ಬಾಲಕಿಯರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿ , ಪಾಲಕರ ಮನವಿ…!!!

Listen to this article

ಬಾಲಕಿಯರ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯ ಒದಗಿಸಿ , ಪಾಲಕರ ಮನವಿ.

ಸಿಂಧನೂರು :ಜುಲೈ.23. ನಗರಸಭಾ ವ್ಯಾಪ್ತಿಯಲ್ಲಿ ಬರುವ ಶಿವಜ್ಯೋತಿ ನಗರದಲ್ಲಿ ಬಾಲಕಿಯರ ಮೆಟ್ರಿಕ್ ನಂತರದ ಸರಕಾರಿ ಪರಿಶಿಷ್ಟ ಪಂಗಡದ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇರುವದಿಲ್ಲ, ಮತ್ತು ಈ ವಸತಿ ನಿಲಯಕ್ಕೆ ಹೋಗಿ ಬರಲು ಗಂಗಾವತಿ ಮುಖ್ಯ ರಸ್ತೆಗೆ ದಾರಿ ಇರುವದಿಲ್ಲ, ಇದರಿಂದಾಗಿ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯದಲ್ಲಿ ಸೌಕರ್ಯಗಳು ಇಲ್ಲದೆ ಇರುವದರಿಂದ ತೊಂದರೆಯಾಗಿದ್ದು, ಕುಡಿಯುವ ನೀರಿಗೆ ಪರದಾಡುವದು, ಮತ್ತು ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ರಸ್ತೆ ಎಲ್ಲವೂ ಕೆಸರು ಗದ್ದೆಯಾಗಿದ್ದು,ವಿದ್ಯಾರ್ಥಿನಿಯರಿಗೆ ಕೆಸರಿನ ರಸ್ತೆ ಮೂಲಕ ತಮ್ಮ ವ್ಯಾಸಂಗದ ಸಲುವಾಗಿ ಪ್ರವೇಶ ಪಡೆದುಕೊಂಡಿರುವ ಕಾಲೇಜುಗಳಿಗೆ ಹೋಗಿ ಬರಲು ಸಾಕಷ್ಟು ತೊಂದರೆಯಾಗಿರುತ್ತದೆ.

ಈ ಹಿನ್ನಲೆಯಲ್ಲಿ ಕೂಡಲೇ ತಾವುಗಳು ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ, ನಗರಸಭೆಯಿಂದ ವಿದ್ಯಾರ್ಥಿ ನಿಲಯಕ್ಕೆ ಶುದ್ಧ ಕುಡಿಯುವ ನೀರು ಮತ್ತು ರಸ್ತೆ ನಿರ್ಮಾಣ ಮಾಡಿಕೊಡಲು ನಗರಸಭೆ ಅಧಿಕಾರಿಗಳಿಗೆ ಆದೇಶ ನೀಡಬೇಕು, ಎಂದು ವಿಧ್ಯಾರ್ಥಿಗಳ ಪರವಾಗಿ ಇಂದು ನಗರದ ಪಿ.ಡಬ್ಯ್ಲೂ.ಡಿ. ಕ್ಯಾಂಪಿನ್ ಶಾಸಕರ ನಿವಾಸದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಪಾಲಕರು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ ನಾಡಗೌಡರಲ್ಲಿ ಮನವಿ ಮಾಡಿಕೊಂಡರು.

ಪಾಲಕರು ಮನವಿ ಪತ್ರ ಸಲ್ಲಿಸುವ ಸಂಧರ್ಭದಲ್ಲಿ ಒಂದು ವಾರದೊಳಗೆ ಹಾಸ್ಟೆಲ್ ಸ್ಥಳಾಂತರಿಸಬೇಕು, ಕೋರಿಕೆಯ ಮೇರೆಗೆ ಬಸ್ ನಿಲುಗಡೆ ಮಾಡಬೇಕು, ಕುಡಿಯುವ ನೀರು ಒದಗಿಸಬೇಕು,ವಸತಿ ನಿಲಯದ ಸುತ್ತ ಪೋಲಿಸ್ ಗಸ್ತು ತಿರುಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಶಾಸಕರ ಮಾತಿನಂತೆ ನಡೆದುಕೊಳ್ಳುತ್ತಾರೋ, ಇಲ್ಲವೋ ಕಾದು ನೋಡಬೇಕಾಗಿದೆ.

ಈ ಸಂದರ್ಭದಲ್ಲಿ ಅರುಣ್ ಕುಮಾರ,ಸಣ್ಣಬಸಣ್ಣ ಬಾದರ್ಲಿ, ಮಲ್ಲಯ್ಯ ಮ್ಯಾಕಲ್, ಯಂಕೋಬ ನಾಯಕ ಬೂದಿಹಾಳ, ನಾರಾಯಣಪ್ಪ ದುಮತಿ, ಫಕೀರಪ್ಪ ರಾಮತ್ನಾಳ, ಮಲ್ಲೇಶ ಬೂದಿಹಾಳ, ಅಮರೇಶ ಗೋನ್ವಾರ, ಯಂಕೋಬ ಭೂತಲದಿನ್ನಿ, ಹನುಮಂತ ಪಾಲಕರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend