ಹರ್ ಘರ್ ತಿರಂಗಾ ಜಾಗೃತಿ ಜಾಥಾದಲ್ಲಿ ಭಾಗವಹಿಸಿ -ಶಾಸಕ ನಾಡಗೌಡ.
ಸಿಂಧನೂರು.ಆ.08.ನಾಲ್ಕು ಸಾವಿರ ಅಧಿಕ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾದ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿ ಗೊಳಿಸಿ ಎಂದು ಶಾಸಕ ವೆಂಕಟರಾವ್ ನಾಡಗೌಡ ಮನವಿ ಮಾಡಿದರು.
ನಗರದ ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುವುದರ ಮೂಲಕ ಅಮೃತ ಮಹೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದು. ಪ್ರತಿಯೊಬ್ಬ ನಾಗರಿಕರ ಹೆಮ್ಮೆಯ ದೇಶದ ಸ್ವಾಭಿಮಾನದ ವಿಷಯವಾಗಿದ್ದು. ಈ ನಿಟ್ಟಿನಲ್ಲಿ ಸರ್ಕಾರವು ಹರ್ ಘರ್ ತಿರಂಗಾ ಜಾರಿ ಮಾಡಿದ್ದು. ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ದೀಪಾ ಅಲಂಕಾರ ಕಡ್ಡಾಯವಾಗಿ ಮಾಡಬೇಕು. ಜೊತೆಗೆ ವ್ಯಾಪಾರಸ್ಥರು, ವರ್ತಕರು, ತಮ್ಮ ಅಂಗಡಿ ಮುಂಗಟ್ಟುಗಳಿಗೆ, ಸ್ವಯಂ ಪ್ರೇರಿತರಾಗಿ ದೀಪಾ ಅಲಂಕಾರ ಮಾಡಿ, ಮೂರು ದಿನಗಳ ಕಾಲ ಧ್ವಜಾರೋಹಣ ನೆರವೇರಿಸಬೇಕೆಂದು ಹೇಳಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ತಿರಂಗ ದ್ವಜಗಳನ್ನು ಖರೀದಿ ಮಾಡಿ ತಮ್ಮ ಮನೆಗಳ ಮೇಲೆ, ತ್ರಿವರ್ಣ ಧ್ವಜವನ್ನು ಮೂರು ದಿನಗಳ ಕಾಲ ಹಾರಿಸಬೇಕು. ಜೊತೆಗೆ ನಿಯಮಗಳ ಅನುಸಾರ ಕಚೇರಿಗಳ ಮೇಲೆ ಬೆಳಿಗ್ಗೆಯಿಂದ ಸಂಜೆಯವರೆಗೆ, ಧ್ವಜಾರೋಹಣ ಮಾಡಬೇಕು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ದಿಂದ 20 ಸಾವಿರ ದ್ವಜಗಳು ಬಂದಿದ್ದು ತಾಲೂಕು ಆಡಳಿತ ಕಛೇರಿಯಲ್ಲಿ 2 ಸಾವಿರ, ತಾಲೂಕು ಪಂಚಾಯತನಲ್ಲಿ 11 ಸಾವಿರ, ನಗರಸಭೆ ಯಲ್ಲಿ 7 ಸಾವಿರ ಲಭ್ಯವಿದ್ದು ಸಾರ್ವಜನಿಕರು ಮೂರು ದಿನಗಳ ಕಾಲ ಹಗಲು ರಾತ್ರಿ ಹಾರಿಸಲು ಅವಕಾಶವಿದ್ದು ನಗರಸಭೆ, ಪೋಸ್ಟ್ ಆಫೀಸ್, ತಾಲೂಕು ಪಂಚಾಯತಿ, ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಧ್ವಜಾರೋಹಣ ಮಾರಾಟ ಮಾಡುತ್ತಿದ್ದು ರೂ.22. ಕೊಟ್ಟು ಸಾರ್ವಜನಿಕರು ತೆಗೆದುಕೊಂಡು ಆಚರಿಸಬೇಕು ಎಂದರು.
ಶುಕ್ರವಾರದಂದು ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಹಿಡಿದು ಡಿಗ್ರಿಯ ವಿದ್ಯಾರ್ಥಿಗಳು ಸೇರಿ, ಸುಮಾರು 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗಾದ ಕುರಿತು ನಗರದ ಗಾಂಧಿ ವೃತ್ತದಿಂದ ಹಿಡಿದು ವಿವಿಧ ವೃತ್ತಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ತಾಲೂಕು ಪಂಚಾಯತಿ ಇಒ ಲಕ್ಷ್ಮಿದೇವಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಟಿಎಚ್ಒ ಡಾ.ಅಯ್ಯನಗೌಡ, ಬಿಇಒ ಶರಣಪ್ಪ ವಟಗಲ್, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಮುಖ್ಯ ಅಧಿಕಾರಿ ವಿಜಯಲಕ್ಷ್ಮಿ, ಶಿವಮಾನಪ್ಪ, ಲಿಂಗನಗೌಡ,ಶಾಂತಕುಮಾರ, ಜೆಸ್ಕಾಂ ಅಧಿಕಾರಿ ಮಲ್ಲಿಕಾರ್ಜುನ, ಹಾಗೂ ಅಶೋಕ ರೆಡ್ಡಿ, ಶಿವಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030