು :ಅ.14.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ.ಬಿ. ಪಾಟೀಲ ಮುನೇನಕೊಪ್ಪ ರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಬೆಳೆ ಹಾನಿಯಾದ ಹಾಗೂ ಮನೆ ಕಳೆದುಕೊಂಡ ಕುಟುಂಬಕ್ಕೆ ಸಾಂತ್ವನ ಹೇಳಿ ಅವರಿಗೆ ಪರಿಹಾರ ಚೆಕ್ ವಿತರಣೆ ಮಾಡಿದರು.
ತಾಲೂಕಿನ ಮಿನಿ ವಿಧಾನಸೌಧ ತಹಸೀಲ್ದಾರ ಕಛೇರಿಯ ಸಭಾಂಗಣದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿ,ನಂತರ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆಯಲ್ಲಿ ಪಾಲ್ಗೊಂಡ ಸಂಧರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯ ಸರಕಾರಕ್ಕೆ ಹತ್ತು ಹಲವು ಜವಾಬ್ದಾರಿಗಳಿವೆ. ಎಲ್ಲಾವುದಕ್ಕೂ ಉಸ್ತುವಾರಿ ಮಂತ್ರಿಗಳೇ ಬರಬೇಕು ಅಂತ ಏನೂ ಇಲ್ಲಾ ಮಳೆ ಬಂದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಮತ್ತು ಪರಿಹಾರ ಯಾವ ರೀತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರಿಗೂ ತಾರತಮ್ಯ ಮಾಡದೇ ವಿಳಂಬವಾಗದೆ 24ಗಂಟೆವೊಳಗೆ ಯಾವುದೇ ಪ್ರದೇಶದಲ್ಲಿ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರದ ರೂಪದಲ್ಲಿ ಮಧ್ಯವರ್ತಿಗಳ ಇಲ್ಲದೆ ನೇರವಾಗಿ ಕುಟುಂಬಸ್ಥರಿಗೆ ಚೆಕ್ಕನ್ನು ನೀಡಲಾಗಿದೆ.
ಮಳೆಯನ್ನು ಸರಕಾರ ತಂದಿಲ್ಲ ಅದು ಭಗವಂತ ಮಾಡಿದ ಸೃಷ್ಟಿ ಮಳೆ ಬಂದ ಸಂದರ್ಭದಲ್ಲಿ ಪಕ್ಷಾತೀತವಾಗಿ ನಾವುಗಳು ಒಂದಾಗಿ ಸರಕಾರದ ನಿಯಮದ ಅನುಸಾರವಾಗಿ ಪರಿಹಾರ ನೀಡುತಿದ್ದೇವೆ ಎಂದರು.
ಹೊಳೆಯ ನೀರಿನಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ಕಾನೂನು ಪ್ರಕಾರ ಪರಿಹಾರದ ಹಣವನ್ನು ಚೆಕ್ ರೂಪದಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ನಮ್ಮ ವೈಯಕ್ತಿಕ ದೈವ ಸಮ್ಮುಖದಲ್ಲಿ ಸಹಾಯ ಮಾಡುತೇವೆ. ಬೆಳೆ ಹಾನಿಯಾದ ಪ್ರದೇಶವನ್ನು ಪಾರದರ್ಶಕವಾಗಿ ಅಧಿಕಾರಿಗಳು ಬೆಳೆ ಜನ-ಜಾನುವಾರಗಳು ಪರಿಶೀಲನೆ ಮಾಡಿ ಸರ್ವೇ ಮಾಡಿ ವರದಿ ನೀಡಿದ್ದಾರೆ, ರಾಯಚೂರು ಜಿಲ್ಲೆಯಲ್ಲಿ ಪರಿಹಾರ ನೀಡುವುದಕ್ಕೆ ಹಣದ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ.ಎಷ್ಟೇ ದೊಡ್ಡಪ್ರಮಾಣದಲ್ಲೂ ಹಾನಿಯಾದರೂ ಕೂಡಾ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಶಾಸಕ ವೆಂಕಟರಾವ್ ನಾಡಗೌಡ, ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿ ರಾವ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡ ಬಸವರಾಜ, ಶಿವನಗೌಡ ಗೋರೆಬಾಳ, ಮದ್ವರಾಜ ಆಚಾರ್ಯ, ನೀರುಪಾದಪ್ಪ ಜೋಳದರಾಶಿ, ಹನುಮೇಶ ಸಾಲುಗುಂದಾ, ಬಸವರಾಜ ನಾಡಗೌಡ, ಪರಮೇಶಪ್ಪ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್. ಬಿ. ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ಶೈಲಜಾ ಷಡಕ್ಷರಿ, ಮಮತಾ ಹಿರೇಮಠ ಸಿದ್ದು ಹೂಗಾರ, ಸಂಗಮೇಶ ದೇವರಗುಡಿ ಇದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030