ಸಹಕಾರ ಸಂಘ ರೈತರ ನೆರವಿಗೆ ಬರಲಿ – ಶಾಸಕ ನಾಡಗೌಡ…!!!

Listen to this article

ಸಹಕಾರ ಸಂಘ ರೈತರ ನೆರವಿಗೆ ಬರಲಿ – ಶಾಸಕ ನಾಡಗೌಡ.

ಸಿಂಧನೂರ: ಅ.4 ಸಹಕಾರ ಸಂಘದ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಘ ರೈತರಿಗೆ ನೆರವಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

ತಾಲ್ಲೂಕಿನ  ಹಂಚಿನಾಳಕ್ಯಾಂಪ (ಶಾಂತಿನಗರ)ದಲ್ಲಿ ಸಹಕಾರಿ ನೂತನ ಕಟ್ಟಡ (ಗೋದಾಮು)ಉದ್ಘಾಟಿಸಿ ಮಾತನಾಡಿದ ಅವರು ಸಂಘದ ಹಳೆಯ ಸದಸ್ಯರ ಜೋತೆಗೆ ಹೊಸ ಸದಸ್ಯರಿಗೂ ಸಹ ಸಂಘ ದಿಂದ ಸಾಲ ನೀಡಬೇಕು ಸರ್ಕಾರದಿಂದ ಬಡ್ಡಿಯಿಲ್ಲದೆ ಸಾಲ ಸೌಲಭ್ಯ ಸಿಗಬೇಕು ಅಂದಾಗ ಮಾತ್ರ ರೈತರಿಗೆ ಅನುಕೂಲ ವಾಗುತ್ತದೆ ಎಂದರು.

ರಾಷ್ಟ್ರೀಯ  ಬ್ಯಾಂಕುಗಳಲ್ಲಿ ಗೋಡಾನ ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಕಾರಣದಿಂದ ರೈತರಿಗೆ ಗೋಡಾನ ಸಾಲ ಕೊಡುವುದನ್ನು ಬ್ಯಾಂಕಗಳು ನಿಲ್ಲಿಸಿದರಿಂದ ರೈತರಿಗೆ  ತುಂಬ ತೊಂದರೆಯಾಗಿದೆ. ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸಬಾರದು ಇದರಿಂದ ಸಂಘ ಹಾಳಾಗುತ್ತದೆ ಎಲ್ಲರೂ ಸೇರಿ ಹೊಂದಾಣಿಕೆ ಯಿಂದ ಕೆಲಸ ಮಾಡಿ ಸಂಘವನ್ನು ದೊಡ್ಡದಾಗಿ ಬೆಳೆಸಬೇಕು ಎಂದರು.

ಆರ್.ಡಿ.ಸಿ.ಸಿ ಬ್ಯಾಂಕ ರೈತರಿಗೆ ಸಾಲ ನೀಡುವ ಮೂಲಕ ಅವರ ನೆರವಿಗೆ ಬಂದಿದ್ದು ಇಲ್ಲಿತನಕ 7 ಕೊಟಿ ಸಾಲ ನೀಡಲಾಗಿದೆ ಸಂಘ ಬೆಳವಣಿಗೆಗೆ ಎಲ್ಲಾರ ಸಹಕಾರ ಅಗತ್ಯವಾಗಿದೆ.ಸಂಘ ಬೆಳದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಆರ್.ಡಿ.ಸಿ.ಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾದ ವಿಶ್ವನಾಥ ರೆಡ್ಡಿ ಹೇಳಿದರು.

ಜಗತ್ತಿನಲ್ಲಿ ಅತಿ ಹೆಚ್ಚು ರಸಗೊಬ್ಬರ ಖರೀದಿ ಹಾಗೂ ಟ್ರ್ಯಾಕ್ಟರ ಮಾರಾಟದಲ್ಲಿ ಸಿಂಧನೂರ ತಾಲೂಕು ಪ್ರಥಮ ಸ್ಥಾನ ಪಡೆದು ಕೊಂಡಿದ್ದು ಸಂತೋಷ ಆದರೆ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರವನ್ನು ರೈತರು ಬೆಳೆಗೆಬಳಸುವುದರಿಂದ ಪಂಜಾಬ್ ರಾಜ್ಯದ ನಂತರ ತಾಲ್ಲೂಕಿನ ಭೂಮಿ ಬರಡು ಯಾಗುತ್ತಿರುವದು ನೋವಿನ ಸಂಗತಿ ಯಾಗಿದೆ ಎಂದರು.

ಈ ಸಂದರ್ಭದಲ್ಲಿ ಆರ್.ಡಿ.ಸಿಸಿ ಬ್ಯಾಂಕ ನಿರ್ದೇಶಕರಾದ ಪಂಪನಗೌಡ ಬಾದರ್ಲಿ ಪಿ.ಎಲ್ ಡಿ.ಬ್ಯಾಂಕ ಅಧ್ಯಕ್ಷ ರಾದ ಎಂ.ದೊಡ್ಡ ಬಸವ ರಾಜ ಆರ್.ಡಿಸಿಪಿ ಬ್ಯಾಂಕ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ಬ್ಯಾಂಕಿನ  ಕಾರ್ಯನಿರ್ವಾಹಕ ಅದಿಕಾರಿ ಗಿರಿರೆಢ್ಡಿ ನಬಾರ್ಡ್ ಅಧಿಕಾರಿ ಕಲಾವತಿ ಜಿ.ಸತ್ಯನಾರಾಯಣ ಎನ್.ವಿ.ಸತ್ಯನಾರಾಯಣ ಸಹಕಾರಿ ಸಂಘದ ಅದಿಕಾರಿ ಮಲ್ಲಯ್ಯ ವೆಂಕಟರಮಣ ಶ್ರೀನಿದಿ ಇಂಜನಿಯರ. ಬೀಮನಗೌಡ. ವೆಂಕಟೇಶ. ರಾಮುಲು ಸೇರಿದಂತೆ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend