ಬಿಜೆಪಿ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆ….!!!

Listen to this article

ಬಿಜೆಪಿ ವಿಭಜನ್ ವಿಭೀಷಿಕ್ ಸ್ಮೃತಿ ದಿವಸ್ ಆಚರಣೆ.

ಸಿಂಧನೂರು : ಅ.14. ಬಿಜೆಪಿ ನಗರ ಮಂಡಲ ವತಿಯಿಂದ ವಿಭಜನ್ ವಿಶ್ಲೇಷಿಕ್ ಸ್ಮೃತಿ ದಿನ ಕಾರ್ಯಕ್ರಮವನ್ನು ಇಂದು ಗಾಂಧಿವೃತ್ತದ ತಹಶೀಲ್ದಾರರ ಕಾರ್ಯಾಲಯದ ಮುಂಭಾಗದಲ್ಲಿ ಆಯೋಜಿಸಲಾಗಿತ್ತು.

ಬ್ರಿಟೀಷರ ದಾಸ್ಯದಿಂದ ನಮ್ಮ ದೇಶವು 1947 ರ ಆಗಸ್ಟ್ 15 ರಂದು ಮುಕ್ತವಾಗಿ ಸ್ವತಂತ್ರ ದೇಶವಾಯಿತು. ಆದರೆ ಸ್ವಾತಂತ್ರ್ಯ ಪಡೆಯಲು ನಮ್ಮ ದೇಶ ತೆತ್ತ ಬೆಲೆ ಅತ್ಯಂತ ಘೋರ. ಸಾವಿರಾರು ವರ್ಷಗಳಿಂದ ಒಂದಾಗಿದ್ದ ನಮ್ಮ ಭೂ ಪ್ರದೇಶದ ಭಾಗವನ್ನು ದಿನ ಬೆಳಗಾಗುವುದರೊಳಗಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಿ, ಬ್ರಿಟಿಷರು ತುಂಡರಿಸಿದರು.

ಬ್ರಿಟೀಷರ ಕುಟೀಲ, ನೀತಿ, ಆಗಿನ ಕಾಂಗ್ರೆಸ್‌ ನಾಯಕರ ಅಧಿಕಾರದ ದುರಾಸೆ ಹಾಗೂ ಮುಸ್ಲಿಂ ಲೀಗಿನ ದೌರ್ಜನ್ಯವು ದೇಶ ವಿಭಜನೆಗೆ ಕಾರಣವಾಯಿತು. ಈ ರೀತಿಯ ಧರ್ಮಾಧಾರಿತ ದೇಶ ವಿಭಜನೆಯಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ, ಸಾವಿರಾರು ಹಿಂದುಗಳ ಮಾರಣಹೋಮ ನಡೆಯಿತು, ಇಂತಹ ಕರಾಳ ಘಟನೆಯು ನಮ್ಮ ದೇಶದ ಇತಿಹಾಸದಲ್ಲಿ ನಡೆದು ಹೋಗಿರುವುದನ್ನು ಮರೆಮಾಚಲು ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿತು. ಇತಿಹಾಸದ ಈ ಘೋರ ಅನ್ಯಾಯದ ಸಂಗತಿಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಮತ್ತು ಸ್ಮರಿಸುವ ಅಗತ್ಯತೆ ಇದೆ.ಅದಕ್ಕಾಗಿ ರಾಷ್ಟ್ರೀಯ ಆಧ್ಯಕ್ಷರಾದ ಜೆ.ಪಿ. ನಡ್ಡಾಜೀ ರವರ ಸೂಚನೆಯ ಮೇರೆಗೆ “ವಿಭಜನ್ ವಿಶ್ಲೇಷಿಕ, ಸ್ಮೃತಿ ದಿವಸ್” ಕಾರ್ಯಕ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ,ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ,ನಿರುಪಾದಪ್ಪ ಜೋಳದರಾಶಿ ನಗರ ಮಂಡಲ ಅಧ್ಯಕ್ಷರು, ಶಿವನಗೌಡ ಗೋರೆಬಾಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ಹನುಮೇಶ ಸಾಲುಗುಂದಾ ಗ್ರಾಮೀಣ ಮಂಡಲ ಅಧ್ಯಕ್ಷರು, ಪರಮೇಶಪ್ಪ, ರಾಮನಗೌಡ ವಕೀಲರು, ಪ್ರೇಮಾ ಸಿದ್ದಾಂತಿ ಮಠ,ಸಂಗಮೆಶ ದೇವರಗುಡಿ ಇನ್ನಿತರ ಮುಖಂಡರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend